ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿ:ಸಚಿವ ಕೋಟ ಶ್ರೀನಿವಾಸ ಪೂಜಾರಿ

Source: so news | By MV Bhatkal | Published on 28th January 2023, 12:22 AM | Coastal News | Don't Miss |

ಭಟ್ಕಳ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಗದ್ದೆ ಹೆಬಳೆ ಇದರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 
ನಂತರ ಮಾತನಾಡಿದ ಅವರು ಇಂದು ಜನಸಾಮಾನ್ಯರ ಮಕ್ಕಳೂ ಕೂಡಾ ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ನಮ್ಮ ಗುರಿಯಾಗಿದ್ದು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ವದಗಿಸುವಲ್ಲಿ ಕೂಡಾ ಸರಕಾರ ಕಾಳಜಿ ವಹಿಸಿದೆ. ಶಿಕ್ಷಣ ಭಾರತದ ಮುಂದಿನ ಉತ್ತಮ ಪ್ರಜೆಗಳನ್ನು ರೂಪಿಸಬೇಕು, ಅಂತಹ ಶಿಕ್ಷಣ ಇಂದಿನ ಅಗತ್ಯವಾಗಿದೆ. ಆದರೆ ಶಿಕ್ಷಿತರೇ ಇಂದು ಕುಕ್ಕರ್‌ನಲ್ಲಿ ಬಾಂಬ್‌ಇಟ್ಟುಕೊAಡು ಹೋಗುತ್ತಾರೆಂದರೆ ಬೇಸರವಾಗುತ್ತದೆ ಎಂದರು. 
ನಾವು ನಮ್ಮ ಮಕ್ಕಳಿಗೆ ನಮ್ಮ ದೇಶ ದೊಡ್ಡದು ಎನ್ನುವುದನ್ನು ಚಿಕ್ಕಂದಿನಿAದಲೇ ಕಲಿಸುವ ಅಗತ್ಯತೆ ಇದೆ ಎಂದೂ ಅವರು ಹೇಳಿದರು.  
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಮಾತನಾಡಿದ ಶಾಸಕ ಸುನಿಲ್ ನಾಯ್ಕ ಶಾಸಕನಾದ ನಂತರ ಶಿಕ್ಷಣಕ್ಕೆ ಮತ್ತು ದೇವಾಲಯಗಳಿಗೆ ಹೆಚ್ಚು ಸಹಾಯ ಮಾಡಿದ್ದೇನೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರಕಾರಿ ಶಾಲೆಯಲ್ಲಿ ಉತ್ತಮ ತರಬೇತಿ ಹೊಂದಿದ ಶಿಕ್ಷಕರು ಇದ್ದು ಯಾರೂ ಕೂಡಾ ತಮ್ಮ ಮಕ್ಕಳಲನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂಜರಿಯುವ ಅಗತ್ಯವಿಲ್ಲ. ಶಾಲಾ ಶಿಕ್ಷಣದೊಂದಿಗೆ ಪಾಲಕರೂ ಕೂಡಾ ಮನೆಯಲ್ಲಿ ಮಕ್ಕಳ ಶಿಕ್ಷಣ, ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಕರೆ ನೀಡಿದರು. ಮೊದಲು ಕೇವಲ ಉಳ್ಳವರ ಸೊತ್ತಾಗಿದ್ದ ವಿದ್ಯೆ ಇಂದು ಎಲ್ಲರ ಸೊತ್ತಾಗಿದೆಯಲ್ಲದೇ ಯಾವುದೇ ಸರಕಾರ ಬಂದರೂ ಸಹ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ನಿಮ್ಮ ಮಕ್ಕಳನ್ನು ಸಂಸ್ಕಾರವAತರನ್ನಾಗಿಸುವ ಜವಾಬ್ದಾರಿ ಪಾಲಕರಲ್ಲಿದೆ ಎಂದೂ ಅವರು ಪಾಲಕರಿಗೆ ಕಿವಿ ಮಾತು ಹೇಳಿದರು. 
