ಸಾರ್ವಜನಿಕ ಸಂಸ್ಥೆಗಳ ಘನತೆ

Source: sonews | By Staff Correspondent | Published on 8th July 2019, 10:52 PM | National News | Special Report | Don't Miss |

-ಗೋಪಾಲ್ ಗುರು

ರಾಜಕೀಯ ವಲಯದಲ್ಲಿ ಅವಮಾನ ಎಂಬ ಪದದ ಬಳಕೆ ಕೆಲವೊಮ್ಮೆ ಕುತೂಹಲ ಹುಟ್ಟಿಸುವಂತಿರುತ್ತದೆ. ಅಂಥ ಪದಗಳನ್ನು ಸಾರ್ವಜನಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಆದರೆ ಸಂಸ್ಥೆಯ ಅಧಿಕಾರ ಸ್ಥಾನದಲ್ಲಿರುವವರು ನೇಪಥ್ಯದಲ್ಲಿರುತ್ತಾರೆ. ಪ್ರಧಾನಿಗಳು ನೈತಿಕವಾಗಿ ನೋವು ಕೊಡುವ ಅಪಮಾನದ ಭಾವನೆಗೂ ಮತ್ತು ಅಮಾಯಕ ಜಾರ್ಖಂಡ್ ಸರ್ಕಾರಕ್ಕೂ ಸಂಬಂಧ ಕಲ್ಪಿಸಿ ಮಾತನಾಡುವಾಗ ಬಗೆಯ ಭಾಷೆಯನ್ನು ಬಳಸಿದ್ದಾರೆ. ಇದು ಒಂದು ಆಸಕ್ತಿದಾಯಕವಾದ ಪರಿಶೀಲನೆಗೆ ಎಡೆಮಾಡಿಕೊಡುತ್ತದೆ. ಮೊದಲನೆಯದು ಸಾರ್ವಜನಿಕ ಸಂಸ್ಥೆಗಳನ್ನು ಅಪಮಾನಿಸಬಹುದೇ? ಎರಡನೆಯದು ಸಾರ್ವಜನಿಕ ಸಂಸ್ಥೆಗಳಿಗೆ ಅಪಮಾನ ಮಾಡಲಾಗಿದೆಯೆಂಬ ಆಪಾದನೆಗಳು ಯಾವ ನೆಲೆಯಲ್ಲಿ ನೈತಿಕವಾಗಿ ಮಾನ್ಯಗೊಳ್ಳುತ್ತವೆ?

