ಅಪಘಾತದ ಪ್ರಕರಣ ಕೊಲೆಯಲ್ಲಿ ತಿರುವು: ಪೊಲೀಸರಿಂದ ಆರೋಪಿಗಳ ಬಂಧನ..!

Source: so news | By MV Bhatkal | Published on 31st March 2019, 12:29 AM | State News | Don't Miss |

 

ಮಡಿಕೇರಿ:ಮಾರ್ಚ್ ೧೯ ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ ಟ್ವಿಸ್ಟ್ ಪಡೆದು ವೈನ್, ಮರಳು ಮಾಫಿಯಾ, ರಿಕ್ರೀಯೆಶನ್ ಕ್ಲಬ್ ಮಾಡಲು ಬಿಡದಕ್ಕೆ ಕೊಲೆ ಮಾಡಲಾಗಿದೆ, ಎಂದು ವಿಚಾರಣೆಯಲ್ಲಿ ತಿಳಿದುಬಂದಿದ್ದು, ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೋಲಿಸ್ ಬಂದಿಸಿದ್ದಾರೆ.
ಕಲ್ಲು ಗುಂಡಿಯ ನಿವಾಸಿ ಸಂಪತ್ ಕುಮಾರ್ (೩೪)
ಹರಿಪ್ರಸಾದ್ (೩೬) ಮಡಿಕೇರಿಯ ಜಯ( ೩೪ ) ಆರೋಪಿಗಳನ್ನು ಬಂದಿಸಲಾಗಿದ್ದು, ಈ ಬಗ್ಗೆ ಎಸ್ ಪಿ ಸುಮನ್ ಡಿ ಪಿ ಸುದ್ದಿ ಗೋಷ್ಟಿ ಮೂಲಕ ತಿಳಿಸಿದ್ದಾರೆ.
ಮಾರ್ಚ್ ೧೯ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಹತ್ಯೆಯಾಗಿದೆ.
ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.ಅವರ ಚಿಕ್ಕಪ್ಪ ಸಲ್ಲಿಸಿದ ಸಂಶಯಾಸ್ಪದ ಬಗ್ಗೆ ದೂರು ಪರಿಗಣಿಸಿ ತನಿಖೆ ನಡೆಸಿದ್ದಾರೆ.
ಮೂರು ಗುಮಾನಿ ವ್ಯಕ್ತಿಗಳಾದ ಸಂಪತ್ ಕುಮಾರ್(೩೪), ಹರಿಪ್ರಸಾದ್(೩೬), ಜಯ(೩೪)
ಬೆಳಗ್ಗೆ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಹತ್ಯೆ ನಡೆಸಿರುವುದು ಬೆಳಕಿಗೆ ಬಂದಿದೆ.ಅಪಘಾತದ ಮಾದರಿಯಲ್ಲಿ ಅವರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಅವರ ನಡುವಿನ ವೈಯಕ್ತಿಕ ವಿಚಾರಕ್ಕೆ ಅಸಮಧಾನ ಇದ್ದ ಕಾರಣ ಈ ಕೃತ್ಯ ನಡೆದಿದೆ. ಸಂಪತ್ ವೈನ್ ಶಾಪ್‌ಗೆ ಅನುಮತಿ ಪಡೆಯಲು ಹೋದಾಗ ಕಳಗಿ ವಿರೋಧ ಮಾಡಿದ್ದಾರೆ. ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದ ಕಳಗಿ.ಈ ಹಿನ್ನಲೆ ೧ ತಿಂಗಳಿನಿಂದ ಪ್ಲಾನ್ ಮಾಡಿ ಅಪಘಾತದ ರೂಪದಲ್ಲಿ ಕೃತ್ಯ ಮಾಡಿದ್ದಾರೆ.ಅವರು ಕೊಯನಾಡಿನಲ್ಲಿ ಹೊರಟಿದ್ದನ್ನು ಗಮನಿಸಿ ಕಾದು ಕುಳಿತು ಲಾರಿ ಹತ್ತಿಸಿ ಹತ್ಯೆ ಮಾಡಿದ್ದಾರೆ.
ಜಯನ ವಾಹನ ಅಪಘಾತವಾದಾಗ ಬಿಡಿಸಿಕೊಟ್ಟಿದ್ದ ಸಂಪತ್ ಹತ್ಯೆ ಮಾಡಿದ್ರೆ ೧.೫ ಲಕ್ಷದ ಲೋನ್ ಕ್ಲಿಯರ್ ಮಾಡಿಕೊಡ್ತೀನಿ ಅಂತ ಸಂಪತ್ ನಿಂದ ಸುಪಾರಿ
ಹರಿಪ್ರಸಾದ್ ಸ್ವಿಫ್ಟ್ ಕಾರು, ಅಪಘಾತದ ಲಾರಿ ವಶಕ್ಕೆ ಪಡೆಯಲಾಗಿದೆ.ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...