ಕಾರ್ಯಕ್ರಮದಲ್ಲಿ ಹೊನ್ನೆಗದ್ದೆ ಶಾಲೆಯ ಹಳೇ ವಿದ್ಯಾರ್ಥಿ ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡುತ್ತಿರುವ ಡಾ. ದೇವೇಂದ್ರ ಎನ್. ನಾಯ್ಕ  ಮಾತನಾಡಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಅಂಗನವಾಡಿ ಶಿಕ್ಷಕಿ, ಅಡುಗೆಯವರು, ಸಹಾಯಕರನ್ನು ಗೌರವಿಸಲಾಯಿತು. ಕುಂದಾಪುರ ಬಂಡಾರ್‌ಕರ‍್ಸ್ ಕಾಲೇಜಿನ ಪ್ರಾಂಶುಪಾಲ ಗೋವಿಂದ ಗೊಂಡ ಉಪನ್ಯಾಸ ಮಾಡಿದರು. 
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಕುಪ್ಪು ಗೊಂಡ, ಸದಸ್ಯರುಗಳಾದ ಮಾದೇವಿ ಎನ್. ಮೊಗೇರ, ಚಂದ್ರು ಎಂ. ಗೊಂಡ, ವಿಜೇತ ಆರ್. ಶೆಟ್ಟಿ, ಶಶಿಕಲಾ ಎನ್. ಮೊಗೇರ, ನಿವೃತ್ತ ಶಿಕ್ಷಕ ಕೆ.ಜೆ. ನಾಯ್ಕ, ಗೋಪಾಕೃಷ್ಣ ಬ್ಯಾಂಕ ಸಿಬ್ಬಂದಿ ನಾಗರಾಜ ಕೆ. ಶೆಟ್ಟಿ, ಪ್ರಥಮ ದರ್ಜೆ ಕಾರ್ಯದರ್ಶಿ ಲೋಕೇಶ ಕೆ. ಗೊಂಡ, ಶಿಕ್ಷಕ ರಾಜೇಶ ಎನ್. ನಾಯ್ಕ, ಸ.ಹಿ.ಪ್ರಾ ಶಾಲೆ ತೆಂಗಿನಗುAಡಿಯ ಶಿಕ್ಷಕಿ  ಹೇಮಲತಾ ಪಿ. ಮೊಗೇರ, ಮೊಗೇರ ಸಮಾಜದ ಪ್ರಮುಖ ನಾರಾಯಣ ಮೊಗೇರ, ನಾಮಧಾರಿ ಸಮಾಜದ ಪ್ರಮುಖ ಶಿವರಾಮ್ ಎನ್. ನಾಯ್ಕ, ದಾನಿಗಳು ಯಮುನಾ ಆರ್. ಶೆಟ್ಟಿ, ಸಾ.ಗ. ಸಮಿತಿ ಹೆರ್ತಾರ-ಹೊನ್ನೆಗದ್ದೆ ಅಧ್ಯಕ್ಷ ನಾರಾಯಣ ಮೊಗೇರ, ಬೋಟ ಚಾಲಕ ಹನುಮಂತ ಎಸ್. ಮೊಗೇರ, ಅಂಬೇಡ್ಕರ್ ಯುವಕ ಸಂಘ ಹೊನ್ನೆಗದ್ದೆ ಅಧ್ಯಕಷ ಧನಂಜಯ ಆರ್. ಮೊಗೇರ, ಅಮೃತ ಮಹೋತ್ಸವ ಸಮಿತಿ ಅಧ್ಯ÷್ಕಷ ರೋಹಿದಾಸ ಎಂ.ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷö್ಮಣ ಬಿ. ಮೊಗೇರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಗಜಾನನ ಎಸ್. ಮೊಗೇರ, ಮುಖ್ಯೋಪಾಧ್ಯಾಯ ದೇವಪ್ಪ ಕೆ. ಅಳ್ವೇಕೋಡಿ ಉಪಸ್ಥಿತರಿದ್ದರು. 
ಮುಖ್ಯೋಪಾಧ್ಯಾಯ ಡಿ.ಕೆ. ಮೊಗೇರ ವರದಿ ವಾಚನ ಮಾಡಿದರು. ಶಿಕ್ಷಕರಾದ ನಾರಾಯಣ ನಾಯ್ಕ, ಜನಾರ್ಧನ ಮೊಗೇರ, ಸುಮಲತಾ ನಾಯ್ಕ ನಿರ್ವಹಿಸಿದರು.  ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನೊರಂಜನಾ ಕಾರ್ಯಕ್ರಮ ಜರುಗಿತು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...