ದೇಶದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಎಸ್.ಡಿ.ಪಿ.ಐ ಪ್ರತಿಭಟನೆ

Source: SOnews | By Staff Correspondent | Published on 5th August 2023, 4:02 PM | Coastal News | Don't Miss |

 

ಭಟ್ಕಳ: ದೇಶದ ಬಿಜೆಪಿ ಆಡಳಿತ ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಮುಸ್ಲಿಮ್ ಹಾಗೂ ಕ್ರೈಸ್ತ ಮೇಲೆ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದು ಮಾತ್ರವಲ್ಲ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬ ಮೂವರು ಮುಸ್ಲಿಮರು ಸೇರಿದಂತೆ ನಾಲ್ವರು ಅಮಾಯಕರ ಹತ್ಯೆಯನ್ನು ಕಂಡಿಸಿ ಎಸ್.ಡಿ.ಪಿ.ಐ ಕಾರ್ಯಕರ್ತರು ಶುಕ್ರವಾರ ಸಂಜೆ ಪ್ರವಾಸಿ ಮಂದಿರದ ಎದರು ಪ್ರತಿಭಟನೆ ನಡೆಸಿ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿದರು.  

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತೌಫಿಕ್ ಬ್ಯಾರಿ, ಸಂಘಪರಿವಾರದ ದ್ವೇಷದ ಪರಿಣಾಮವಾಗಿ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಮಣಿಪುರದಲ್ಲಿ ಗಲಭೆ ನಿಂತಿಲ್ಲ, ಹರ್ಯಾಣದಲ್ಲಿ ಕೋಮುಗಲಭೆ ಭುಗಿಲೆದ್ದಿದೆ, ಮಹಾರಾಷ್ಟ್ರದಲ್ಲಿ ಆರ್‌ಪಿಎಫ್ ಜವಾನ್ ರೈಲಿನೊಳಗೆ ತನ್ನ ಅಧಿಕಾರಿ ಸೇರಿದಂತೆ ಮೂವರು ಅಮಾಯಕ ಮುಸ್ಲಿಮರನ್ನು ಗುಂಡಿಕ್ಕಿ ಕೊಂದಿದ್ದಾನೆ. ಸಂಘಪರಿವಾರ ದೇಶಾದ್ಯಂತ ದ್ವೇಷವನ್ನು ಹರಡುತ್ತಿದೆ, ಇದರ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆಯುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರದ ದ್ವೇಷದ ರಾಜಕಾರಣದಿಂದ ದೇಶದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಾದ್ಯಂತ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ಖಂಡಿಸಿ ಎಸ್‌ಡಿಪಿಐ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದ ತೌಫಿಕ್ ಬ್ಯಾರಿ, ಹಿಂಸಾಚಾರ ಮತ್ತು ಕೋಮುದ್ವೇಷ ಬಿಜೆಪಿ ಪಕ್ಷದ ರಾಜಕೀಯ ಅಸ್ತ್ರವಾಗಿದೆ ಎಂದರು. ಇದರಿಂದಲೇ ಮಣಿಪುರದಲ್ಲಿ ಮೂರು ತಿಂಗಳಿಂದ ಹೊತ್ತಿ ಉರಿಯುತ್ತಿದ್ದರೂ ಮೋದಿ ನೇತೃತ್ವದ ಸರ್ಕಾರ ಶಾಂತಿ ನೆಲೆಸಲು ಕಿಂಚಿತ್ತೂ ಪ್ರಯತ್ನ ಮಾಡಿಲ್ಲ. ಹರಿಯಾಣದಲ್ಲಿ ಮಸೀದಿಗೆ ಬೆಂಕಿ ಹಚ್ಚಿ ಮಸೀದಿಯ ಇಮಾಮ್‌ನನ್ನು ಕೊಂದ ಘಟನೆಗೂ ಸಂಘ ಪರಿವಾರವೇ ನೇರ ಹೊಣೆ ಎಂದು ತೌಫಿಕ್ ಬಾರಿ ಆರೋಪಿಸಿದ್ದಾರೆ.

ದೇಶಾದ್ಯಂತ ಹರಡಿರುವ ದ್ವೇಷದ ವಿಷ ರೈಲ್ವೇ ಭದ್ರತಾ ಸಿಬ್ಬಂದಿಯ ತಲೆಗೂ ಬಂದಿರುವುದು ದುರಂತ. ಇದೇ ಕಾರಣಕ್ಕೆ ಜನರ ಜೀವ ರಕ್ಷಣೆ ಮಾಡಬೇಕಾಗಿದ್ದ ಪೊಲೀಸ್ ಅಧಿಕಾರಿ ನಾಲ್ವರು ಅಮಾಯಕರನ್ನು ಗುಂಡಿಕ್ಕಿ ಕೊಂದಿದ್ದಾನೆ ಇದು ಅತ್ಯಂತ ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸಂಘಪರಿವಾರ ಹಾಗೂ ದ.ಕ.ಜಿಲ್ಲೆಯಲ್ಲಿ ಗೋದಿ ಮಾಧ್ಯಮಗಳು ಅದರ ಪರಿಣಾಮವನ್ನು ತೋರಿಸುತ್ತಿವೆ. ಇಂತಹ ಎಲ್ಲಾ ಘಟನೆಗಳನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ತೌಫಿಕ್ ಬ್ಯಾರಿ ಹೇಳಿದರು. ಮತ್ತು ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ಮುಹಮ್ಮದ್ ಲಯೀಕ್ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಮಾನುಲ್ಲಾ, ಮಾಧ್ಯಮ ಪ್ರಭಾರಿ ಅಬ್ದುಲ್ ಸಮೀ ಶೇಖ್, ವಿಧಾನಸಭಾಕ್ಷೇತ್ರಾಧ್ಯಕ್ಷ ಸಾಕಿಬ್ ಶೇಖ್, ಪ್ರಧಾನ ಸಂಘಟನಾ ಕಾರ್ಯದರ್ಶಿ ಝೈನ್, ತನ್ವೀರ್ ಬಾಷಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...