ನವೀಕರಣಗೊಂಡ ಉದ್ಯಾನವನ ಉದ್ಘಾಟನೆ. ಮನಸೂರೆಗೊಂಡ ಜನಪರ ಉತ್ಸವ. ಜನಪರ ಉತ್ಸವದಲ್ಲಿ ನಾಡಿನ ಜಾನಪದ ಸಿರಿ ಅನಾವರಣ

Source: SO News | By Laxmi Tanaya | Published on 18th December 2020, 10:00 AM | State News | Don't Miss |

ಬಳ್ಳಾರಿ : ಬಂತು ಬಂತು ಸುಗ್ಗಿ..ಬಂತು ಬಂತು ಸುಗ್ಗಿ... ರೈತರ ಮನಗಳು ಕುಣಿದು ಕುಣಿದಾಡಿತು ಹಿಗ್ಗಿ ಹಿಗ್ಗಿ.. ಬೆವರಿನ ಹನಿಗಳು ಬೆಳೆಯಾಗಿ ಬಂತಿಲ್ಲಿ...ಎಂಬ ಜಾನಪದ ಹಾಡಿಗೆ ಪುಟ್ಟ ಮಕ್ಕಳು ಸಖತ್ತಾಗಿ ನೃತ್ಯಪ್ರದರ್ಶಿಸುತ್ತಿದ್ದರೇ ನೆರೆದಿದ್ದವರ ಮನಗಳೆಲ್ಲ ಸುಗ್ಗಿಯ ಮೂಡಿನತ್ತ..ಮತ್ತೊಂದೆಡೆ ರಾಮಾಯಣದ ಪ್ರಸಂಗ..ಇನ್ನೊಂದೆಡೆ ಅಪರೂಪದ ಸಿಂಧೋಳ ನೃತ್ಯ..
ಇದೆಲ್ಲ ಕಂಡುಬಂದಿದ್ದು ನಗರದ ಸಾಂಸ್ಕøತಿಕ ಸಮುಚ್ಛಯ ಆವರಣದಲ್ಲಿರುವ ಬಯಲುರಂಗಮಂದಿರದಲ್ಲಿ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯದ ನವೀಕರಣಗೊಂಡ ಉದ್ಯಾನವನದ ಉದ್ಘಾಟನೆ ಹಾಗೂ ವಿಶೇಷ ಘಟಕ ಯೋಜನೆ ಅಡಿ ಬುಧವಾರ ಏರ್ಪಡಿಸಿದ್ದ ಜನಪರ ಉತ್ಸವದಲ್ಲಿ ಇಡೀ ನಾಡಿನ ಜಾನಪದ ಸಿರಿಯೇ ಅನಾವರಣಗೊಂಡಿತು. ಇಡೀ ಕಾರ್ಯಕ್ರಮ ಜನಮನಸೂರೆಗೊಂಡಿತು.

ಕೊರೊನಾ ಎಫೆಕ್ಟ್ ನಿಂದಾಗಿ ಕಳೆದ ಒಂಬತ್ತು ತಿಂಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಿಂದ ಸ್ಥಗಿತಗೊಂಡಿದ್ದ ಬಯಲುರಂಗಮಂದಿರದಲ್ಲಿ ಜನಪರ ಉತ್ಸವದ ಸುದ್ದಿ ಅರಿತು ಅಸಂಖ್ಯಾತ ಸಾಂಸ್ಕøತಿಕ ಪ್ರೇಮಿಗಳು ಜನಪರ ಉತ್ಸವಕ್ಕೆ ಹರಿದುಬಂದರು;ಅಷ್ಟೇ ಉತ್ಸಾಹದಿಂದ ಎಲ್ಲ ಕಲಾತಂಡಗಳ ಪ್ರದರ್ಶನಗಳನ್ನು ವೀಕ್ಷಿಸಿದರು.