ಹಾಗೆ ನೋಡಿದರೆ, ಸಾರ್ವಜನಿಕ ಸಂಸ್ಥೆಗಳಿಗೆ ಅಪಮಾನದ ಭಾವನೆಯು ಉಂಟಾಗುವಂತೆ ಮಾಡುವ ನೈತಿಕ ಸಂವೇದನಾಶಿಲತೆಯು ಅಂತರ್ಗತವಾಗಿದೆಯೆಂದು ಹೇಳಲಾಗುವುದಿಲ್ಲ. ಏಕೆಂದರೆ ಅವು ಕೇವಲ ಭೌತಿಕ ಸ್ಥಾವರಗಳಷ್ಟೆ. ಹಾಗೆಯೇ ಸಾಂಸ್ಥಿಕ ಪ್ರಕ್ರಿಯೆಗಳು ಕೂಡಾ ಮಾನವ ಸಹಜವಾದ ಅಪಮಾನಕ್ಕೊಳಗಾಗುತ್ತವೆಂದು ಹೇಳುವುದು ಹಾಸ್ಯಾಸ್ಪದವಾದರೂ ಪ್ರಕ್ರಿಯೆಗಳನ್ನೂ ಮನುಷ್ಯರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಖಂಡಿತಾ ಇರುತ್ತದೆ. ಅಷ್ಟು ಮಾತ್ರವಲ್ಲ, ಎಂಥಾ ವ್ಯಕ್ತಿಗಳು ಪ್ರಕ್ರಿಯೆಗಳನ್ನು ನಿಭಾಯಿಸುತ್ತಿದ್ದಾರೆ ಎಂಬುದನ್ನು ಆಧರಿಸಿ ಪ್ರಕ್ರಿಯೆಗಳು ತುಂಬಾ ಅಪಮಾನಕಾರಿಯಾಗಿ ಇರಬಲ್ಲವು ಎಂಬುದನ್ನೇನು ನಿರಾಕರಿಸಲಾಗುವುದಿಲ್ಲ. ಹೀಗಾಗಿ ಸಾರ್ವಜನಿಕ ಸಂಸ್ಥೆಗಳು ಯಾವುದೇ ಒಬ್ಬ ವ್ಯಕ್ತಿಗೆ ಸೇರಿದವಲ್ಲವಾದ್ದರಿಂದ ಅವುU ಸಾರ್ವಜನಿಕ ಸ್ವರೂಪವು ಅವಕ್ಕೆ ಅಮೂರ್ತ ಸ್ವಭಾವವನ್ನು ಒದಗಿಸುತ್ತವೆ. ಸಾರ್ವಜನಿಕ ಸಂಸ್ಥೆಗಳ ಎರಡು ಆಯಾಮಗಳಿಂದಾಗಿ ಒಂದು ಸಂಸ್ಥೆಯ ಜೊತೆಗೆ ಅವಮಾನದ ಭಾವನೆಯನ್ನು ಬೆಸೆದು ಭಾವಿಸಲಾಗುವುದಿಲ್ಲ. ಹೀಗೆ ಒಂದು ಸಾರ್ವಜನಿಕ ಸಂಸ್ಥೆಯ ಜೊತೆಗೆ ಅವಮಾನದ ಭಾವವನ್ನು ಸೇರಿಸಲು ಅಸಾಧ್ಯವಾಗಿರುವಾಗ ಸರ್ಕಾರಕ್ಕೆ ಅವಮಾನವಾಯಿತು ಎಂಬ ಪ್ರತಿಪಾದನೆಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ಸಂಪೂರ್ಣವಾಗಿ ವ್ಯಕ್ತೀಕರಣಗೊಳ್ಳುವ ಪ್ರಕ್ರಿಯೆಗೆ ಒಳಗಾದ ಸಂದರ್ಭದಲ್ಲಿ ಮಾತ್ರ ಒಂದು ಸಂಸ್ಥೆಗೆ ಅವಮಾನವಾಯಿತೆಂದು ಭಾವಿಸಲು ಸಾಧ್ಯ. ಅಥವಾ ಒಂದು ಸಾಂಸ್ಥಿಕ ಅಧಿಕಾರವನ್ನು ಒಬ್ಬ ವ್ಯಕ್ತಿಯ ಜೊತೆಗೆ ಅಥವಾ ಒಂದು ಗುಂಪಿನ ಜೊತೆಗೆ ಸಂಪೂರ್ಣವಾಗಿ ಸಮೀಕರಿಸಿದಾಗ ಮಾತ್ರ ಅವಮಾನವಾಯಿತೆಂದು ಹೇಳಲು ಸಾಧ್ಯ. ಆಗ ಮಾತ್ರ ಒಬ್ಬ ವ್ಯಕ್ತಿಯ ನಕಾರಾತ್ಮಕ ಭಾವನೆಯಾದ ಅಪಮಾನ ಅಥವಾ ಸಕಾರಾತ್ಮಕ ಭಾವನೆಯಾದ ಗೌರವಗಳು ಸಂಸ್ಥೆಯ ಮೇಲೆ ಆರೋಪಿತವಾಗುತ್ತವೆ. ಆರ್ಥದಲ್ಲಿ ಅಪಮಾನದ ಭಾಷೆಗಳು ಸಂಸ್ಥೆಯೊಂದಕ್ಕೆ ಅನ್ವಯವಾಗುತ್ತವೆ. ಅಂಥಾ ಸಂಸ್ಥೆಗಳು ನೈತಿಕ ಹೆಗ್ಗಳಿಕೆಗಳ ಪ್ರತಿಪಾದನೆಯನ್ನು ಮಾಡುವ ಸಾರ್ವಜನಿಕ ವ್ಯಕ್ತಿಗಳ ವಿಸ್ತರಣೆಯಾಗಿರುತ್ತವಷ್ಟೆ.

