2020-21 ನೂತನ ಶೈಕ್ಷಣಿಕ ವರ್ಷದಲ್ಲಿ ಶಾಲಾ ಸಮಯ ಹೀಗಿರುತ್ತೇ..

Source: sonews | By Staff Correspondent | Published on 15th May 2020, 9:47 PM | State News | Don't Miss |

ಬೆಂಗಳೂರು: ಕೋವಿಡ್-19ರ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಎರಡು ಪಾಳಿಯ ವೇಳಾಪಟ್ಟಿ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿ ಪ್ರಕಟಿಸಿದೆ.

ವಿದ್ಯಾರ್ಥಿಗಳು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆಯನ್ನು ಪಾಳಿ ಪದ್ಧತಿಯಲ್ಲಿ ನಡೆಸುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಯಾ ಶಾಲೆಗಳ ಆಡಳಿತ ಮಂಡಳಿಗಳು, ಮುಖ್ಯ ಶಿಕ್ಷಕರು ನಿರ್ಣಯ ಕೈಗೊಂಡಲ್ಲಿ ಮೊದಲನೇ ಪಾಳಿ ಬೆಳಗ್ಗೆ 7.50ರಿಂದ ಮಧ್ಯಾಹ್ನ 12.20ರವರೆಗೆ ಹಾಗೂ ಎರಡನೇ ಪಾಳಿ ಮಧ್ಯಾಹ್ನ 12.10ರಿಂದ 5ರವರೆಗೆ ಶಾಲಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ರಾಜ್ಯದ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿನ ಪ್ರತಿಯೊಂದು ಶಾಲೆಯ ಅಗತ್ಯತೆ, ಅವಶ್ಯಕತೆ, ಸಂಪನ್ಮೂಲಗಳ ಲಭ್ಯತೆಗನುಗುಣವಾಗಿ ಪಾಳಿ ಪದ್ಧತಿ ವೇಳಾಪಟ್ಟಿಯನ್ನು ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳಲು ಆಯಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಗೆ ಅವಕಾಶ ನೀಡಬಹುದು. ಆದರೆ, ಹೀಗೆ ಮಾಡುವಾಗ ಇಲಾಖೆಯು ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಶಾಲಾ ತರಗತಿ ಕೊಠಡಿಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಒಂದು ಡೆಸ್ಕ್ ಗೆ ಮೂವರು ವಿದ್ಯಾರ್ಥಿಗಳಂತೆ ಕೂರಲು ಸೂಕ್ತ ಆಸನ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಕೊಠಡಿಗಳು ಕೊರತೆ ಬಂದಲ್ಲಿ ಶಾಲೆಯಲ್ಲಿರುವ ಗ್ರಂಥಾಲಯ ಕೊಠಡಿ, ಕ್ರೀಡಾ ಕೊಠಡಿ, ಗಣಕಯಂತ್ರ ಕೊಠಡಿಗಳನ್ನು ಬಳಸಿಕೊಳ್ಳಬಹುದು.

ರಾಜ್ಯದಲ್ಲಿ 1ರಿಂದ 5ನೇ ತರಗತಿ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿನ ಶಾಲೆಗಳಲ್ಲಿ ಕಡಿಮೆ ಇರುತ್ತದೆ. ಇಂತಹ ಶಾಲೆಗಳಲ್ಲಿ ಪಾಳಿ ಪದ್ಧತಿ ಅವಶ್ಯಕತೆ ಇರುವುದಿಲ್ಲ. ಆದರೆ, 1ರಿಂದ 7/8 ತರಗತಿ ಇರುವ ಶಾಲೆಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ತರಗತಿ ನಡೆಸಲು ಕೊಠಡಿಗಳ ಕೊರತೆಯಾದಲ್ಲಿ ಪಾಳಿ ಪದ್ಧತಿ ಅಳವಡಿಸಕೊಳ್ಳಬಹುದು.

1 ಮತ್ತು 2ನೇ ತರಗತಿಯ ನಲಿಕಲಿ ಮಕ್ಕಳನ್ನು ಒಟ್ಟಿಗೆ ಸೇರ್ಪಡೆ ಮಾಡಿ ಬೋಧಿಸಬಹುದು. 3ನೇ ತರಗತಿಯ ವಿದ್ಯಾರ್ಥಿಗಳು ಈಗಾಗಲೇ ನಲಿಕಲಿ ಬೋಧನೆಯ ಪರಿಚಯ ಇರುವುದರಿಂದ ಇವರಿಗೆ ಸ್ವಕಲಿಕೆಗೆ ಆದ್ಯತೆ ನೀಡಿ ಪ್ರತ್ಯೇಕ ಕೊಠಡಿಯಲ್ಲಿ ಬೋಧನಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬಹುದು. ಹಾಗೂ 1ರಿಂದ 7ನೇ ತರಗತಿಗೆ ಶಿಕ್ಷಕರ ಕೊರತೆಯಿದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬಹುದಾಗಿದೆ.

