ಅರಣ್ಯ ಹಕ್ಕು ಮಂಜೂರಿ-ಕಾನೂನಾತ್ಮಕ ಚಿಂತನ ಕಾರ್ಯಾಗಾರ ಯಶಸ್ವಿ

Source: sonews | By Staff Correspondent | Published on 11th May 2019, 5:30 PM | Coastal News | Don't Miss |

ಭಟ್ಕಳ: ಅರಣ್ಯದಲ್ಲಿ ವಾಸಿಸುವವರಿಗೆ, ಆದಿವಾಸಿಗಳಿಗೆ ಸುಮಾರು 150 ವರ್ಷಗಳ ಹಿಂದೆ ಬ್ರಿಟೀಷರು ತಂದ ಅರಣ್ಯ ಕಾಯಿದೆಯಿಂದಾಗಿ ಅಭದ್ರತೆ ಕಾಡತೊಡಗಿತು, ಅವರನ್ನ ಒಕ್ಕಲೆಬ್ಬಿಸಲು ಪ್ರಾರಂಭಿಸಲಾಯಿತು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ ಹೇಳಿದರು. 

ಅವರು ಅರಣ್ಯ ಹಕ್ಕು ಮಂಜೂರಿ-ಕಾನೂನಾತ್ಮಕ ಚಿಂತನ ಕಾರ್ಯಾಗಾರ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರಗೊಂಡ ಅರ್ಜಿಗಳ ಪುನರ್ ಪರಿಶೀಲನಾ ಮಾರ್ಗಸೂಚಿ ಮಾಹಿತಿ ಜಿಲ್ಲಾ ಮಟ್ಟದ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯ ರಾಮನಾಥ ಶ್ಯಾನಭಾಗ್ ಸಭಾಂಗಣದಲ್ಲಿ ಎರ್ಪರಿಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಸಿದ್ದ ಜನರನ್ನುದ್ದೇಶಿಸಿ ಅರಣ್ಯ ಅತಿಕ್ರಮಣದಾರರಿಗೆ ಧೈರ್ಯ ತುಂಬಿದ ಅವರು ಯಾವುದೇ ಕಾರಣಕ್ಕೂ ಅರಣ್ಯದಲ್ಲಿ ವಾಸಿಸುವವರನ್ನು ಒಕ್ಕಲೆಬ್ಬಿಸಲಾಗದು. 75 ವರ್ಷಗಳ ಸಾಕ್ಷ ಪೂರೈಸಬೇಕು ಎನ್ನುವುದು ಕಾಯಿದೆಯಲ್ಲಿಯೇ ಇಲ್ಲ, ಅಗತ್ಯವಿದ್ದರೆ ಅರಣ್ಯ ಇಲಾಖೆಯವರು ಆ ಪ್ರದೇಶದಲ್ಲಿ ಹೂತಿದ್ದ ಮೃತ ದೇಹಗಳ ಮೂಳೆಗಳನ್ನು ಪರೀಕ್ಷಿಸಿ ಕಂಡು ಕೊಳ್ಳಲಿ ಎಂದು ವ್ಯಂಗ್ಯವಾಡಿದರು. 
ಸರಕಾರ ಯಾವಾಗ ಅರಣ್ಯದಲ್ಲಿ ಲಾಭವಿದೆ, ಸರಕಾರಕ್ಕೆ ಹಣ ಬರುತ್ತದೆ ಎಂದು ಕಂಡುಕೊಂಡಿದೆ ಅಂದಿನಿಂದಲೇ ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೆ ಅಭದ್ರತೆಯು ಕಾಡತೊಡಗಿತ್ತು.   2006ರಲ್ಲಿ ಸರಕಾರ ಅರಣ್ಯ ಹಕ್ಕು ಕಾಯಿದೆಯನ್ನು ತಂದಿರುವುದು ಅರಣ್ಯ ವಾಸಿಗಳು, ಆದಿ ವಾಸಿಗಳು, ಬುಡಕಟ್ಟು ಜನಾಂಗದವರನ್ನು ರಕ್ಷಿಸಲಿಕ್ಕಾಗಿಯೇ ಇದೆ. ನಮ್ಮ ದೇಶದ ಸಂವಿಧಾನ ಜಗತ್ತಿನ ಅತ್ಯಂತ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನ ಎಲ್ಲಾ ರೀತಿಯ ಹಕ್ಕುಗಳನ್ನು ಪ್ರತಿಯೋರ್ವ ಪ್ರಜೆಗೂ ಸಮಾನವಾಗಿ ನೀಡಿದೆ. ಮೂಲಭೂತ ಹಕ್ಕುಗಳನ್ನು ಕೂಡಾ ಸಮಾನವಾಗಿ ನೀಡಿದೆ.  ಮಹಿಳೆಯರಿಗೂ ಕೂಡಾ ಸಮಾನವಾದ ಹಕ್ಕುಗಳನ್ನು ನೀಡಿದೆ. ಆದರೆ ಇನ್ನೂ ನಮ್ಮ ದೇಶದಲ್ಲಿ ಹಸಿವೆ, ಅಭದ್ರತೆ, ಹಿಂಸೆ ಇದ್ದರೆ ಅದಕ್ಕೆ ಕಾರಣ ನಮ್ಮ ಸಂವಿಧಾನವನ್ನು ಅನುಷ್ಟಾನಗೊಳಿಸುವವರೇ ಕಾರಣರಾಗಿದ್ದಾರೆ. ನಾವು ನಮ್ಮ  ನಮ್ಮ ಸರಕಾರಗಳು ಸಂವಿಧಾನದಂತೆ ನಡೆದುಕೊಂಡರೆ ಯಾವುದೇ ಸಮಸ್ಯತೆ ಉದ್ಭವಿಸದು ಎಂದರು. 

