ಪ್ರವಾಸಿ ತಾಣಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಲು ವಿಪುಲ ಅವಕಾಶಗಳಿವೆ: ಸಚಿವ ಸಿ.ಟಿ.ರವಿ

Source: so news | Published on 10th September 2019, 12:05 AM | State News | Don't Miss |


ಮಂಡ್ಯ: ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳು ಹಾಗೂ ಪಾರಂಪರಿಕ ಕೃಷಿ ಅವಲಂಭಿತ ಹಳ್ಳಿಗಳಿರುವುದರಿಂದ ಪ್ರವಾಸಿ ತಾಣಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಲು ವಿಪುಲ ಅವಕಾಶಗಳಿವೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತ್ತಿಸಲಾಗಿದೆ. ಅವುಗಳಲ್ಲಿ ಪ್ರಾಕೃತಿಕ ಸಂಪತ್ತು ಹೊಂದಿರುವ ಪ್ರವಾಸಿ ಕೇಂದ್ರಗಳಿದ್ದಾವೆ. ಕೊಕ್ಕರೆ ಬೆಳ್ಳೂರಿಗೆ ವಿಶ್ವದ ಬಹುತೇಕ ಭಾಗಗಳಿದಂದ ಪಕ್ಷಗಳು ಬರುತ್ತವೆ. ಶ್ರೀರಂಗಪಟ್ಟಣದ ಸುತ್ತ ಅನೇಕ ತಾಣಗಳಿವೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಕೃಷಿಯನ್ನೇ ಅವಲಂಭಿತ ವಾಗಿರುವಂತ ಹಳ್ಳಿಗಳಿ ಜೀವಂತವಾಗಿವೆ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ವಿಫುಲ ಅವಕಾಶಗಳಿವೆ ಎಂದು ಹೇಳಿದರು.
ಬೆಂಗಳೂರಿನಿಂದ ಕೊಡಗು, ಮೈಸೂರಿಗೆ ದೊಡ್ಡ ಪ್ರಮಾಣದಲ್ಲಿ ಜನ ಬರುತ್ತಾರೆ. ಅವರು ಮಂಡ್ಯದಲ್ಲಿ ಬಂದು ನೋಡುವ ಸ್ಥಳಗಳನ್ನು ಪರಿಚಯಿಸಿದರೆ ಪ್ರವಾಸಿ ಗರನ್ನು ಸೆಳೆಯಬಹುದು. ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರ ಪ್ರವಾಸಿ ಕ್ಷೇತ್ರ. ಮಲೇಶಿಯಾ ಹಾಗೂ ಸಿಂಗಾಪುರ್‍ನಂತ ಚಿಕ್ಕ ಚಿಕ್ಕ ದೇಶಗಳು ಕೃತಕವಾಗಿ ತಯಾರು ಮಾಡಿ ಜನರನ್ನು ಆಕರ್ಷಣೆ ಮಾಡುತ್ತಿದ್ದಾರೆ. ದುಬೈಯನ್ನು ಇಂಟರ್ ನ್ಯಾಷನಲ್ ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಮುಂದಾಗಿದೆ. ನಮ್ಮಲ್ಲಿ ಎಲ್ಲವೂ ಇದ್ದು ಅದನ್ನು ಸರಿಯಾಗಿ ಬಳಸಿ ಕೊಳ್ಳುವಂತಹ ಯೋಜನೆ ರೂಪಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ 66 ಪ್ರವಾಸಿ ಕೇಂದ್ರಗಳಿದ್ದು ಅವುಳನ್ನು ಅಭಿವೃದ್ಧಿ ಪಡಿಸಲು 88ಕೋಟಿ ಹಣ ಮಂಜೂರಾಗಿದೆ. ಅದನ್ನು ಪರಿಶೀಲನೆ ಮಾಡಲಾಗಿದೆ. ಪಿಪಿ ಮಾದರಿಯಲ್ಲಿ ಖಾಸಗಿ ಬಂಡವಾಳದ ಹೂಡಿಕೆಗೆ ಅವಕಾಶ ನೀಡಲಾಗಿದೆ. ಸುಸ್ಥಿರವಾದ ಪ್ರವಾಸ ಮಂದಿರಗಳ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಜಿಲ್ಲಾಧಿ ಕಾರಿಗಳಿಗೆ ಯೋಜನೆ ರೂಪಿಸುವಂತೆ ಸೂಚಿಸಲಾ ಗಿದೆ ಎಂದರು.