ಪ್ರಾಥಮಿಕ ಶಾಲೆಗಳಲ್ಲಿಯೂ ಇತ್ತೀಚೆಗೆ ಪದವಿಗಳನ್ನು ಪಡೆದಿರುವ ಶಿಕ್ಷಕರು ಇರುತ್ತಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ಪರಸ್ಪರ ಸಮಾಲೋಚಿಸಿಕೊಂಡು ಪ್ರೌಢಶಾಲಾ ಶಿಕ್ಷಕರು ಪ್ರಾಥಮಿಕ ಶಾಲೆಗಳ 6 ಮತ್ತು 7ನೇ ತರಗತಿಗಳಿಗೂ ಪ್ರಾಥಮಿಕ ಶಾಲೆಗಳಲ್ಲಿ ಪದವಿ ಹೊಂದಿರುವ ಶಿಕ್ಷಕರು 8 ಮತ್ತು 9ನೇ ತರಗತಿಗಳಿಗೆ ಬೋಧಿಸುವ ಪ್ರಕ್ರಿಯೆ ಮಾಡಬಹುದಾಗಿರುತ್ತದೆ.

8ರಿಂದ 12ನೇ ತರಗತಿಗಳಿರುವ ಕಡೆಗಳಲ್ಲಿ ಈಗಿರುವ ಪಿಯು ಕಾಲೇಜುಗಳು ಬೆಳಗ್ಗೆ 10ರಿಂದ 3.30ರವರೆಗೆ ಅವಧಿಯನ್ನು ಮಾರ್ಪಡಿಸಿ 8.30ರಿಂದ 12.30ರವರೆಗೆ ನಡೆಸಿದರೆ, ಆ ನಂತರ ಪಿಯು ಕೊಠಡಿಗಳನ್ನು ಪ್ರೌಢಶಾಲಾ ತರಗತಿಗಳನ್ನು ನಡೆಸಲು ಬಳಸಿಕೊಳ್ಳಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮೊದಲನೇ ಪಾಳಿ

ಬೆಳಗ್ಗೆ 7:50ರಿಂದ 8 (ಪ್ರಾರ್ಥನೆ)

ಬೆಳಗ್ಗೆ 8ರಿಂದ 8:40(ಮೊದಲನೇ ಅವಧಿ)

ಬೆಳಗ್ಗೆ 8:40ರಿಂದ 9:20(ಎರಡನೇ ಅವಧಿ)

ಬೆಳಗ್ಗೆ 9:20ರಿಂದ 9:40(ವಿರಾಮ)

ಬೆಳಗ್ಗೆ 9:40ರಿಂದ 10:20(ಮೂರನೇ ಅವಧಿ)

ಬೆಳಗ್ಗೆ 10:20ರಿಂದ 11:00(ನಾಲ್ಕನೇ ಅವಧಿ)

ಬೆಳಗ್ಗೆ 11ರಿಂದ 11:40(ಐದನೇ ಅವಧಿ)

ಬೆಳಗ್ಗೆ 11:40ರಿಂದ ಮಾಧ್ಯಾಹ್ನ 12:20(ಆರನೇ ಅವಧಿ)

ಎರಡನೇ ಪಾಳಿ

ಮಧ್ಯಾಹ್ನ 12:10ರಿಂದ 12:30 (ಪ್ರಾರ್ಥನೆ)

ಮಧ್ಯಾಹ್ನ 12:30ರಿಂದ 1:10 (ಮೊದಲನೇ ಅವಧಿ)

ಅಪರಾಹ್ನ 1:10ರಿಂದ 1:50(ಎರಡನೇ ಅವಧಿ)

ಅಪರಾಹ್ನ 1:50ರಿಂದ 2:20(ಊಟದ ವಿರಾಮ)

ಅಪರಾಹ್ನ 2:20ರಿಂದ 3:00(ಮೂರನೇ ಅವಧಿ)

ಅಪರಾಹ್ನ 3ರಿಂದ 3:40 (ನಾಲ್ಕನೇ ಅವಧಿ)

ಅಪರಾಹ್ನ 3:40ರಿಂದ 4:20(ಐದನೇ ಅವಧಿ)

ಅಪರಾಹ್ನ 4:20ರಿಂದ 5(ಆರನೇ ಅವಧಿ)

ಇತರೆ ಮುಖ್ಯಾಂಶಗಳು

► ಗ್ರಾಮೀಣ ಭಾಗದಲ್ಲಿ ಪಾಳಿ ವೇಳಾಪಟ್ಟಿಯನ್ನು ಅಳವಡಿಸಿಕೊಂಡಲ್ಲಿ ಪಕ್ಕದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರದ ವ್ಯವಸ್ಥೆಗೆ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಪಾಳಿ ವೇಳಾಪಟ್ಟಿಯನ್ನು ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಅಳವಡಿಸಿಕೊಳ್ಳಲು ಆಯಾ ಜಿಲ್ಲಾಡಳಿತ ಅಥವಾ ಜಿಲ್ಲಾ ಪಂಚಾಯತ್‍ಗಳಿಗೆ ಬಿಡುಬಹುದಾಗಿದೆ.

► ಪ್ರತಿ ದಿನದ ಶಾಲಾ ಚಟುವಟಿಕೆ ಪ್ರಾರಂಭದಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು.

► ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ತಮ್ಮ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳ ನಡುವೆ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...