ಶ್ರೀನಿವಾಸಪುರ: ಸಿಡಿದೆದ್ದ ಜೆಡಿಎಸ್ ಕಾರ್ಯಕರ್ತರು

Source: shabbir | By Arshad Koppa | Published on 15th June 2017, 6:49 AM | State News | Guest Editorial |

ಶ್ರೀನಿವಾಸಪುರ, ಜೂ ೧೫: ಇತ್ತೀಚೆಗೆ ನಡೆದ ಉದ್ಯಾನವನ ತೆರವು ಮತ್ತು ಒತ್ತುವರಿ ತೆರವು ವಿಚಾರದಲ್ಲಿ ಸಚಿವ ರಮೇಶ್‍ಕುಮಾರ್ ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದು ಕಣ ್ಣಗೆ ಕಟ್ಟಿದಂತೆ ಕಾಣುತ್ತಿದೆ. ಇದರಿಂದ ಇತ್ತ ಸಾರ್ವಜನಿಕರನ್ನು ದಿಕ್ಕು ತಪ್ಪಿಸಿ ಖಾಸಗಿ ವಿಧ್ಯಾಸಂಸ್ಥೆಯವರ ಬೆಂಬಲಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆಂದು ಜೆ.ಡಿ.ಎಸ್ ಮುಖಂಡರು ಆರೋಪ ಮಾಡಿದ್ದಾರೆ. 
 
ಬುಧುವಾರ ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಜೆ.ಡಿ.ಎಸ್ ಪಕ್ಷದ ಜಿಲ್ಲಾ ಪಂಚಾಯ್ತಿ ಸದಸ್ಯರು ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರು ಹಾಗೂ ತಾಲ್ಲೂಕಿನ ಜೆ.ಡಿ.ಎಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 
 
ತಾಲ್ಲೂಕು ಪಂಚಾಯ್ತಿ ಸದಸ್ಯ ಎಸ್.ಎನ್. ಮಂಜುನಾಥರೆಡ್ಡಿ ಮಾತನಾಡಿ ಮಾಜಿ ಶಾಸಕ ಹಾಗೂ ಜಿಲ್ಲಾ ಜೆ,ಡಿ.ಎಸ್ ಅಧ್ಯಕ್ಷ ಜಿ.ಕೆ ವೆಂಕಟಶಿವಾರೆಡ್ಡಿರವರು ಈಚಲಕುಂಟೆ ಕೆರೆ ಅಂಗಳವನ್ನು ಸರ್ವೆ ಮಾಡಿಸಿ ಒತ್ತುವರಿದಾರರನ್ನು ತೆರವುಗೊಳಿಸಿ ಎಂದು ಹೇಳಿಲ್ಲ ಕುವೆಂಪು ವೃತ್ತದ ಪಾರ್ಕನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸದೆ ಅಕ್ಕ-ಪಕ್ಕದ ಖಾಸಗೀ ಶಾಲೆಗಳವರು ತೆರವುಗೊಳಿಸಿದ ಹಿನ್ನಲೆಯಲ್ಲಿ ನಡೆದ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಖಾಸಗಿ ಸಂಸ್ಥೆಯವರು ಸರ್ಕಾರಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ರಸ್ತೆ ಆಗಲೀಕರಣಕ್ಕೆ ತೊಂದರೆಯಾಗಿದೆ ಆದ್ದರಿಂದ ಸರ್ವೆ ನಡೆಸಿ ತೆರವುಗೊಳಿಸಿ ಎಂದು ತಿಳಿಸಿದರು. 
 