ಕೇರಳದಲ್ಲಿ ಸೆ.16ರಂದು ಗ್ಲೋಬಲ್ ಟೂರಿಸಂ ಇನ್‍ವೆಸ್ಟರ್ ಮೀಟ್‍ನ್ನು ಕರೆಯಲಾಗಿದೆ. ಈ ಸಭೆಗೆ ನಾನೂ ಸಹ ಪಾಲ್ಗೊಳ್ಳಲಿದ್ದೇನೆ. ಕೇರಳಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹೆಚ್ಚು ಅವಕಾಶಗಳಿಗವೆ. ಅವರು ಚೆನ್ನಾಗಿ ಮಾರ್ಕೇಟ್ ಮಾಡಿದ್ದಾರೆ ನಾವು ಇನ್ನೂ ಪ್ರಯತ್ನ ಮಾಡಬೇಕಿದೆ. ಅವರು ಯಾವ ರೀತಿ ಮಾಡುತ್ತಾರೆ ಎಂಬುದನ್ನು ನೋಡಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಮಾಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುತ್ತವೆ ಎಂದು ಅವರು ತಿಳಿಸಿದರು.
ಜಿಲ್ಲೆಗೆ 2009-10 ರಿಂದ ಇದುವರೆಗೂ 579 ಟ್ಯಾಕ್ಸಿಯನ್ನ ಸಬ್ಸಿಡಿ ದರದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ನಾವು 3 ಲಕ್ಷ ರೂ ಕೊಟ್ಟಿದ್ದೇವೆ. ಸುಮಾರು 12 ಕೋಟಿ ರೂ ಸಹಾಯಧನವನ್ನ ಅವರ ಅಭಿವೃದ್ಧಿಗೆ ಕೊಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಂದು ಡಿಮ್ಯಾಂಡ್ ಸರ್ವೆ ಮಾಡಿ, ಈ ಸರ್ವೆಯಲ್ಲಿ ಮುಂದಿನ ಯೋಜನೆಯನ್ನ ರೂಪಿಸುವುದಕ್ಕೆ ಹಾಗೂ ಜನಸಾಮಾನ್ಯರು ಸ್ವಾವಲಂಬಿಗಳಾಗಿ ಸಾಲಗಾರನಾಗದೇ ಇದರಿಂದ ಪ್ರವಾಸೋದ್ಯಮ ಇಲಾಖೆಗೂ ಸಹಾಯವಾಗುವ ನಿಟ್ಟಿನಲ್ಲಿ ಬದುಕು ನಡೆಸಲು ಡಿಮ್ಯಾಂಡ್ ಸರ್ವೇಗೆ ಸೂಚನೆ ನೀಡಲಾಗಿದೆ ಎಂದರು. 
ನಮ್ಮ ಜನಪದ ಮೂಲ ಸಂಸ್ಕøತಿಯನ್ನಾ ಹೆಚ್ಚು ಪತ್ರಿಬಿಂಬಿಸುವ ನಿಟ್ಟಿನಲ್ಲಿ ಹಾಗೂ ಪತ್ರಿಯೊಬ್ಬರಿಗೂ ತಮ್ಮ ಮೇಲೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಕøತಿಯನ್ನ ಪ್ರಚುರಪಡಿಸಬೇಕು. ಜನರಿಗೆ ಕೆಲವೊಂದು ಪ್ರಾತ್ಯಕ್ಷಿಕೆಗಳನ್ನು ತೋರಿಸುವ ಮೂಲಕ ಕೃಷಿ ಬದುಕಿನ ಪ್ರೀತಿಸುವಂತೆ ಮಾಡಬೇಕು. ಇದಕ್ಕೆ ಸೂಕ್ತವಾದ ಸ್ಥಳ ಮಂಡ್ಯವಾಗಿದೆ. ಹಾಗೆಯೇ ಹಳ್ಳಿ ಪ್ರವಸೋದ್ಯಮವನ್ನಾ ಅಭಿವೃದ್ಧಿಪಡಿಸೊದಕ್ಕೆ ಕೆಲವೊಂದು ಯೋಜನೆ ಸಲಹೆಯನ್ನು ನೀಡಲಾಗಿದ್ದು, ದಸರಾದ ಮುಂಚಿತವಾಗಿಯೇ ಆ ಯೋಜನೆಯನ್ನು ಒಂದು ಹಳ್ಳಿಯನ್ನು ಪ್ರಯೋಗಿಕವಾಗಿ ತೆಗೆದುಕೊಂಡು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಯಾದ ಡಾ.ಎಂ.ವಿ.ವೆಂಕಟೇಶ್, ಶಾಸಕರಾದ ಪುಟ್ಟರಾಜು, ಎಂ.ಶ್ರೀನಿವಾಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...