ದಾಂಡೇಲಿಯ ಅಂಬೇವಾಡಿ ಸಮೀಪ ಕಾರು ಡಿಕ್ಕಿಯಾಗಿ ಎರಡು ಜಿಂಕೆಗಳು ಸಾವು

Source: so news | Published on 5th October 2019, 7:02 AM | Coastal News | Don't Miss |

ಕಾರವಾರ:ದಾಂಡೇಲಿಯ ಅಂಬೇವಾಡಿ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆನ್ನತ್ತಿ ಬಂದ ನಾಯಿಗಳಿಂದ ತಪ್ಪಿಸಿಕೊಂಡ ಎರಡು ಜಿಂಕೆಗಳು ಕಾರು ಡಿಕ್ಕಿಯಾಗಿ ಮೃತಪಟ್ಟಿವೆ. 
ಒಂದು ಜಿಂಕೆ ಕಾರಿನ ಕೆಳಗೆ ಬಿದ್ದು ಸತ್ತರೆ, ಮತ್ತೊಂದು ಅದನ್ನು ನೋಡಿ ಹೃದಯಾಘಾತವಾಗಿ ಪ್ರಾಣಬಿಟ್ಟಿತು. ಈ ಸಂಬಂಧ ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಮುಲ್ಲಾ ಪ್ರಯಾಣಿಸುತ್ತಿದ್ದ ಬಾಡಿಗೆ ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. 
ಅಂಬೇವಾಡಿ ಸಮೀಪ ಇಳಿಜಾರಿನಲ್ಲಿ ಜಿಂಕೆಗಳನ್ನು ನಾಯಿಗಳ ಹಿಂಡು ಅಟ್ಟಿಸಿಕೊಂಡು ಬಂದಿತ್ತು. ಅವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಜಿಂಕೆಗಳು ಏಕಾಏಕಿ ರಸ್ತೆಗೆ ಧಾವಿಸಿದವು. ಆಗ ಒಂದು ಜಿಂಕೆಗೆ ಕಾರು ಡಿಕ್ಕಿಯಾಯಿತು. ಜಿಂಕೆಯ ಹೃದಯ ಅತ್ಯಂತ ಸೂಕ್ಷ್ಮವಾಗಿರುತ್ತದೆ. ತನ್ನ ಜೊತೆಗಿದ್ದ ಜಿಂಕೆ ಮೃತಪಟ್ಟಿದ್ದನ್ನು ನೋಡಿದ ಮತ್ತೊಂದಕ್ಕೆ ಹೃದಯಾಘಾತವಾಯಿತು’ಎಂದು ದಾಂಡೇಲಿಯ ವಲಯ ಅರಣ್ಯಾಧಿಕಾರಿ ಅಶೋಕ್ ಮಾಹಿತಿ ನೀಡಿದರು.
ಎರಡೂ ಜಿಂಕೆಗಳಿಗೆ ಸುಮಾರು ಎರಡು ವರ್ಷ ಪ್ರಾಯ ಇರಬಹುದು. ಅವುಗಳ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಾರು ಚಾಲಕ ಸಂಜೀವಕುಮಾರ್‌ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದೂ ತಿಳಿಸಿದರು.

Read These Next

ಪತ್ರಕರ್ತರ ಅವಹೇಳನ;; ಕುಮಟಾ ಶಾಸಕ ದಿನಕರ್ ಶೆಟ್ಟಿ ಯವರ ಮೇಲೆ ಕ್ರಮ ಜರಗಿಸುವಂತೆ ಆಗ್ರಹ

ಶಿರಸಿ : ಜಿಲ್ಲೆಯ ಪತ್ರಕರ್ತರ ಕುರಿತು ಕುಮಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಕುಮಟಾದ ಶಾಸಕರಾದ ದಿನಕರ ...

ಸಾರ್ವಜನಿಕ ಗಣೇಶೋತ್ಸವದ ಮೇಲೆ ಕೋವಿಡ್ ಕರಿ ನೆರಳು; ಮನೆ ಹಾಗೂ ಮಂದಿರಗಳಲ್ಲಿ ಮಾತ್ರ ಗಣೇಶನ ಪ್ರತಿಷ್ಠಾಪನೆ

ಕಾರವಾರ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಮತ್ತು ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...