ಭಾವನಿಂದಲೆ ಅಪ್ರಾಪ್ತೆಯ ಅತ್ಯಾಚಾರ; ಪೊಲೀಸ್ ತನಿಖೆಯಿಂದ ಬಹಿರಂಗ; ಆರೋಪಿಯ ಬಂಧನ

Source: sonews | By Staff Correspondent | Published on 3rd December 2019, 11:23 PM | Coastal News | Incidents | Don't Miss |

ಭಟ್ಕಳ: ಅಪ್ರಾಪ್ತೆಯ ಮೇಲೆ ನಿರಂತರವಾಗಿ ಲೈಂಗಿಕ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯನ್ನಾಗಿದ ವ್ಯಕ್ತಿ ಅತ್ಯಾಚಾರಕ್ಕೊಳಗಾಗಿರುವ ಆಪ್ರಾಪ್ತೆಯ ಸ್ವಂತ ಅಕ್ಕನ ಗಂಡ(ಭಾವ) ಎಂಬ ವಿಷಯ ಪೊಲೀಸ ತನಿಖೆಯಿಂದ ಬಹಿರಂಗಗೊಂಡಿದ್ದು ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕೆಲವು ದಿನಗಳ ಹಿಂದೆ ಹೆಬಳೆ ಪಂಚಾಯತ್ ವ್ಯಾಪ್ತಿಯ ಹನೀಫಾಬಾದ್ ಪ್ರದೇಶದಲ್ಲಿ ಅಪ್ರಾಪ್ತೆ ಬಾಲಕಿಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದ್ದು ಘಟನೆಯ ತನಿಖೆಯನ್ನು ನಡೆಸಿದ ಪೊಲೀಸರು ನೈಜ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ಖಾಜಾ ಸಾಬ್ ಯಾನೆ ಖಾಜಾ ಮೊಯಿನು (26) ಎಂದು ಗುರುತಿಸಲಾಗಿದ್ದು ಮನೆಯಲ್ಲಿ ತನ್ನ ಪತ್ನಿ ಇಲ್ಲದ ಸಂದರ್ಭದಲ್ಲಿ ಪತ್ನಿಯ ಆಪ್ರಾಪ್ತ ತಂಗಿಯನ್ನೆ ತನ್ನ ಲೈಂಗಿಕ ತಿಟೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

ಮೊದಲು ಪೊಲೀಸರ ದಿಕ್ಕು ತಪ್ಪಿಸಲು ಪ್ರಕರಣದಲ್ಲಿ ಯುವತಿಯ ತಾಯಿ ಉತ್ತರ ಪ್ರದೇಶದ ಮೂಲದ ಸಾಹಿಲ್ ಎಂಬಾತನ ಯುವಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರು ಸಲ್ಲಿಸಿದ್ದಾರೆ. ಆರೋಪಿಯ ಅತ್ತೆಯ ದೂರಿನ್ವಯ ಮನೆಯಲ್ಲಿ ಯಾರು ಇಲ್ಲದ ಸಂದರ್ಬದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಯುವತಿ ಗರ್ಭಿಣಿ ಎಂದು ತಿಳಿಯುತ್ತಿರುವಂತೆ ಆತ ನಾಪತ್ತೆಯಾಗಿದ್ದಾನೆ. ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯರ ಬಳಿ ಚಿಕಿತ್ಸೆಗೆಂದು ಬಂದಾಗ ಯುವತಿ ಗರ್ಭಿಣಿಯಾಗಿದ್ದ ವಿಷಯ ಮನೆಯವರಿಗೆ ವಿಷಯ ತಿಳಿದಿದೆ ಎಂದು ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾರಿ ತಪ್ಪಿಸಿದ ಬಾಲಕಿಯ ತಾಯಿ: ತನ್ನ ಮಗಳ ಜೀವನ ಹಾಳಾಗಿದೆ ಎಂದು ಭಯದಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ತಾನೇ ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿನ ಗುಟ್ಟು ಆಸ್ಪತ್ರೆಗೆ ಬಾಲಕಿಯ ತಪಾಸಣೆಗೆ ಕರೆದುಕೊಂಡ ವೇಳೆ ಗೊತ್ತಾಗಿದ್ದು, ಅಳಿಯನ ಸಾಹಸ ಜಗತ್ತಿಗೆ ಗೊತ್ತಾಗಬಾರದೆಂದು ಅರಿತು ಪೊಲೀಸರ ತನಿಖೆಯನ್ನು ದಾರಿ ತಪ್ಪಿಸಿದ್ದು ನಂತರದಲ್ಲಿ ನಿಜವಾದ ಆರೋಪಿಯ ಬಂಧನದ ಬಳಿಕ ಪೊಲೀಸರಲ್ಲಿ ತಪ್ಪೊತ್ತಿಗೊಂಡಿದ್ದಾಳೆ