ಆದರೆ ಸಂಸ್ಥೆಗಳಿಗೆ ಅವಮಾನ ಮಾಡಲಾಗುತ್ತಿದೆ ಎಂಬ ಪ್ರತಿಪಾದನೆಗಳು ಅಪೂರ್ಣವಾಗಿರುತ್ತದೆ ಮತ್ತು ಅಪರಿಪಕ್ವವಾಗಿರುತ್ತವೆ. ಒಂದು ಬಲವಾದ ಕಾರಣಗಳನ್ನು ಆಧರಿಸಿದಾಗ ಮಾತ್ರ ಅವು ಪೂರ್ಣವೂ ಮತ್ತು  ಮಾನ್ಯವೂ ಆಗುತ್ತವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ , ಉತ್ತಮ ಆಡಳಿತದ ವಿಷಯದಲ್ಲಿ ಸಾಪೇಕ್ಷವಾಗಿ ಒಳ್ಳೆಯ ಹೆಸರಿರುವ ಸರ್ಕಾರವೊಂದರ ಮೇಲೆ ಅವಮಾನವೆಂಬುದು ನ್ಯಾಯೋಚಿತವಲ್ಲದ ನೈತಿಕ ಆರೋಪವಾಗಿರುತ್ತದೆ. ನ್ಯಾಯೋಚಿತವಲ್ಲದ ಆರೋಪವು ಸರ್ಕಾರವು ಮಾಡುತ್ತಿರುವ ಒಳ್ಳೆಯ ಕೆಲಸದ ಬಗ್ಗೆ ಯಾವುದೇ ಗೌರವನ್ನು ತೋರ್ಪಡಿಸುವುದಿಲ್ಲ. ಅರ್ಥದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಪುರಾವೆಯನ್ನು ಹೊಂದಿರುವ ಸರ್ಕಾರದ ಬಗ್ಗೆ ಅಗೌರವ ತೋರುವುದೇ ಅವಮಾನವಾಗಿಬಿಡುತ್ತದೆ.

ಹೀಗಾಗಿ ಅವಮಾನಕ್ಕೊಗಾದೆ ಎಂಬ ಅಭಿಪ್ರಾಯವು ವ್ಯಕ್ತಿನಿಷ್ಟವಾದದ್ದಾಗಿರುತ್ತದೆ. ಅದನ್ನು ನ್ಯಾಯಾತ್ಮಕ ನಿಯಮಗಳ ಶಕ್ತಿಯಿಂದ ಹಾಗೂ ಬಲವಾದ ಕಾರಣಗಳ ಮೂಲಕ ಪುಷ್ಠೀಕರಿಸಬೇಕಾಗುತ್ತದೆ. ಅವಮಾನದ ಪ್ರತಿಪಾದನೆಗಳನ್ನು ಬಲವಾದ ಕಾರಣಗಳಿಂದ ಪುಷ್ಠೀಕರಿಸದಿದ್ದರೆ ಪೂರ್ವಗ್ರಹಳಿದ ಕೂಡಿದ ಪ್ರತಿಪಾದನೆಯಾಗುತ್ತದೆಯೇ ವಿನಾ ನ್ಯಾಯದ ನಿಯಮಗಳ ಆಧಾರದ ಪ್ರತಿಪಾದನೆಯಾಗುವುದಿಲ್ಲಒಂದು ಸರ್ಕಾರಕ್ಕೆ, ಸದರಿ ಪ್ರಕರಣದಲ್ಲಿ ಜಾರ್ಖಂಡ್ ಸರ್ಕಾರಕ್ಕೆ, ಸರಿಯಾದ ಸಮಯಕ್ಕೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಗತ್ಯವಾದ ನೈತಿಕ ಸಮರ್ಥನೆಗಳು ದಕ್ಕುತ್ತವೆ. ಒಂದು ಸರ್ಕಾರವು ತೆರಿಗೆ ವಂಚಕರಿಗೆ ದಂಡ ವಿಧಿಸುವ ಮೂಲಕ ಮತ್ತು ಗುಂಪು ಹತ್ಯೆ ಮಾಡುವವರಿಗೆ ಶಿಕ್ಷೆಗೆ ಗುರಿ ಮಾಡುವ ಮೂಲಕ ತನ್ನ ಅಸ್ಥಿತ್ವವನ್ನು ಸಾಬೀತು ಮಾಡಿಕೊಳ್ಳುತ್ತದೆ. ಅಂಥಾ ಗುಂಪುದಾಳಿಯ ಸಂದರ್ಭದಲ್ಲಿ ಸೂಕ್ತ ಕ್ರಮವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಂಡು ಹಿಂಸಾಚಾರವನ್ನು ತಡೆಗಟ್ಟುವ  ಮೂಲಕ ಮಾತ್ರ ಸರ್ಕಾರದಂಥ ಸಾರ್ವಜನಿಕ ಸಂಸ್ಥೆಯ ಪ್ರತಿಷ್ಟೆಯು ಹೆಚ್ಚುತ್ತದೆ. ಒಂದು ಉದಾರವಾದಿ ಪ್ರಜಾತಂತ್ರದ ಸಂದರ್ಭದಲ್ಲಿ ಒಂದು ಸರ್ಕಾರವು ಜನರ ವಿಶ್ವಾಸ ಮತ್ತು ಗೌರವಗಳನ್ನು ಪಡೆದುಕೊಳ್ಳಲು ಇವು ಪೂರ್ವಾಗತ್ಯಗಳು. ಒಂದು ಸರ್ಕಾರಕ್ಕಿರುವ ದಂಡಿಸುವ ಮತ್ತು ಶಿಕ್ಷಿಸುವ ಅಧಿಕಾರಗಳು ಸಹ ಅದನ್ನು ಅಪಮಾನದಿಂದ ಮುಕ್ತವಾಗುವ ಸಂದರ್ಭವನ್ನು ಒದಗಿಸುತ್ತವೆ. ಆದರೆ ಜಾರ್ಖಂಡ ಸರ್ಕಾರವನ್ನೂ ಒಳಗೊಂಡಂತೆ ಹಲವಾರು ರಾಜ್ಯ ಸರ್ಕಾರಗಳಲ್ಲಿ ಅಂಥ ವಾತಾವರಣವೇ ಇಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಗುಂಪು ಹಿಂಸಾಚಾರವನ್ನು ತಡೆಗಟ್ಟಲು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದೇ ಸುಖಾ ಸುಮ್ಮನೆ ಸರ್ಕಾರಕ್ಕೆ ಅವಮಾನ ಮಾಡುತ್ತಿದ್ದಾರೆ ಎಂಬ ನೆಪವನ್ನೊಡ್ಡುವ ಮೂಲಕ ಸರ್ಕಾರದ ನಡಾವಳಿಯ ವಸ್ತುನಿಷ್ಟ ಮೌಲ್ಯಮಾಪನವನ್ನು ತಡೆಗಟ್ಟಲಾಗುತ್ತದೆ. ಒಂದು  ಸರ್ಕಾರದ ಆಡಳಿತ ನಿರ್ವಹಣೆಯ ಸರಿಯಾದ ಮೌಲ್ಯಮಾಪನವಾಗಬೇಕೆಂದರೆ ಆಡಳಿತರೂಢರು ಹಿಂದಕ್ಕೆ ಸರಿಯಬೇಕು.