ಸೂರ್ಯಕಲಾ ಟ್ರಸ್ಟ್ ನ ಕಲಾತಂಡದ ಜಾನಪದ ಹಾಡಿನ ನೃತ್ಯದಿಂದ ಆರಂಭವಾದ ಉತ್ಸವದಲ್ಲಿ ಒಂದಕ್ಕಿಂತ ಒಂದು ಕಲಾತಂಡಗಳು ಅದ್ಭುತ ಪ್ರದರ್ಶನ ನೀಡಿದವು. ಕಡ್ಡಿರಾಂಪುರದ ಕೆ.ರಾಮು ತಂಡದ ಹಗಲುವೇಷದ ರಾಮಾಯಣ ಪ್ರಸಂಗ ಅತ್ಯುದ್ಭವಾಗಿತ್ತು. ಅಳಿವಿನಂಚಿನಲ್ಲಿರುವ ಸಿಂಧೋಳ ಕುಣಿತವನ್ನು ರಾಹುಲ್ ಮತ್ತು ನಾಗಪ್ಪ ತಂಡದವರು ಪ್ರದರ್ಶಿಸಿದರು. ಸಾಗರದ ಕೆಂಪಮ್ಮ ಅವರ ಮಹಿಳಾ ಡೊಳ್ಳು ಕುಣಿತ,ಸಂಡೂರು ಪಾರುಬಾಯಿ ತಂಡದವರ ಲಂಬಾಣಿ ನೃತ್ಯ, ಕಾರಿಗನೂರಿನ ನಾರಾಯಣಪ್ಪ ತಂಡದ ತೊಗಲುಗೊಂಬೆ ಸೇರಿದಂತೆ ವಿವಿಧ ಕಲಾತಂಡಗಳು ಪ್ರದರ್ಶನಗಳು ನೆರೆದಿದ್ದವರ ಮನಸೂರೆಗೊಳ್ಳುವಂತೆ ಮಾಡಿದವು.

ಕಹಳೆ ವಾದನ,ನಂದಿ ಧ್ವಜ, ಚಿಟ್ಟಿ ಮೇಳ, ಸುಗಮ ಸಂಗೀತ, ಯುಗಳ ನೃತ್ಯ,ತತ್ವಪದಗಳು,ಸಾಂಪ್ರಾದಾಯಿಕ ಹಾಡುಗಳು,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ಬುರ್ರಕಥಾ,ಪಟಕುಣಿತ,ಕರಗ ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಕಲಾವಿದರು ಜನಪರ ಉತ್ಸವದಲ್ಲಿ ಪ್ರದರ್ಶಿಸಿದರು.
ನವೀಕರಣಗೊಂಡ ಉದ್ಯಾನವನ ಹಾಗೂ ಜನಪರ ಉತ್ಸವಕ್ಕೆ ಚಾಲನೆ ನೀಡಿದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಪೂರ್ವ ಕಾಲದ ಪ್ರಾಚೀನ ಸಂಸ್ಕ್ರತಿ, ಕಲೆ, ಸಾಹಿತ್ಯ ಮುಂದಿನ ಯುವ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಗ್ರಂಥಾಲಯದ ಉದ್ಯಾನವನದಲ್ಲಿ ನಿರ್ಮಿಸಿರುವ ಹಲವಾರು ಶಿಲಾನ್ಯಾಸಗಳು , ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತವೆ. ಇಲ್ಲಿ ನಿರ್ಮಿಸಿರುವ ಉದ್ಯಾನವನ ಹಿರಿಯ ನಾಗರೀಕರ ಪ್ಯಾರಡೈಸ್ ಆಗಿದೆ ಎಂದರು.