ಅರಣ್ಯ ವಾಸಿಗಳು ಕಾನೂನು ಬದ್ಧವಾಗಿ ಹೋರಾಟ ಮಾಡುವುದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದ ಅವರು ಬದುಕಿಗಾಗಿ, ಅನ್ಯಾಯದ ವಿರುದ್ಧ, ಹಸಿವಾಗಿ ಮಾಡುತ್ತಿರುವ ನಿಮ್ಮ ಹೋರಾಟಕ್ಕೆ ಜಯ ದೊರೆಯಲಿ ಎಂದೂ ಹಾರೈಸಿದರು. 

ನಮ್ಮಲ್ಲಿಯ ಅರಣ್ಯ ಕಡಿಮೆಯಾಗಲಿಕ್ಕೆ ಆದಿವಾಸಿಗಳು ಕಾರಣರಲ್ಲ, ಅರಣ್ಯ ವಾಸಿಗಳಲ್ಲ ಕಾರಣರಲ್ಲ ಈ ರೀತಿಯ ವರದಿಯನ್ನು ಸರಕಾರಕ್ಕೆ ಯಾರೂ ಕೂಡಾ ನೀಡಿಲ್ಲ.  ಅರಣ್ಯ ಕಡಿಮೆಯಾಗುವುದಕ್ಕೆ ಪ್ರವಾಹ, ಕಾಡಿನಲ್ಲಿ ಬರುವ ರೋಗಗಳು, ಬರಗಾಲ, ಕಾಡಿನ ಬೆಂಕಿ, ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ರೈಲ್ವೇ ಮಾರ್ಗ ವಿಸ್ತರಣೆ, ರಸ್ತೆಗಳ ಅಗಲೀಕರಣ, ಅರಣ್ಯ ಅಧಿಕಾರಿಗಳೂ ಸ್ವಲ್ಪ ಮಟ್ಟಿಗೆ ಕಾರಣರಾಗಿದ್ದಾರೆ ಎಂದರು. ಅಮೇಜಾನ್ ಕಾಡಿನಲ್ಲಿ ಅರಣ್ಯ ನಾಶಕ್ಕೆ ನಮ್ಮ ಆಹಾರ ಪದ್ಧತಿಯೂ ಕಾರಣವಾಗಿದೆ ಎಂದ ಅವರು ದೇಶದ ಒಂದು ಕಂಪೆನಿಯು ರೈತರಿಗೆ ಆಮಿಷವೊಡ್ಡಿ ಕಾಡಿನಲ್ಲಿ ಸೋಯಾ, ಮುಸುಕಿನ ಜೋಳ, ಜೋಳವನ್ನು ಬೆಳೆಯಲು ಪ್ರೇರೇಪಿಸುವುದೇ ಕಾರಣವಾಗಿದೆ. ಕಳೆದ ವರ್ಷ ಅಮೇಜಾಜ್ ಕಾಡೊಂದರಲ್ಲಿಯೇ 25 ಲಕ್ಷ ಎಕ್ರೆ ಅರಣ್ಯ ನಾಶವಾಗಿದೆ ಎಂದೂ ಹೇಳಿದರು. ಸರಕಾರಕ್ಕೆ ಕಾಡನ್ನು ರಕ್ಷಿಸುವ ಮನಸ್ಸಿದ್ದರೆ, ಈ ಮೇಲಿನವುಗಳನ್ನು ನಿಯಂತ್ರಿಸಲಿ, ಅದನ್ನು ಬಿಟ್ಟು ಕಾಡನ್ನು ರಕ್ಷಿಸುತ್ತಿರುವವರನ್ನು ಹಿಂಸಿಸುವುದು ಸರಿಯಲ್ಲ ಎಂದರು. 

ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರನಾಥ ನಾಯ್ಕ, ತಾಲೂಕಾ ಅಧ್ಯಕ್ಷ ರಾಮಾ ಮೊಗೇರ, ತಂಜೀಂ ಪ್ರಧಾನ ಕಾರ್ಯದರ್ಶಿ ಎಂ.ಜೆ.ಅಬ್ದುರ್ ರಖೀಬ್, ಇನಾಯತುಲ್ಲಾ ಶಾಬಂದ್ರಿ ಮಾತನಾಡಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...