ಹಿಂದಕ್ಕೆ ಸರಿಯುವುದೆಂಬುದು ಒಂದು ಆಡಳಿತ ರೂಢ ಸರ್ಕಾರವು ಸ್ವ ಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ಸ್ವವಿಮರ್ಶೆ ಮಾಡಿಕೊಳಲ್ಲು ನಿಯಮಿತವಾಗಿ ಅನುಸರಿಸಬೇಕಾದ ಪ್ರಕ್ರಿಯೆಯಾಗಿದೆ. ಹಿಂದಕ್ಕೆ ಸರಿಯುವುದೆಂದರೆ ನಾಗರಿಕರ ರಕ್ಷಣೆ ಮತ್ತು ಕಲ್ಯಾu ಕಾರ್ಯಕ್ರಮಗಳನ್ನು ನಿರ್ವಹಿಸುವ ಸಂವಿಧಾನಾತ್ಮಕ ಜವಾಬ್ದಾರಿಯಿಂದ ಹಿಂದಕ್ಕೆ ಸರಿಯುವುದೆಂದರ್ಥವಲ್ಲ. ಅವು ಸರ್ಕಾರಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಉತ್ತಮಪಡಿಸಿಕೊಂಡು ಉತ್ತಮ ಆಡಳಿತವನ್ನು ಒದಗಿಸುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಸಹಜವಾಗಿಯೇ ಆಗ ವಿರೋಧ ಪಕ್ಷಗಳು ಆಡಳಿತ ರೂಢ ಸರ್ಕಾರವನ್ನು ಟೀಕಿಸಲು ಬೇಕಾದ ಭೂಮಿಕೆಯನ್ನೇ ಇಲ್ಲವಾಗಿಸುತ್ತದೆ. ರೀತಿಯಲ್ಲಿ ಹಿಂದಕ್ಕೆ ಸರಿದು ತಮ್ಮ ಕಾರ್ಯನಿರ್ವಹಣೆಯ ಆತ್ಮಾವಲೋಕನ ಮಾಡಿಕೊಂಡರೆ ನ್ಯಾಯೋಚಿತವಾದ ಮತ್ತು ಸರಿಯಾದ ಟೀಕೆಗಳನ್ನು ಅವಮಾನವೆಂದು ಭಾವಿಸುವ ಅಗತ್ಯವೇ ಇಲ್ಲವಾಗುತ್ತದೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ನಿರಾಶಾವಾದಿ ರಾಜಕಾರಣದ ಹುಟ್ಟು

ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂಥಾ ...

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...

ನಿರಾಶಾವಾದಿ ರಾಜಕಾರಣದ ಹುಟ್ಟು

ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂಥಾ ...

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್