ಸರ್ಕಾರ ಪತ್ರಿಕಾ ವಿತರಕರಿಗೆ ಜೀವ ವಿಮೆ ನೀಡಬೇಕು: ಸಾಹಿತಿ ರಘುನಾಥ

Source: sonews | By Staff Correspondent | Published on 20th April 2020, 10:59 PM | State News |

ಶ್ರೀನಿವಾಸಪುರ:  ಪತ್ರಿಕಾ ವಿತರಕರು ಸುದ್ದಿಯನ್ನು ಮನೆ ಮನೆಗೆ ನಿತ್ಯ ಕಾಯಕದಂತೆ ಮಳೆ, ಬಿಸಿಲು ಚಳಿ ಎನ್ನದೆ ನಿರಂತರವಾಗಿ ನೀಡುತ್ತಾರೆ. ಇಂತಹವರಿಗೆ ನಿಜವಾಗಿಯೂ ಸೌಲಭ್ಯಗಳು ಬೇಕಾಗಿದೆ. ಕೋವಿಡ್-19ರ ಹೋರಾಟದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ಜೀವ ವಿಮೆಯನ್ನು ಸರ್ಕಾರಗಳು ಕೈಗೊಳ್ಳಬೇಕೆಂದು ಹಿರಿಯ ಸಾಹಿತಿ ಹಾಗೂ ಚಿಂತಕ ಸ.ರಘುನಾಥ ರವರು ಸರ್ಕಾರವನ್ನು ಆಗ್ರಹಿಸಿದರು.

ಪಟ್ಟಣದಲ್ಲಿ ಪತ್ರಿಕಾ ವಿತರಣೆ ಮಾಡುವವರಿಗೆ ಹೆಸರು ಹೇಳಲು ಇಚ್ಚಿಸದ ದಾನಿಗಳೊಬ್ಬರು  ನೀಡಿದ ಧವಸ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಇವರು ಇಂದಿನ ದಿನಗಳಲ್ಲಿ ಸಣ್ಣ ಆಹಾರದ ಪ್ಯಾಕೆಟ್ ನೀಡಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈಭವವಾಗಿ ಚಿತ್ರಿಸಿ ಪ್ರಚುರ ಪಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ತಮ್ಮ ಹೆಸರನ್ನು ಪ್ರಚುರ ಪಡಿಸಬಾರದು ಎಂದು ತಿಳಿಸಿ ಸುಮಾರು 2ಸಾವಿರ ರೂಗಳಿಗೂ ಮೇಲ್ಪಟ್ಟ ಧವಸ ಧಾನ್ಯಗಳನ್ನು ನೀಡುವ ಮೂಲಕ ಸಮಾಜದ ಅನೇಕರ ಕಣ್ನನ್ನು ತೆರೆಸಿದ್ದಾರೆ. ದಾನ ನೀಡುವ ಮಾರ್ಗ ಇದು. ಪ್ರಚಾರಕ್ಕೆ ನೀಡುವ ದಾನ ಎಮದಿಗೂ ಸರ್ವ ಸಮ್ಮತವಲ್ಲ ಎಂದರು.

ಕೋರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ದೇಶಾಧ್ಯಂತ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ನಿಜವಾದ ಬಡವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಉಳ್ಳವರು ಐಶಾರಾಮಿ ಕಾರುಗಳಲ್ಲಿ ಓಡಾಡುವವರನ್ನು ಯಾವ ಅಧಿಕಾರಿಗಳೂ ಪ್ರಶ್ನೆ ಮಾಡುವುದಿಲ್ಲ. ಒಪ್ಪತಿನ ಊಟಕ್ಕೆ ತರಕಾರಿ ಹಾಗು ದಿನಸಿ ಪದಾರ್ಥಗಳನ್ನು ಖರೀದಿಸಲು ತೆರಳಿದರೆ ಅಂತಹವರ ವಿರುದ್ದ ಪೋಲೀಸರು ಲಾಠಿ ಬೀಸುತ್ತಾರೆ. ಸರ್ಕಾರಗಳು ಉಳ್ಳವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದಯೇ ವಿನಃ ಬಡ ಬಗ್ಗರಿಗಲ್ಲ. ದೇಶ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಅಪಾಯದಿಂದ ಪಾರಾಗಬೇಕಾಗಿದೆ. ಪ್ರಾಣ ಹಣವಂತರಿಗಷ್ಟೆ ಅಲ್ಲ ಬಡವರ ಪ್ರಾಣವೂ ಉಳಿಸಬೇಕಾಗಿದೆ ಎಂದರು.

ಸಾಹಿತಿ ಆರ್.ಚೌಡರೆಡ್ಡಿ ರವರು ಮಾತನಾಡಿ ಪತ್ರಿಕೆ ಮುದ್ರಣಗೊಂಡ ನಂತರ ಓದುಗರಿಗೆ ತಲುಪಿಸುವ ಕೆಲಸ ವಿತರಕರದು. ಅವರ ಸೇವೆ ಶ್ಲಾಘನೀಯವಾದುದು. ಅಂತಹ ಮಕ್ಕಳ ಬಗ್ಗೆ ಸಮಾಜ ಸದಾ ಕಾಳಜಿವಹಿಸುತ್ತದೆ ಮತ್ತು ಈ ಮಕ್ಕಳು ಜನರ ಮೆಚ್ಚುಗೆಯನ್ನು ಗಳಿಸುತ್ತಾರೆ. ಆದ್ದರಿಂದ ಇವರ ಕಾರ್ಯವನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಸ್ಮರಿಸಿ ಅವರನ್ನು ಅಭಿನಂದಿಸೋಣ ಎಂದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ದಾನಿಗಳಿಂದ ಸಹಕಾರದ ಕೊಂಡಿಯಾಗಿದ್ದ ಪತ್ರಕರ್ತರು ಎನ್.ಮುನಿವೆಂಕಟೆಗೌಡ, ಕೆ.ಎಂ.ಚೌಡಪ್ಪ, ಮಂಜಲನಗರ ನಾರಾಯಣಸ್ವಾಮಿ, ಬಿ.ಕೆ.ಉಪೇಂದ್ರ, ಯಮ್ಮನೂರು ನಾಗರಾಜ್,  ಕೃಷ್ಣಮೂರ್ತಿ, ಆರ್.ಬಾಬು, ಹೆಚ್.ರಮೇಶ್, ಸೋಮಶೇಖರ, ಎಸ್.ಲಕ್ಷ್ಮಣಬಾಬು, ರಮೇಶ್ ಇತರರು ಹಾಜರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...