ಜಿ.ಪಂ. ಸಿಇಒ ಆದೇಶದ ಮೇರೆಗೆ ಮುರುಡೇಶ್ವರದ ಅನಧಿಕೃತ ಗೂಡಂಗಡಿ ತೆರವು

Source: sonews | By Staff Correspondent | Published on 19th September 2019, 11:13 PM | Coastal News | Don't Miss |

ಭಟ್ಕಳ: ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಆದೇಶದ ಮೇರೆಗೆ ಗುರುವಾರದಂದು ಮುರ್ಡೇಶ್ವರದಲ್ಲಿರುವ ಅನಧಿಕೃತ ಗೂಡಾಂಗಡಿ ತೆರವುಗೊಳಿಸಲು ಸ್ಥಳಕ್ಕೆ ತೆರಳಿದ ಕಂದಾಯ ಅಧಿಕಾರಿಗಳು ವ್ಯಾಪಾರಿಗಳ ವಿರೋಧದ ನಡುವೆ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಮುರ್ಡೇಶ್ವರದ ಪುಷ್ಕರಣಿಯ 396/ ಸರ್ವೇ ನಂಬರ ಭಾಗದಲ್ಲಿನ ಅನಧಿಕೃತ ಗೂಡಂಗಡಿ ತೆರವು ಮಾಡಲು ಕಂದಾಯ ಇಲಾಖಾಧಿಕಾರಿಗಳು ಸೂಚನೆ ನೀಡಿದ್ದರು ತೆರವುಗೊಳಿಸದೆ ಇದ್ದರಿಂದ ಇಂದು ಸುಮಾರು ಪೊಲೀಸ ಬಿಗಿ ಬಂದೋಬಸ್ತ್ ಮೂಲಕ ತೆರವುಗೊಳಿಸಿ ಗೂಡಂಗಡಿಕಾರರು

ಕೆಲ ಸಮಯ ಗೊಂದಲಮಯ ವಾತಾವರಣ ಏರ್ಪಡಿಸಿ 1981ರಿಂದಲೂ ಕಂದಾಯ ಇಲಾಖೆಗೆ ನಾವು ದಂಡ ಕಟ್ಟಿಕೊಂಡು ಸಣ್ಣ ಪುಟ್ಟ ಅಂಗಡಿ ಮುಂಗಟ್ಟು ನಡೆಸಿಕೊಂಡು ಜೀವನ ಸಾಗಿಸುತ್ತಾ ಬಂದಿರುತ್ತೇವೆ, ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ ನಾವೆ ಖುದ್ದಾಗಿ ಅಂಗಡಿಗಳನ್ನು ಸ್ಥಳಾಂತರ ಪಡಿಸುತ್ತೇವೆ. 25 ರಿಂದ 30 ವರ್ಷಗಳ ಹಿಂದಿನಿಂದ ಅಂಗಡಿಗಳಿಂದ ಜೀವನ ನಿರ್ವಹಿಸುತ್ತಾ ಬಂದಿದ್ದೇವೆ, ರಸ್ತೆ ಅಗಲೀಕರಣಕ್ಕೆ ಎಷ್ಟೂ ಜಾಗದ ಅವಶ್ಯಕತೆ ಇದೆಯೋ ಅಷ್ಟನ್ನೂ ಬಿಟ್ಟುಕೊಡುತ್ತೇವೆ. ಎಂದು ಪಟ್ಟು ಹಿಡಿದರು.

 

ಸಮಯದಲ್ಲಿ ಅಂಗಡಿಕಾರರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ವಿ.ಪಿ. ಕೊಟ್ರಳ್ಳಿ ಇದು ಕಂದಾಯ ಇಲಾಖೆಯ ಆಸ್ತಿಯಾಗಿದ್ದು, ರಸ್ತೆಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ತೆರವುಗೊಳಿಸಲು ಮಾನ್ಯ ಸಹಾಯಕ ಆಯುಕ್ತರು ಭಟ್ಕಳ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕಾರವಾರ, ಈಗಾಗಲೇ ಸಭೆಗಳನ್ನು ನಡೆಸಿ ತೀರ್ಮಾನ ಕೈಗೊಂಡು ಮುರ್ಡೇಶ್ವರ ಗ್ರಾಮದ ಅಂದವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಸರಕಾರದ ಆಸ್ತಿಯನ್ನು ಅತಿಕೃಮಣ ಮಾಡಿದ ಗೂಡಂಗಡಿಗಳನ್ನು ನ್ಯಾಯಾಲಯದ ಆದೇಶಕ್ಕೆ ಯಾವುದೇ ತೊಡಕಾಗದೆ ಹಂತ ಹಂತವಾಗಿ ಎಲ್ಲಾ ಅನಧಿಕೃತ ಜಾಗಗಳನ್ನು ತೆರವುಗೊಳಿಸುತ್ತೇವೆ ಎಂದರು.

 

Read These Next

ಮಾಜಿ ಶಾಸಕ ಮಾಂಕಾಳರ ನೆರವಿನಿಂದ ಭಟ್ಕಳದಿಂದ ಓಡಿಸ್ಸಾ ಕ್ಕೆ ಪ್ರಯಾಣ ಬೆಳೆಸಿದ 70 ಮೀನುಗಾರರು

ಭಟ್ಕಳ: ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿ ತಮ್ಮ ರಾಜ್ಯಕ್ಕೆ ಮರಳು  ಕಾಯುತ್ತಿದ್ದ ಒಡಿಸ್ಸಾದ 70 ಮೀನುಗಾರರು ಸೋಮವಾರದಂದು ...

ಶಿಕ್ಷಕಿನಿಂದ ಪುರಸಭೆ ಆಸ್ತಿ ಹಾನಿ  ವಿಡಿಯೋ ವೈರಲ್ ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಕ್ರಮಕ್ಕೆ ಆಗ್ರಹ - ಅಸ್ಲಂ

ಶ್ರೀನಿವಾಸಪುರ: ಪಟ್ಟಣದ ವಾರ್ಡ್ ಸಂಖ್ಯೆ 14 ಗಫಾರ್‌ ಖಾನ್‌ ಮೊಹಲ್ಲಾದಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ಕೊಳವೆ ಬಾವಿಗೆ ...