ನಮ್ಮ ರಾಜ್ಯದ ಭಾಷೆ, ಕಲೆ, ಸಂಸ್ಕೃತಿ , ಆಚಾರ- ವಿಚಾರ ಇತರೆ ರಾಜ್ಯಗಳಿಗೆ ತಿಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಪ್ರಮುಖವಾಗಿದೆ ಎಂದು ಹೇಳಿದ ಶಾಸಕರು ಈ ರೀತಿಯ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಇನ್ನಷ್ಟು ನಡೆಯಲಿ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಮಹೇಂದ್ರ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯು ಕಲೆ, ಸಂಸ್ಕೃತಿ, ಸಾಹಿತ್ಯ ವಿಷಯದಲ್ಲಿ ಅದು ಆಗಲೇ ತನ್ನ ಅಸ್ತಿತ್ವವನ್ನು ಪಡೆದುಕೊಂಡಿದೆ. ಅದನ್ನು ಉಳಿಸಿ - ಬೆಳೆಸಿಕೊಂಡು ಹೋಗುವ ಕಾರ್ಯ ನಿರಂತರವಾಗಿ ಸಾಗಲಿ.  ನಮ್ಮ ದೇಶದ ಸಂಸ್ಕೃತಿಯನ್ನು ನಾಶ ಮಾಡುವ ಕೆಲಸ ಬಹಳ ಹಿಂದಿನ ಕಾಲದಿಂದಲೂ ನಡೆಯುತ್ತಿದೆ. ಆದರೂ ಅದು ಸಾಧ್ಯವಾಗಿಲ್ಲ. ತನ್ನ ಮಹತ್ವವನ್ನು ಹಾಗೆ ಉಳಿಸಿಕೊಂಡು ಬಂದಿದೆ ಎಂದು ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಎಸ್. ಹೊಸಮನಿ ಅವರು ಮಾತನಾಡಿ, ಇಲ್ಲಿ ನಿರ್ಮಿಸಿರುವ ಉದ್ಯಾನವನ್ನು ನೋಡುತ್ತಿದ್ದರೆ ಬೆಂಗಳೂರಿನಲ್ಲಿ ಇದೀವಾ ಎಂದು ಭಾಸವಾಗುತ್ತದೆ ಅಷ್ಟು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಉದ್ಯಾನವನದಲ್ಲಿ ಅಳವಡಿಸಲಾಗಿರುವ ಮಹನೀಯರ ಚಿತ್ರಗಳ ಪಕ್ಕದಲ್ಲಿ ಅಳವಡಿಸಿರುವ ಬಾರ್‍ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ತಂತ್ರಜ್ಞಾನ ತುಂಬಾ ವಿಶೇಷವಾದುದು ಎಂದರು.

ಸಂಸ್ಕೃತಿಯನ್ನು ಉಳಿಸುವ ಕೆಲಸ ಇಲ್ಲಿಗೆ ನಿಲ್ಲದೆ, ಇಂತಹ ಚಟುವಟಿಕೆಗಳು ಸದಾ ಕಾಲ ಹೀಗೆ ನಡೆಯಲಿ ಎಂದು ಆಶಿಸಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿ. ನಮ್ಮ ರಾಜ್ಯ ಹಲವು ಭಾಷೆಗಳನ್ನು ಒಳಗೊಂಡು, ವೈವಿದ್ಯತೆಯಿಂದ ಕೂಡಿರುವ  ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದೆ. ಈ ಕಾರ್ಯಕ್ರಮ ಅಂತಹ ವಿಶೇಷ ಸಂಸ್ಕೃತಿಯನ್ನು ಬಿಂಬಿಸುತ್ತದೆ.  ಮಾನವ ಮಾನವಾನಗಿ ಬದುಕಲು ಪರಿಸರ ಬೇಕು, ಇಂತಹ  ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡಲು   ಉದ್ಯಾನವನಗಳ ನಿರ್ಮಾಣ ಅತ್ಯವಶ್ಯಕ. ಈ ಉದ್ಯಾನವನವು ಹಿರಿಯರ ವಿಶ್ರಾಂತ ತಾಣವಾಗಿ ,  ದಣಿದು ಬಂದವರಿಗೆ ಒಂದಿಷ್ಟು  ನೆಮ್ಮದಿ ನೀಡಲು,  ಮಕ್ಕಳು ಆಟವಾಡಲು ಸಹಕಾರವಾಗುತ್ತದೆ ಎಂದರು.

ಉದ್ಯಾನವನ ನವೀಕರಣಕ್ಕೆ ಸಹಕರಿಸಿದ ಮಿನೆರಾ ಸ್ಟೀಲ್‍ನ ಹನುಮರೆಡ್ಡಿ, ಉದ್ಯಾನವನ ನಿರ್ಮಾಣಕ್ಕೆ ಸಹಕರಿಸಿದ ಪರಿಸರ ಪ್ರೇಮಿ ಶಶಿಧರ್ ಅವರನ್ನು ಸನ್ಮಾನಿಸಲಾಯಿತು.

ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ  ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಕೆ.ಲಕ್ಷ್ಮೀಕಿರಣ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ, ನಿರ್ಮಿತಿ ಕೇಂದ್ರದ ಅಧಿಕಾರಿ ಮೋಹನ್ ಕೃಷ್ಣ,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ಸೇರಿದಂತೆ ಇತರರು ಇದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...