ಉತ್ತರಕನ್ನಡಕ್ಕೆ ಉಡಾನ್ ವಿಮಾನ ನಿಲ್ದಾಣ ಅಂಕೋಲಾಕ್ಕೆ ಹೆಚ್ಚಿನ ಒಲವು ; ಭಟ್ಕಳಿಗರ ಬತ್ತದ ಕನಸು

Source: S O News Service | By V. D. Bhatkal | Published on 14th September 2019, 9:23 PM | Coastal News | State News |

ಭಟ್ಕಳ: ಭಟ್ಕಳದಲ್ಲಿ ಪರಿಸರ ಸ್ನೇಹಿ ಉಡಾನ್ ನಾಗರಿಕ ಸೇವಾ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯ ತೀರ್ಮಾನವನ್ನು ನ್ಯಾಯಾಲಯ ಸರಕಾರದ ನಿರ್ಧಾರಕ್ಕೆ ಬಿಟ್ಟ ನಂತರ ಜಿಲ್ಲೆಯ ಜನರು ಜನಪ್ರತಿನಿಧಿಗಳತ್ತ ದೃಷ್ಟಿ ಹರಿಸಿದ್ದಾರೆ. ಜಿಲ್ಲೆಯ ಮಟ್ಟಿಗೆ ರಕ್ಷಣಾ ಇಲಾಖೆಯ ನೆರವಿನಿಂದ ಅಂಕೋಲಾದಲ್ಲಿಯೇ ವಿಮಾನ ನಿಲ್ದಾಣ ನಿರ್ಮಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಿರುವರಾದರೂ, ಅಲ್ಲಿನ ಜನರ ಅಸಹಕಾರದಿಂದ ಭಟ್ಕಳಿಗರ ಕನಸು ಬತ್ತದೇ ಉಳಿದುಕೊಂಡಿದೆ.

ಕೇಂದ್ರ ಸರಕಾರ ಉಡಾನ್ ಯೋಜನೆಯಡಿ ಈಗಾಗಲೇ 500 ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು, ಕರ್ನಾಟಕದಲ್ಲಿ 15 ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಇವುಗಳಲ್ಲಿ ಉತ್ತರಕನ್ನಡಕ್ಕೂ ಪ್ರಾಶಸ್ತ್ಯ ನೀಡಲಾಗಿದೆ. ಉತ್ತರಕನ್ನಡದಲ್ಲಿ ಎಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಎನ್ನುವ ಪ್ರಶ್ನೆಯನ್ನು ಪದೇ ಪದೇ ಕೇಳಿಕೊಂಡ

ಅಂಕೋಲಾ ಅಲಗೇರಿಯಲ್ಲಿ ನಾಗರಿಕ ವಿಮಾನ ಸೇವೆಗಾಗಿ ಭೂಸ್ವಾಧೀನದ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನಾಗರಿಕ ವಿಮಾನ ನಿಲ್ದಾಣದ ಬಗ್ಗೆ ಸರಕಾರ ಮಟ್ಟದಲ್ಲಿ ತೀರ್ಮಾನವಾಗಬೇಕಿದ್ದು, ಸರಕಾರದ ನಿರ್ಧಾರದನ್ವಯ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ. 
  - ಡಾ.ಹರೀಶಕುಮಾರ ಜಿಲ್ಲಾಧಿಕಾರಿಗಳು

