ಸೀರತ್ ಪ್ರಬಂಧ ಸ್ಪರ್ಧೆ ವಿಜೇತರಿಗಾಗಿ ಬಹುಮಾನ ವಿತರಣಾ ಸಮಾರಂಭ

Source: sonews | By Staff Correspondent | Published on 2nd February 2019, 6:28 PM | Coastal News | State News | Don't Miss |

•    ಅನಿಷ್ ಎನ್. ಭಂಡಾರ್ಕರ್ ಮತ್ತು ವಿದ್ಯಾ ಮಡಿಲಿಗೆ ಪ್ರಥಮ ಬಹುಮಾನ

ಶಿರಸಿ: ಜಮಾಅತೆ ಇಸ್ಲಾಮಿ ಹಿಂದ್ ಶಿರಸಿ ಘಟಕವು ಸೀರತ್ ಆಭಿಯಾನದ ಅಂಗವಾಗಿ ತಾಲೂಕಿನ ಪಿಯುಸಿ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಉರ್ದು ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಬಹುಮಾನ ವಿತರಣಾ ಸಮಾರಂಭ ನಡೆಯಿತು. 

ಸಮಾರಂಭದಲ್ಲಿ ಬಹುಮಾನ ವಿತರಸಿ ಸುಮುಖ ಟಿ.ವಿ ಪ್ರಧಾನ ಸಂಪಾದಕ ಸುಭ್ರಾಯ ಭಟ್ ಭಕ್ಕಳ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಧರ್ಮಗಳ ಸಾರವನ್ನು ಅರಿತುಕೊಂಡು ಅದರಂತೆ ನಡೆದು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್(ಸ) ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಆಲ್ ಇಂಡಿಯಾ ಟೀಚರ್ಸ್ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಎಂ.ಆರ್ ಮಾನ್ವಿ, ಪ್ರವಾದಿ ಮುಹಮ್ಮದ್(ಸ) ರ ಬದುಕು ಎಲ್ಲರಿಗೂ ಮಾದರಿಯಾಗಿದೆ. ಅವರು ಕೇವಲ ಉಪದೇಶವನ್ನು ನೀಡದೆ ಪ್ರಯೋಗಿಕವಾಗಿ ತಮ್ಮ ಬದುಕಿನಲ್ಲಿ ನುಡಿದಂತೆ ನಡೆದು ತೋರಿಸಿದರು. ಸಮಾನತೆ, ಬ್ರಾತೃತ್ವ, ಪ್ರೀತಿ ವಿಶ್ವಾಸದೊಂದಿಗೆ ಬದುಕುವುದನ್ನು ಕಲಿಸಿಕೊಟ್ಟ ಆದರ್ಶ ಜೀವಿಯಾಗಿದ್ದರು ಅವರು ಬದುಕು ಇಂದಿಗೂ ಪ್ರಸ್ತುತವಾಗಿದೆ ಎಂದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅನಂತ್ ಕೊರವರ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಗೌರವಯುತ ಬದುಕನ್ನು ನಡೆಸಲು ಪ್ರವಾದಿ ಮುಹಮ್ಮದ್ ಪೈಗಂಬರ್ ಪ್ರೇರಕ ಶಕ್ತಿಯಾಗಿದ್ದಾರೆ. ಅವರಿಂದ ನಾವು ಬಹಳಷ್ಟನ್ನು ಕಲಿಯಬೇಕಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ ವಹಿಸಿದ್ದರು. ಶಿರಸಿ ಘಟಕದ ಅಧ್ಯಕ್ಷ ಅಬ್ದುಲ್ ಮನ್ನಾನ್ ಪ್ರಸ್ತಾವಿಕವಾಗಿ ಮಾತನಾಡಿ ಧನ್ಯವಾದ ಅರ್ಪಿಸಿದರು. ಶಿಕ್ಷಕ ಆಸಿಫ್ ಕಾರ್ಯಕ್ರಮ ನಿರೂಪಿಸಿದರು. 

ಪ್ರಬಂಧ ಸ್ಪರ್ಧೆಯ ವಿಜೇತರು:
ಪದವಿ ಪೂರ್ವ ವಿಭಾಗ: ಪ್ರಥಮ ಬಹುಮಾನ; ಅನಿಷ್ ಎನ್. ಭಂಡಾರ್ಕರ್ ಎಂ.ಇ.ಎಸ್. ಪಿಯು ಕಾಲೇಜ್ ಶಿರಸಿ, ದ್ವಿತೀಯಾ ಬಹುಮಾನ; ಸುಮಿತ್ರ ಬಾಬು ಶೇಟ್ ಮಾರಿಕಾಂಬ ಸರ್ಕಾರಿ ಪಿಯುಕಾಲೇಜ್, ತೃತೀಯ ಪ್ರೀಯಾ ವಿಜಯ ನಾಯ್ಕ ಶ್ರೀದೇವಿ ಪಿಯುಕಾಲೇಜ್ ಹುಲೆಕಲ್.

ಪ್ರೌಢಶಾಲಾ ವಿಭಾಗ: ಪ್ರಥಮ; ವಿದ್ಯಾ. ಪಿ, ಮಲೇನಾಡ್ ಪ್ರೌಢಶಾಲೆ ದಾಸನಕೊಪ್ಪ, ದ್ವಿತೀಯಾ: ನಿತ್ಯಾನಂದಾ ಬಿ. ಎನ್.ಎಸ್.ಪಿ. ಪ್ರೌಢಶಾಲೆ ಗುಡ್ನಾಪುರ, ತೃತೀಯಾ; ರಶ್ಮಿ ಹೆಗಡೆ ಶ್ರೀ ಗಜಾನನ ಪ್ರೌಢಶಾಲೆ ವಾನಳ್ಳಿ

ಸಮಾಧಾನಕರ ಬಹುಮಾನ:
ತಿತಿಕ್ಷಾ ಸಿ.ಭಟ್, ನಯನಾ ಎಸ್. ಆಚಾರಿ, ಅಂಇತಾ ಆರ್.ಗೌಡ, ಕೀರ್ತಿ ನಾಯ್ಕ, ಸೌಮ್ಯ ಅರವಿಂದ್ ಹಗಡೆ, ಶಾಕಿರಾ ಸಾಹಿಲ್ ಹಮೀದ್, ಪ್ರೀತಿ ಎಸ್. ಗೌಡ, ಅಪೂರ್ವ ಎನ್. ಭಂಡಾರ್ಕರ್, ಪ್ರತಿಮಾ ನಾಯ್ಕ, ನವ್ಯಾ ಈಶ್ವರ್ ಮಡಿವಾಳ, ಪುಷ್ಪಾ ನಾಗರಾಜ್ ಗೌಡ, ಅಮೃತಾ ಎಸ್.ಕೆ., ರಕ್ಷಿತಾ ಮಂಜುನಾಥ್ ನಾಯ್ಕ, ಆಲಿಯಾ ಎ.ರವೂಫ್, ವಿಜೇತಾ ಎಂ.ಹೆಗಡೆ, ನಿಸರ್ಗ ಬಿ. ಕುಲ್ಕರ್ಣಿ, ಸುಚಿತ್ರಾ ಎಂ.ಮುಕ್ರಿ, ದಿವ್ಯ ಎನ್. ಮರಾಠಿ, ಮಝ್ನಾ ಕೌಸರ್, ಅನಿತಾ ವಸಂತ್ ನಾಯ್ಕ,

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...