ನಿಜವಾದ ಆರೋಪಿ ಯುವತಿಯ ಭಾವ: ಪ್ರಕರಣ ಬೆನ್ನಟ್ಟಿದ ಸಿಪಿಐ ಪ್ರಕಾಶ ಹಾಗೂ ಗ್ರಾಮೀಣ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸುತ್ತಾರೆ. ಪ್ರಕರಣಕ್ಕೆ ಸಿಪಿಐ ಪ್ರಕಾಶ ಅವರು ನಿಜವಾದ ಆರೋಪಿಯ ಪತ್ತೆಗೆ ಪೊಲೀಸ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಎರಡು ದಿನ ಕಾಲಾವಕಾಶ ನೀಡಿದ್ದರು. ಇದಾದ ಬಳಿಕ ದೂರು ಸಲ್ಲಿಸಿದ ಬಾಲಕಿಯ ಮನೆಯ ಸುತ್ತಮುತ್ತ ಪೊಲೀಸರು ಕೆಲ ಮಾಹಿತಿಯನ್ನು ಕೆಲಹಾಕಿದ್ದಾರೆ. ವೇಳೆ ಅಪ್ರಾಪ್ತೆ ಬಾಲಕಿಯ ಅಕ್ಕನ ಗಂಡ (ಭಾವ) ಮೇಲೆ ಅನುಮಾನ ಮೂಡುತ್ತದೆ. ಇದೇ ವೇಳೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆಸ್ಪತ್ರೆ ವೈದ್ಯರು ಒಂದು ಬಾಲಕಿ ಅಥವಾ ಮಗು ಬದುಕುವ ಸಾಧ್ಯತೆ ಇರುವ ಬಗ್ಗೆ ಖಚಿತ ಪಡಿಸಿದ್ದು ಹಿನ್ನೆಲೆ ಮಗುವು ಸಹ ಸಾವನ್ನಪ್ಪಿದ್ದ ಅಪ್ರಾಪ್ತ ಬಾಲಕಿ ಬದುಕುಳಿಯುತ್ತಾಳೆ.

ಬಾಲಕಿಯ ಆರೋಗ್ಯ ವಿಚಾರಿಸಲು ಇದೇ ವೇಳೆ ಬಂದಿದ್ದ ಬಾಲಕಿಯ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಖಾಜಿಯ ಇಬ್ರಾಹಿಂ ಶಾಬನನ್ನು ಅನುಮಾನಗೊಂಡು ಉಡುಪಿಯಿಂದ ವಶಕ್ಕೆ ಪಡೆದು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಾನೇ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಒಪ್ಪಿಗೊಂಡಿದ್ದಾನೆ.

ಆರೋಪಿಯೂ ತನ್ನ ಹೆಂಡತಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟು ಈಗ ಅತ್ತೆಯ ಮನೆಯಲ್ಲಿಯೇ ವಾಸವಿದ್ದು, ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ. ವೇಳೆ ಮನೆಯ ಮಂದಿಯೆಲ್ಲ ಕೆಲಸಕ್ಕೆಂದು ಹೋದ ವೇಳೆ ತನ್ನ ಹೆಂಡತಿ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗಕ್ಕೆ ಒಪ್ಪಿಸಿದ್ದು ಕಾರವಾರ ಸಬ್ ಜೈಲಿಗೆ ಕರೆದೊಯ್ದಿದ್ದಾರೆ.

Read These Next

ಭಟ್ಕಳ ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲೆಯ ಉತ್ತಮ ಆಸ್ಪತ್ರೆ ಪ್ರಶಸ್ತಿ

2019-20ನೇ ಸಾಲಿನ ಆರೋಗ್ಯ ಇಲಾಖೆಯ ಕಾಯಕಲ್ಪ ಕಾರ್ಯಕ್ರಮ ಅನುಷ್ಠಾನ ಯೋಜನೆಯಡಿಯಲ್ಲಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರವು, ಜಿಲ್ಲೆಯ ...

ಜಿಲ್ಲಾ ಮೀನು ಮಾರಾಟ ಫೆಡರೇಶನ್ ಚುನಾವಣೆ. ರಾಜು ತಾಂಡೇಲ್ ಟೀಮ್ಗೆ ಭರ್ಜರಿ ಗೆಲುವು.

ಕಾರವಾರ : ಕರಾವಳಿಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಉತ್ತರಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಚುನಾವಣೆಯಲ್ಲಿ ಮೀನುಗಾರ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಮತ ಚಲಾಯಿಸಿದ ಕೋವಿಡ್ ಸೋಂಕಿತರು

ಧಾರವಾಡ : ಬುಧವಾರ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ...

ತಾಲ್ಲೂಕು ಪಂಚಾಯಿತ ಪ್ರಥಮ ದರ್ಜೆ ಸಹಾಯಕನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

ಶ್ರೀನಿವಾಸಪುರ: ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಲಾಗಿದ್ದ ಮಾಹಿತಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ, ತಾಲ್ಲೂಕು ಪಂಚಾಯಿತಿ ಪ್ರಥಮ ...