ಶಿವಮೊಗ್ಗ:ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪಂಚಾಚಾರ್ಯರ ಕೊಡುಗೆ ಅಪಾರ - ಶ್ರೀ ರಂಭಾಪುರಿ ಜಗದ್ಗುರುಗಳು 

Source: balanagoudra | By Arshad Koppa | Published on 15th June 2017, 6:41 AM | State News | Guest Editorial |

ಶಿವಮೊಗ್ಗ ಜೂನ್- 14. ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಧರ್ಮ ದೇಶ ಮನುಷ್ಯನ ಎರಡು ಕಣ್ಣು. ಧಾರ್ಮಿಕ ಸತ್ಪರಂಪರೆಯ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ವೀರಶೈವ ಧರ್ಮದ ಪಂಚ ಪೀಠಗಳ ಕೊಡುಗೆ ಅಪಾರವಾದುದೆಂದು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
    ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಐ.ಟಿ.ಐ. ಕೇಂದ್ರದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ವಧು-ವರರ ಸಮಾವೇಶ, ‘ಪಂಚಾಚಾರ್ಯ ದೀಪ್ತಿ’ ಪ್ರಶಸ್ತಿ ಪ್ರದಾನ ಹಾಗೂ ಐಟಿಐ 23ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
    ವೀರಶೈವ ಧರ್ಮದ ಇತಿಹಾಸ ಪರಂಪರೆ ಪ್ರಾಚೀನವಾಗಿದ್ದು ಪರಶಿವನ ಸಂಕಲ್ಪಾನುಸಾರ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಭೂ ಮಂಡಲದಲ್ಲಿ ಸಂಸ್ಥಾಪಿಸಿದರು. 28 ಶಿವಾಗಮಗಳಲ್ಲಿ ವೀರಶೈವ ಧರ್ಮದ ಆದರ್ಶ ಮೌಲ್ಯಗಳನ್ನು ಕಾಣಬಹುದಾಗಿದೆ. ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ ಸಿದ್ದಾಂತ ಶಿಖಾಮಣ  ಧರ್ಮ ಗ್ರಂಥದಲ್ಲಿ ಜೀವ ಶಿವನಾಗುವ ನರ ಹರನಾಗುವ ಭವಿ ಭಕ್ತನಾಗುವ ಸಾಧನೆಯ ಹಂತಗಳನ್ನು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ. ಸಮರ ಜೀವನದಿಂದ ಅಮರ ಜೀವನಕ್ಕೆ ಕೊಂಡೊಯ್ಯುವ, ಅಂತರಂಗ-ಬಹಿರಂಗ ಶುದ್ಧಿಗೆ ಸಂಸ್ಕಾರ ಮತ್ತು ಸತ್ಯ ಸಂಸ್ಕøತಿ ಎತ್ತಿ ಹಿಡಿದ ಕೀರ್ತಿ ಆಚಾರ್ಯ ಪರಂಪರೆಗೆ ಸಲ್ಲುತ್ತದೆ. ಜಾತಿ ಜನಾಂಗಗಳ ಗಡಿ ಮೀರಿ ಭಾವೈಕ್ಯತೆ ಸಾಮರಸ್ಯ, ರಾಷ್ಟ್ರಭಕ್ತಿ, ಕ್ರಿಯಾಶೀಲ ಬದುಕು ರೂಢಿಸುವಲ್ಲಿ ಪಂಚಪೀಠಗಳು ಕೊಟ್ಟ ಕೊಡುಗೆ ಅಪಾರವಾದುದು. ಸಮಾಜದ ಜನತೆ ಜಡತ್ವದಿಂದ ಹೊರಬರಬೇಕಾಗಿದೆ. ಸತ್ಯವಾದ ಮೂಲ ಸಿದ್ಧಾಂತಗಳನ್ನು ತಿಳಿಯಲು ಸಮಾಜ ಹಿಂದೇಟು ಹಾಕುತ್ತಿರುವುದು ದುರ್ದೈವದ ಸಂಗತಿ ಎಂದರು. ಪ್ರತಿ ವರುಷ ವಿಘ್ನೇಶ್ವರಯ್ಯ ಸೋಲಾಪುರ ತಮ್ಮ ಐಟಿಐ ಕೇಂದ್ರದಲ್ಲಿ ಶ್ರೀ ಜಗದ್ಗುರು ಪಂಚಚಾರ್ಯ ಯುಗಮಾನೋತ್ಸವ ಆಚರಿಸಿಕೊಂಡು ಬರುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.
    ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ (ಸುಭಾಷ್) ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕೆನರಾ ಬ್ಯಾಂಕ ಶೇಷಾದ್ರಿಪುರಂ ಬ್ರ್ಯಾಂಚಿನ ಮ್ಯಾನೇಜರ್ ವಿಜಯಕುಮಾರ್, ಇಂ.ನ್ಯಾ. ವೀರಶೈವ ಫೌಂಡೇಶನ್ ಅಧ್ಯಕ್ಷ ಬಿ.ಜಿ. ಮಲ್ಲಿಕಾರ್ಜುನ, ಸಂಸ್ಥಾಪಕ ಅಧ್ಯಕ್ಷ ಮಳಲಕೆರೆ ಗುರುಮೂರ್ತಿ  ಭಾಗವಹಿಸಿದ್ದರು. 
    ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನುಡಿ ನಮನ ಸಲ್ಲಿಸಿ ಐಟಿಐ ಮಾಡಿಕೊಂಡ ಯಾವುದೇ ವಿದ್ಯಾರ್ಥಿ ನಿರುದ್ಯೋಗಿಯಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮಲ್ಲಿರುವ ಸಂಕುಚಿತ ಭಾವನೆಗಳನ್ನು ದೂರಮಾಡಿಕೊಳ್ಳಬೇಕೆಂದರು. ಮಳಲಿ ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿ ಬೆಳೆದು ಬಂದಿರುವ ಪ್ರಾಚೀನ ಪರಂಪರೆಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಶ್ರೀ ಜ|| ಪಂಚಾಚಾರ್ಯ ಐಟಿಐ ಮಾಡುತ್ತಿದೆ. ತಂತ್ರಜ್ಞಾನದ ಜೊತೆ ಜೊತೆಗೆ ತತ್ವಜ್ಞಾನವೂ ಇಲ್ಲಿ ಬೆಳೆಯುತ್ತಿದೆ ಎಂದರು.
ಪ್ರಶಸ್ತಿ:- ಇಂಟರ್ ನ್ಯಾಶನಲ್ ವೀರಶೈವ ಫೌಂಡೇಶನ್(ರಿ) ಕೊಡಮಾಡುವ 2017ನೇ ಸಾಲಿನ “ಪಂಚಾಚಾರ್ಯ ದೀಪ್ತಿ” ಪ್ರಶಸ್ತಿಯನ್ನು ಹೊನ್ನಾಳಿ ತಾಲೂಕ ಕೋಟೆಮಲ್ಲೂರಿನ ಶಿವಲಿಂಗಾರಾಧ್ಯ ಶಾಸ್ತ್ರಿಗಳು, ಶಿವಮೊಗ್ಗದ ಹೃದಯ ತಜ್ಞ ಡಾ|| ನರೇಂದ್ರ ಜಿ.ನಿಶಾನಿಮಠ, ಸೊರಬ ತಾಲೂಕ ಚಿಗಟೂರಿನ ಪ್ರಗತಿಪರ ರೈತ ಎಸ್.ರಾಜಶೇಖರ, ಶಿಕಾರಿಪುರ ಶ್ರೀ ಜ||ರೇಣುಕಾಚಾರ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಅಂಗಡಿ ಜಗದೀಶ ಮತ್ತು ಶಿವಮೊಗ್ಗದ ಪ್ರೈವೇಟ್ ಎಂಪ್ಲಾಯಮೆಂಟ್ ಬ್ಯೂರೋದ ಡಾ|| ಸುರೇಶ್ ಬಾಳೆಗುಂಡಿ ಇವರಿಗೆ ಪ್ರದಾನ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿದರು. ಬಿ.ಎಸ್‍ಸಿ.ಯಲ್ಲಿ ಚಿನ್ನದಪದಕ ಪಡೆದ ಕುಮಾರಿ ಸೌಮ್ಯ ಸಿ.ಎಂ. ಇವರಿಗೆ ಪ್ರತಿಭಾ ದೀಪ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಐಟಿಐ ಪ್ರಾಂಶುಪಾಲ ವಿಘ್ನೇಶ್ವರ ಸೋಲಾಪುರ ಇವರು ಪ್ರಾಸ್ತಾವಿಕ ಮಾತನಾಡಿ ಐಟಿಐ ನಡೆದು ಬಂದ ದಾರಿಯನ್ನು ವಿವರಿಸಿ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಸಂಜೆ ಕಾಲೇಜ್ ಆರಂಭಿಸಲಾಗಿದೆ ಎಂದರು.
    ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಹರಿಹರದ ಶಿವಯೋಗಿ ಕಂಬಾಳಿಮಠರಿಂದ ನಿರೂಪಣೆ, ರಾಜ್ಯ ಪ್ರಶಸ್ತಿ ಪುರಸ್ಕøತ ಉಸ್ತಾದ್ ಹುಮಾಯೂನ್ ಹರ್ಲಾಪುರ ಹಾಗೂ ನಿಷಾದ್ ಹರ್ಲಾಪುರ ಇವರಿಂದ ಸಂಗೀತ ಜರುಗಿತು. ಗಂಜೀಗಟ್ಟಿ ಕೃಷ್ಣಮೂರ್ತಿ ಲಾವಣ  ಆಧಾರಿತ ಧರ್ಮಗೀತೆ ಹಾಡಿದರು.    
 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...