ಇದನ್ನೆ ನೆಪವನ್ನಾಗಿ ಇಟ್ಟಿಕೊಂಡಿರುವ ಸಚಿವರು ಇತ್ತೀಚಿಗೆ ಬಸ್ ನಿಲ್ದಾಣ ಉಧ್ಘಾಟನೆ ಸಮಾರಂಭಕ್ಕೆ ಈಚಲಕುಂಟೆ ಕೆರೆ ಅಂಗಳದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಹಕ್ಕುಪತ್ರಗಳನ್ನು ನೀಡುವುದಾಗಿ ತಾಯಂದಿರನ್ನು ಸಮಾರಂಭಕ್ಕೆ ಕರೆಸಿ ಅವರಿಗೆ ಹಕ್ಕುಪತ್ರಗಳನ್ನು ನೀಡದೆ ಈಚಲಕುಂಟೆ ಕೆರೆ ಅಂಗಳವನ್ನು ಸರ್ವೆ ಮಾಡಬೇಕಾಗಿದೆ ಎಂದು ಫಲಾನುಭವಿಗಳನ್ನು ವಾಪಸ್ಸು ಕಳುಹಿಸಿರುವುದು ಸರಿಯಲ್ಲ ಮಾಜಿ ಶಾಸಕ ವೆಂಕಟಶಿವಾರೆಡ್ಡಿರವರು ಸಂತೆಮೈದಾನ, ಇಂದಿರಾನಗರ ಹಾಗೂ ಅಮಾನಿಕೆರೆ ಅಂಗಳದಲ್ಲಿ ಈ ಹಿಂದೆಯೇ ಕಾನೂನು ಬದ್ದವಾಗಿಯೇ ಹಕ್ಕುಪತ್ರಗಳನ್ನು ವಿತರಣೆ ಮಾಡಿದ್ದಾರೆ ಅವುಗಳನ್ನು ಖಾತೆ ಮಾಡಿಕೊಡುವ ಬದಲು ಹೊಸದಾಗಿ ಹಕ್ಕುಪತ್ರಗಳನ್ನು ನೀಡುತ್ತೇನೆ ಎಂದು ಚುನಾವಣೆಯ ಗಿಮಿಕ್ ಮಾಡಲು ಹೊರಟಿದ್ದಾರೆ. ಈಚಲಕುಂಟೆ ಕೆರೆ ಅಂಗಳದಲ್ಲಿ ಸಕ್ರಮವಾಗಿಯೇ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಿವೇಶನಗಳನ್ನು ನೀಡಿದ್ದರೂ ಈಗ ಸರ್ವೆ ಮಾಡಿಸುವುದಾಗಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ಅಲ್ಲಿರುವ ಬಡ ನಿವಾಸಿಗಳಿಗೆ ಮೋಸ ಮಾಡಿದಂತೆ ಆಗುತ್ತದೆ. ಖಾಸಗಿ ಸಂಸ್ಥೆಗಳವರು ತಮ್ಮ ಹಿಂಬಾಲಕರಾಗಿರುವುದರಿಂದ ಅವರನ್ನು ಉಳಿಸುವ ಸಲುವಾಗಿ ಇಡಿ ಈಚಲಕುಂಟೆ ಕರೆ ಅಂಗಳವನ್ನು ಸರ್ವೆ ಮಾಡಿಸುವ ನೆಪದಲ್ಲಿ ಸರ್ವೆ ಕಾರ್ಯವನ್ನು ದಿಕ್ಕುತಪ್ಪಿಸುವ ಕೆಲಸ ಸಚಿವರು ಮಾಡಿಸುತ್ತಿದ್ದಾರೆಂದು ಆರೋಪಿಸಿದರಲ್ಲದೆ ಯಾವುದೇ ಕಾರಣಕ್ಕೂ ಸಂತೆ ಮೈದಾನದಲ್ಲಿರುವ ಬಡವರಿಗೂ ತೊಂದರೆಯಾಗದಂತೆ ಯಥಾಸ್ಥಿತಿ ಕಾಪಾಡಲು ಮಾನ್ಯ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. 
 
