ತನ್ನ ಸೃಷ್ಟಿಕರ್ತನನ್ನು ಅರಿಯಲು ವಿಜ್ಞಾನ ಸಹಕಾರಿಯಾಗುತ್ತೆ-ಅಬ್ದುಲ್ ಕಾದಿರ್ ಬಾಷಾ

Source: sonews | By Staff Correspondent | Published on 31st August 2019, 6:18 PM | Coastal News | Don't Miss |

•    ಶಿಕ್ಷಕರಿಗಾಗಿ ವಿಜ್ಞಾನಮೇಳ ಮಾಹಿತಿ ಪುಸ್ತಕ ಬಿಡುಗಡೆ

ಭಟ್ಕಳ: ವಿಜ್ಞಾನವು ಮನುಷ್ಯನನ್ನು ತನ್ನ ಸೃಷ್ಟಿಕರ್ತನನ್ನು ಅರಿಯುವಂತೆ ಮಾಡುತ್ತದೆ. ಎಂದು ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಮಾಜಿ ಅಧ್ಯಕ್ಷ ಭಟ್ಕಳ ಮುಸ್ಲಿಮ್ ಜಮಾಅತ್ ದುಬೈ ಇದರ ಮುಖಂಡ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ಹೇಳಿದರು. 

ಅವರು ಶನಿವಾರ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ಸಭಾಂಗಣದಲ್ಲಿ ಎ.ಜೆ.ಅಕಾಡೆಮಿ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆ ಹಾಗೂ ತರಬಿಯತ್ ಎಜ್ಯುಕೇಶನ್ ಸೂಸೈಟಿ ಜಂಟಿಯಾಗಿ ಆಯೋಜಿಸಿದ್ದ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳ ಗಣಿತ,ವಿಜ್ಞಾನ ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಒಂದು ದಿನ ಓರಿಯಂಟೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

14ನೂರು ವರ್ಷಗಳ ಹಿಂದೆಯೆ ಪ್ರವಾದಿ ಮುಹಮ್ಮದ್(ಸ) ರು ಕುರ್‍ಆನ್ ಬೋಧಿಸುವುದರ ಮೂಲಕ ಮನುಷ್ಯ ಹಾಗೂ ವಿಜ್ಞಾನದೊಂದಿಗಿನ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ. ಕುರ್‍ಆನ್ ಅಧ್ಯಯನದ ಮೂಲಕ ವಿಜ್ಞಾನದ ಹೊಸ ಹೊಸ ಅವಿಷ್ಕಾರಗಳು ಅನಾವರಣಗೊಳ್ಳುತ್ತವೆ ಎಂದರು. 

ಉದ್ಘಾಟನಾ ಭಾಷಣಗೈದ ನ್ಯೂ ಶಮ್ಸ್ ಸ್ಕೂಲ್ ಪ್ರಾಂಶುಪಾಲೆ ಫಹಮಿದಾ ಖಿಝರ್, ಸಂಶೋಧನಾ ಕ್ಷೇತ್ರದಲ್ಲಿ ಪ್ರಾಚೀನ ಭಾರತ ಬಹಳ ಮುಂದುವರೆದಿತ್ತು. ಆದರೆ ಆಧುನಿಕ ಭಾರತದಲ್ಲಿ ಸಂಶೋಧನೆಗಳು ತೀರ ವಿರಳವಾಗಿದ್ದು ಕೆಳ ಸ್ತರದಿಂದಲೇ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವನೆಗಳನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದ ಅವರು ಇಂದು ಇಂಜಿನೀಯರ್‍ಗಳು ಸಂಶೋಧನೆ, ಉತ್ಪಾದನೆಗಳಂತಹ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಕಾಲ್ ಸೆಂಟರ್ ಉದ್ಯೋಗಿ, ಟೆಲಿಫೋನ್ ಆಪರೇಟರ್  ಕೆಲಸಕ್ಕಾಗಿ ಮಾತ್ರ ಸೀಮಿತವಾಗಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಆ ಮಟ್ಟಕ್ಕೆ ಸಿದ್ದಗೊಳಿಸುವ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ವಿಜ್ಞಾನಮೇಳಗಳನ್ನು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು. ಮೇಕ್ ಇಂಡಿಯಾ ಯೋಜನೆ ಅರ್ಥಗರ್ಭಿತವಾಗಿದ್ದು ಅದನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಯೇ ಹೊರತು ಅದನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು. 
ಎ.ಜೆ.ಅಕಾಡೆಮಿಯ ನಿರ್ದೇಶಕ ಮುಹಮ್ಮದ್ ಅಬ್ದುಲ್ಲಾ ಜಾವಿದ್ ವಿಜ್ಞಾನಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನಗಳ ನಡುವಿನ ವ್ಯತ್ಯಾಸವನ್ನು ತಿಳಿಸುತ್ತ ವಿದ್ಯಾರ್ಥಿಗಳನ್ನು ವಿಜ್ಞಾನಮೇಳಕ್ಕೆ ಯಾವ ರೀತಿ ಸಿದ್ಧಗೊಳಿಸಬೇಕೆಂದು ಪ್ರೋಜೆಕ್ಟರ್ ಮೂಲಕ ವಿವರಿಸಿದರು. 
ಭಟ್ಕಳ ಅಂತರಶಾಲಾ ವಿಜ್ಞಾನ ಮೇಳದ ಸಂಯೋಕ ಎಂ.ಆರ್.ಮಾನ್ವಿ ಅತಿಥಿಗಳನ್ನು ಸ್ವಾಗತಿಸಿ, ಡಿ.15 ರಂದು ಆಯೋಜಿಸಲ್ಪಡುವ ವಿಜ್ಞಾನಮೇಳಕ್ಕೆ ಶಿಕ್ಷಕರನ್ನು ಸನ್ನದ್ಧುಗೊಳಿಸುವಲ್ಲಿ ಈ ಕಾರ್ಯಕ್ರಮ ದಿಕ್ಸೂಚಿಯಾಗಲಿದೆ ಎಂದರು.

ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ಭಟ್ಕಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜನಾಧಿಕಾರಿ ಯಲ್ಲಮ್ಮ ಮರಿಸ್ವಾಮಿ, ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಧ್ಯಕ್ಷ ಮುಖ್ತಾರ್ ಆಹಮದ್ ಕೊತ್ವಾಲ್, ನ್ಯಾಶನಲ್ ಕಾಲೋನಿ ಮುರುಢೇಶ್ವರದ ಸಿಆರ್ಪಿ ಸಯೀದಾ ಫಾತಿಮನ್ನಿಸಾ, ಭಟ್ಕಳ ಸಿಆರ್ಪಿ ಅಲಿ ಮನೆಗಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಅಬ್ದುಲ್ಲಾ ರಬೀ ಖಲಿಫಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. 

ಈ ಸಂದರ್ಭಲ್ಲಿ ಎ.ಜೆ.ಅಕಾಡೆಮಿಯಿಂದ ಸಿದ್ಧಗೊಳಿಸಿದ ‘ಶಿಕ್ಷಕರಿಗಾಗಿ ವಿಜ್ಞಾನಮೇಳ ಮಾರ್ಗದರ್ಶಿ’ ಪುಸ್ತಕವನ್ನು ಸಂಸ್ಥೆಯ ಹಿರಿಯ ಸದಸ್ಯ ಸೈಯ್ಯದ್ ಶಕೀಲ್ ಆಹ್ಮದ್ ಎಸ್.ಎಂ ಬಿಡುಗೊಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ ಸುಮಾರು 75 ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...