ಭಟ್ಕಳದಲ್ಲಿ ಹಾಡುಹಗಲೆ ಮನೆ ಕಳುವು; 25ಸಾವಿರ ನಗದು ದೋಚಿ ಪರಾರಿ

Source: sonews | By Staff Correspondent | Published on 26th January 2018, 11:23 PM | Coastal News | Don't Miss |

ಭಟ್ಕಳ: ಭಟ್ಕಳದಲ್ಲಿ ಈಗ ಕಳ್ಳತನ ಮಾಡುವುದು ಅತ್ಯಂತ ಸರಳ ಹಾಗೂ ಸುಲಭ ಕಾರ್ಯವಾಗಿದ್ದು ಇದುವರೆಗೆ ರಾತ್ರಿವೇಳೆ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಹಗಲು ಹೊತ್ತಿನಲ್ಲೆ ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದಾರೆ.
ಇಲ್ಲಿನ ಬಂದರ್ ರಸ್ತೆಯ ಒಂದನೆ ಕ್ರಾಸ್ ನಲ್ಲಿರುವ ಮನೆಯೊಂದರಲ್ಲಿ ಗುರುವಾರ ಸಂಜೆ 5ಗಂಟೆ ಸುಮಾರು ಮನೆಯೊಂದನ್ನು ಹೊಕ್ಕ ಕಳ್ಳರು ಮನೆಯಲ್ಲಿದ್ದ ಸುಮಾರು 25ಸಾವಿರು ರೂ ನಗದು ದೋಚಿ ಪರಾರಿಯಾಗಿದ್ದಾರೆಂದು ವರದಿಯಾಗಿದೆ. 
ಅಬು ಬಹಾರ್ ಹೌಸ್ ನ ಮನೆಯಲ್ಲಿರುವ ಸದಸ್ಯರು ಸಂಜೆ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ ಎನ್ನಲಾಗುತ್ತಿದೆ.  
ಇತ್ತಿಚೆಗ ಭಟ್ಕಳದಲ್ಲಿ ಕಳ್ಳರು ಬೀಗ ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದು ಕೆಲ ಮನೆಗಳಿಂದ ಬರಿಗೈಯಲ್ಲಿ ಮರಳಿದರೆ ಮತ್ತೇ ಕೆಲ ಮನೆಗಳಲ್ಲಿದ್ದ ಬೆಲೆಬಾಳುವ ವಸ್ತು, ಹಣ, ಒಡವೆಗಳನ್ನು ದೋಚಿಕೊಂಡಿದ್ದಾರೆ. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ. ಇದರಿಂದಾಗಿ ಪತ್ರಿಕೆಗಳಲ್ಲೋ ವರದಿಯಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಕೊರಗಾಗಿದೆ. 
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...