ಕೋಟ್ :  ಜಿಲ್ಲಾ ಪಂಚಾಯ್ತಿ ಸದಸ್ಯ ತೂಪಲ್ಲಿ ಆರ್. ನಾರಾಯಣಸ್ವಾಮಿ ಮಾತನಾಡಿ ಕುವೆಂಪು ವೃತ್ತದ ಪಾರ್ಕ್ ತೆರವುಗೊಳಿಸಿರುವ ವಿಚಾರವಾಗಿ ನಡೆದ ಪ್ರತಿಭಟನೆ ಸಮಯದಲ್ಲಿ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಆಗಮಿಸಿ ರಸ್ತೆ ಅಗಲೀಕರಣಕ್ಕೆ ಸಂಬಂದಿಸಿದ ವಿಷಯಕ್ಕೆ ಮಾತ್ರ ಸರ್ವೆ ನಡೆಸಿ ರಸ್ತೆ ಆಗಲೀಕರಣ ಮಾಡಿ ಎಂದು ಸೂಚನೆ ನೀಡಿದರೆ ಹೊರತು ಯಾವುದೇ ವ್ಯಕ್ತಿಗಳ ಹೆಸರನ್ನು ಹಾಗೂ ಸಂಸ್ಥೆಗಳ ಹೆಸರನ್ನೂ ಮಾಜಿ ಶಾಸಕರು ಹೇಳಲಿಲ್ಲ ಹಾಗೂ ಈಚಲಕುಂಟೆ ಕೆರೆ ಅಂಗಳವನ್ನು ಸರ್ವೆ ಮಾಡಿ ಎಂದು ಇಂದು ಸಹ ಹೇಳಲಿಲ್ಲ ಸಚಿವರು ಇಡೀ ಕೆರೆ ಅಂಗಳವನ್ನು ಸರ್ವೆ ಮಾಡಿಸುತ್ತಿರುವುದರಿಂದ ಸಣ್ಣ-ಪುಟ್ಟ ಬಡವರಿಗೂ ತೊಂದರೆಯಾಗಲಿದೆ ಇದನ್ನು ವಿನಾ ಕಾರಣ ಬೆಳೆಸುವುದಕ್ಕಿಂತ ರಸ್ತೆಗೆ ಸಂಬಂಧಪಟ್ಟಂತೆ ಪಾರ್ಕೆ ಆಗಿರಬಹುದು, ಕಟ್ಟಡವೇ ಆಗಿರಬಹುದು ಎರಡು ಕಡೆ ರಸ್ತೆಯನ್ನು ಆಗಲೀಕರಣ ಮಾಡಿ ಸಮಸ್ಯೆಯನ್ನು ಅಧಿಕಾರಿಗಳು ಇತ್ಯರ್ಥ ಪಡಿಸಬೇಕೆಂದು ಒತ್ತಾಯಪಡಿಸಿದರು. 
 
ಈ ಸಂಧರ್ಭದಲ್ಲಿ ದಳಸನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯ ಎಂ. ಶ್ರೀನಿವಾಸ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರಾಜಶೇಖರ್ ರೆಡ್ಡಿ, ಆರ್.ಜಿ. ನರಸಿಂಹಯ್ಯ, ಪುರಸಭಾ ಸದಸ್ಯ ಎಂ. ಶ್ರೀನಿವಾಸಪ್ಪ, ಕಾಡುದೇವಂಡಹಳ್ಳಿ ರಾಮಚಂದ್ರೇಗೌಡ, ಎ.ಪಿ.ಎಂ.ಸಿ ಸದಸ್ಯ ನಕ್ಕಲಗಡ್ಡ ನಾರಾಯಣಸ್ವಾಮಿ, ಕಾರ್ ಬಾಬು, ಗೊರಿವಿಮಾಕಲಹಳ್ಳಿ ಶ್ರೀನಿವಾಸ, ಅಂಬೇಡ್ಕರ್ ಪಾಳ್ಯದ ರವಿ, ಮಾಲೂರು ಚಂದು, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಕೆ.ಪಿ.ನಾಗೇಶ್, ಮೊಗಿಲಹಳ್ಳಿ ಶ್ರೀನಿವಾಸ್, ಚಲ್ದಿಗಾನಹಳ್ಳಿ ಶಿವಾನಂದ, ವಡಗಿಪಲ್ಲಿ ಮಂಜು, ದಾಸರ್ಲಹಳ್ಳಿ ಚೌಡರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. 
 
 
 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...