ಜು.27,28 ರಂದು ಭಟ್ಕಳದ ವೇಲ್ಪೇರ ಆಸ್ಪತ್ರೆಯಲ್ಲಿ ದೇಶದ ಖ್ಯಾತ ಹೃದ್ರೋಗ ತಜ್ಞರಿಂದ ಉಚಿತ ಹೃದಯ ತಪಾಸಣೆ ಶಿಬಿರ

Source: sonews | Published on 22nd July 2019, 8:05 PM | Coastal News | Don't Miss |

ಭಟ್ಕಳ: ಕೇರಳದ ಪ್ರಖ್ಯಾತ ಮೈತ್ರಾ ಆಸ್ಪತ್ರೆ ಹಾಗು ವೆಲ್ಫೇರ್ ಆಸ್ಪತ್ರೆ ಭಟ್ಕಳ ಇದರ ಸಹಯೋಗದೊಂದಿಗೆ ಜುಲೈ 27 ಮತ್ತು 28ರಂದು ಉಚಿತ ಹೃದ್ರೋಗ್ರ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದ್ದು ಇದರ ಭಟ್ಕಳದ ನಾಗರೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮೈತ್ರಾ ಆಸ್ಪತ್ರೆಯ ಬುಸಿನೆಸ್ ಡೆವಲೆಪ್ಮೆಂಟ್ ಮುಖ್ಯಸ್ಥ ಮುರುಳಿ ಥರಾವತ್ ತಿಳಿಸಿದ್ದಾರೆ.

ಅವರು ಭಾನುವಾರದಂದು ಇಲ್ಲಿನ ಖಾಸಗಿ ಹೋಟೆಲನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

ಈ ಶಿಬಿರದಲ್ಲಿ ದೇಶದ ನಂಬರ್ ಒನ್ ಹೃದ್ರೋಗತಜ್ಞ ಮೈತ್ರಾ ಆಪಸ್ಪತ್ರೆಯ ನಿರ್ದೇಶಕ ಹಾಗೈ ವೈದ್ಯಕೀಯ ಸೇವೆಗಳ ಪ್ರಮುಖ ಡಾ. ಅಲಿ ಫೈಝಲ್ ತಮ್ಮ ಸೇವೆಯನ್ನು ನೀಡುತ್ತಿದ್ದು ಇವರೊಂದಿ ಕನ್ಸಲ್ಟೆಂಟ್ ಕಾರ್ಡಿಯೋಲೊಜಿಸ್ಟ್ ಡಾ. ಶಾಜುದ್ದೀನ್ ಹಾಗೂ ಅವರ ತಾಂತ್ರಿಕ ತಂಡದ ಸದಸ್ಯರ ಸೇವೆಯು ಲಭ್ಯವಾಗಲಿದೆ. ಸಾರ್ವಜನಿಕರು ಇದರ ಸದೂಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದ ಅವರು ಯಾರು ಮೊದಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುತ್ತಾರೋ ಅವರಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಈ ಶಿಬಿರದಲ್ಲಿ ರಕ್ತ ತಪಾಸಣೆ, ಇಸಿಜಿ, eಛಿho ಸೇರಿದಂತೆ ವಿವಿಧ ಹೃದ್ರೋಗಕ್ಕೆ ಸಂಬಂಧಿಸಿದ ಕಾಯಿಲೆಗೆ ಉಚಿತ ಪರೀಕ್ಷೆಯನ್ನು ಕೈಗೊಂಡು ಸೂಕ್ತ ಸಲಹೆ ನೀಡಲಾಗುವುದು. 

ಈಗಾಗಲೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದವರು ತಮ್ಮ ಹಿಂದಿನ ವೈದ್ಯರ ಫೈಲ್ ನ್ನು ಶಿಬಿರದಲ್ಲಿ ಬರುವಾಗ ತರಬೇಕೆಂದು ಅವರು ತಿಳಿಸಿದ್ದಾರೆ. ಜು.27 ರಂದು ಬೆಳಿಗ್ಗೆ 11:00 ಗಂಟೆಯಿಂದ ಶಿಬಿರ ಉದ್ಘಾಟನೆಗೊಳ್ಳಲಿದೆ. ಜುಲೈ 28 ರಂದು ಮಧ್ಯಾಹ್ನ 1:00 ಗಂಟೆ ವರೆಗೆ ಶಿಬಿರ ನಡೆಯುವುದು ಹಾಗೂ ರಿಜಿಸ್ಟೇಶನಗಾಗಿ +919019330977 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ವೇಲ್ಪೇರ ಆಸ್ಪತ್ರೆ ವೈದ್ಯ ಡಾ. ಜಹೀರ ಕೋಲಾ, ವೇಲ್ಪೇರ ಆಸ್ಪತ್ರೆ ಮುಖ್ಯಸ್ಥ ಅಬುಲ್ ಅಲಾ  ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...