ಜನಪ್ರತಿನಿಧಿಗಳು, ಅಧಿಕಾರಿಗಳು ಅಂತಿಮವಾಗಿ ಅಂಕೋಲಾಕ್ಕೆ ಮುದ್ರೆಯೊತ್ತಿದ್ದಾರೆ. ಕಾರಣ ರಕ್ಷಣಾ ಇಲಾಖೆಯ ಸಿಬರ್ಡ 2ನೇ ಹಂತದ ಕಾಮಗಾರಿಯಲ್ಲಿ ಸೇರಿರುವ ವಿಮಾನ ನಿಲ್ದಾಣ. ಅದನ್ನೇ ಗೋವಾ ಹಾಗೂ ಬೆಳಗಾವಿ ಮಾದರಿಯಲ್ಲಿ ನಾಗರಿಕ ಸೇವೆಗೂ ವಿಸ್ತರಿಸುವುದು ಅವರ ಲೆಕ್ಕಾಚಾರ! ಇದಕ್ಕೆ ಸಂಸದ ಅನಂತಕುಮಾರ ಹೆಗಡೆಯವರ ಒತ್ತಾಸೆಯೂ ಇದೆ ಎನ್ನುವುದು ಅಷ್ಟೇ ಸತ್ಯ. ಈ ನಡುವೆ ಕುಮಟಾದಲ್ಲಿ ವಿಮಾನ ನಿಲ್ದಾಣಕ್ಕೆ ಅರಣ್ಯ ಇಲಾಖೆಯ ಅಪಸ್ವರ ಇದ್ದಿರುವುದರಿಂದ, ಭಟ್ಕಳದ ಜನರು ಸಹಜವಾಗಿ ಆಶಾವಾದವನ್ನು ಹೊಂದಿದ್ದರು. ವಿಮಾನ ನಿಲ್ದಾಣಕ್ಕೆ ಸರಿಹೊಂದುವ ಜಾಗವನ್ನೂ ಗೊತ್ತುಪಡಿಸಿ ಸರಕಾರಕ್ಕೆ ಆದೇಶ ನೀಡುವಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಿದ್ದೂ ಆಯಿತು. ಆದರೆ ನ್ಯಾಯಾಲಯ ಅದರ ಹೊಣೆಗಾರಿಕೆಯನ್ನು ಸರಕಾರಕ್ಕೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಆಗಲೇ ಇಲ್ಲಿನ ಜನರು ಸಂಸದ, ಮಂತ್ರಿಗಳತ್ತ ಮುಖ ಮಾಡಿದರು. ಹೆಚ್ಚಿನ 70 ಹೆಕ್ಟೇರ್ ಭೂಮಿಯನ್ನು ಒದಗಿಸಿ ವಿಮಾನ ನಿಲ್ದಾಣವನ್ನು ನಾಗರಿಕ ಸೇವೆಗೂ ವಿಸ್ತರಿಸಲು ರಕ್ಷಣಾ ಇಲಾಖೆಯನ್ನು ಕೋರಲು ತೀರ್ಮಾನಿಸಲಾಯಿತು. ಯಾವಾಗ ಅಂಕೋಲಾ ಅಲಗೇರಿಯಲ್ಲಿಯೇ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುವುದು ಖಚಿತವಾಯಿತೋ, ಅಲ್ಲಿನ ಜನರು ತಿರುಗಿ ಬಿದ್ದಿದ್ದಾರೆ. ನಾವು ಈಗಾಗಲೇ ನೌಕಾನೆಲೆಯ ಹೆಸರಿನಲ್ಲಿ ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮಗೆ ಈ ಭೂಮಿ ಬಿಟ್ಟರೆ ಬೇರೆ ಕಡೆ ಜಮೀನಿಲ್ಲ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಬೇಡಿ. ನೀವು ನಮ್ಮನ್ನು ಎಬ್ಬಿಸಲು ಮುಂದಾದರೆ ಎಲ್ಲ ತ್ಯಾಗಕ್ಕೂ ಸಿದ್ಧರಿದ್ದೇವೆ. ಈ ಬಾರಿ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ಇದು ಜಿಲ್ಲೆಯ ಬೇರೆ ಭಾಗದ ಜನರಿಗೆ ಸಂತೋಷ ತರಿಸಿದೆಯೋ, ಬೇಸರ ತರಿಸಿದೆಯೋ ಬೇರೆ ಮಾತು! ಆದರೆ ಭಟ್ಕಳದ ಜನರಲ್ಲಿ ಹೊಸ ಉತ್ಸಾಹ ಮೂಡಿದೆ. ಹೇಗಾದರೂ ಅಂಕೋಲಾದಲ್ಲಿ ನಾಗರಿಕ ವಿಮಾನ ನಿಲ್ದಾಣ ರದ್ದಾಗಲಿ. ಕೊನೆಯದಾಗಿ ಉಳಿಯುವುದು ಭಟ್ಕಳವೇ! ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಭಟ್ಕಳಿಗರು ವಿದೇಶಗಳಲ್ಲಿ ನೆಲೆಸಿದ್ದಾರೆ. ಊರಿನ ಹಾದಿ ಹಿಡಿದು ವಿಮಾನದಲ್ಲಿಯೇ ಭಟ್ಕಳವನ್ನು ತಲುಪುವಂತಾಗಲು ಭಟ್ಕಳದಲ್ಲಿಯೇ ವಿಮಾನ ನಿಲ್ದಾಣವಾದರೆ ಒಳಿತು ಎನ್ನುವುದು ಇಲ್ಲಿನ ಜನರ ಹೆಬ್ಬಯಕೆಯಾಗಿದೆ. ಇಲ್ಲಿನ ಜನರು ಇದಕ್ಕಾಗಿ ಅಂಕೋಲಾದತ್ತ ಮುಖ ಮಾಡಿ ಕಾದು ಕುಳಿತಿದ್ದಾರೆ!
 

2025ರ ಒಳಗೆ ಅಂಕೋಲಾದಿಂದ ವಿಮಾನ ಹಾರಲಿದೆ!
ಭಟ್ಕಳ: ಯಾರು ಒಪ್ಪಲಿ, ಬಿಡಲಿ 2025ರ ಒಳಗೆ ಅಂಕೋಲಾದಲ್ಲಿ ಸೀಬರ್ಡ 2ನೇ ಹಂತದ ಕಾಮಗಾರಿಯ ಭಾಗವಾಗಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲು ಇಲಾಖೆ ಸಿದ್ಧತೆಯನ್ನು ಮಾಡಿಕೊಂಡಿದೆ. ಆದರೆ ನಾಗರಿಕ ವಿಮಾನ ಸೇವೆ ಅಷ್ಟು ಸುಲಭವಾಗಿಲ್ಲ. ಹೊಸದಾಗಿ ರನ್‍ವೇಯನ್ನು ನಿರ್ಮಿಸಲು ರಾಜ್ಯ ಸರಕಾರ ಭೂಸ್ವಾಧೀನಪಡಿಸಿಕೊಂಡು ರಕ್ಷಣಾ ಇಲಾಖೆಗೆ ಒದಗಿಸಬೇಕು. ಇದಕ್ಕೆ ಜನರ ಸಹಕಾರವೂ ಅಷ್ಟೇ ಮುಖ್ಯವಾಗಿದೆ. 

ಅಂಕೋಲಾಕ್ಕೆ ಹಿರಿಯ ಅಧಿಕಾರಿಗಳ ಭೇಟಿ
  ಭಟ್ಕಳ: ಅಂಕೋಲಾದಲ್ಲಿ ರಕ್ಷಣಾ ಇಲಾಖೆಯ ವಿಮಾನ ನಿಲ್ದಾಣವನ್ನು ನಾಗರಿಕ ಸೇವೆಗೂ ವಿಸ್ತರಿಸುವ ಸಂಬಂಧ ಹಿರಿಯ ಅಧಿಕಾರಿಗಳು ಸದ್ಯದಲ್ಲಿಯೇ ಅಂಕೋಲಾ ಅಲಗೇರಿಗೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಸಭೆ ನಡೆದಿದ್ದು, ವಸ್ತು ಸ್ಥಿತಿಯ ಅಧ್ಯಯನಕ್ಕೆ ತೀರ್ಮಾನಿಸಲಾಗಿದೆ. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...