ಹೈಕೋರ್ಟ್‌ಗಳಲ್ಲಿ 59 ಲಕ್ಷ, ಸುಪ್ರೀಂಕೋರ್ಟ್‌ನಲ್ಲಿ 69,511 ಪ್ರಕರಣಗಳು ಬಾಕಿ; ಸಂಸತ್‌ಗೆ ಕೇಂದ್ರ ಸರಕಾರದ ಮಾಹಿತಿ

Source: Vb | By I.G. Bhatkali | Published on 11th February 2023, 2:51 PM | National News |

ಹೊಸದಿಲ್ಲಿ: ಫೆಬ್ರವರಿ 1ರ ವೇಳೆಗೆ, ದೇಶಾದ್ಯಂತದ ಹೈಕೋರ್ಟ್‌ಗಳಲ್ಲಿ 59,87,477 ಪ್ರಕರಣಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ 69,511 ಪ್ರಕರಣಗಳು ಬಾಕಿಯಿದ್ದವು ಎಂದು ಕೇಂದ್ರ ಸರಕಾರವು ಗುರುವಾರ ರಾಜ್ಯಸಭೆಗೆ ತಿಳಿಸಿದೆ.

ತೆಲುಗು ದೇಶಂ ಪಕ್ಷದ ಸಂಸದ ಕನಕಮೇದಲ ರವೀಂದ್ರ ಕುಮಾರ್ ಕೇಳಿದ ಪ್ರಶ್ನೆಗೆ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

ಹೈಕೋರ್ಟ್‌ಗಳಲ್ಲಿ ಬಾಕಿಯಿರುವ 59,87,477 ಪ್ರಕರಣಗಳ ಪೈಕಿ, ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ಅಲಹಾಬಾದ್ ಹೈಕೋರ್ಟ್ (10,30,185)ನಲ್ಲಿ ಬಾಕಿಯಿವೆ. ನಂತರದ ಸ್ಥಾನಗಳಲ್ಲಿ ರಾಜಸ್ಥಾನ ಹೈಕೋರ್ಟ್‌ (6,40,267) ಮತ್ತು ಬಾಂಬೆ ಹೈಕೋರ್ಟ್ (6,20,586) ಗಳಿವೆ. ಅತಿ ಕಡಿಮೆ ಸಂಖ್ಯೆಯ ಮೊಕದ್ದಮೆಗಳು ಸಿಕ್ಕಿಮ್ ಹೈಕೋರ್ಟ್ (171) ನಲ್ಲಿದೆ.

ಜಿಲ್ಲಾ ಮತ್ತು ಅದರ ಅಧೀನ ನ್ಯಾಯಾಲಯಗಳಲ್ಲಿ 2022 ಡಿಸೆಂಬರ್ 31ರ ವೇಳೆಗೆ, 4.34 ಕೋಟಿಗೂ ಅಧಿಕ ಪ್ರಕರಣಗಳು ಬಾಕಿಯಿದ್ದವು.

ಫೆಬ್ರವರಿ 2ರಂದು ನೀಡಿದ ಪ್ರತ್ಯೇಕ ಉತ್ತರದಲ್ಲಿ, ಕಳೆದ 25 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ 81 ಪ್ರಕರಣಗಳು, ಹೈಕೊರ್ಟ್‌ಗಳಲ್ಲಿ 1,24,810 ಪ್ರಕರಣಗಳು ಮತ್ತು ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 2,76,208 ಪ್ರಕರಣಗಳು ಬಾಕಿಯಿವೆ ಎಂದು ರಿಜಿಜು ಹೇಳಿದ್ದರು.

ಜನತಾ ದಳ (ಯು) ಸಂಸದ ರಾಮ್ ನಾಥ್ ಠಾಕೂರ್ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡುತ್ತಿದ್ದರು.

Read These Next

ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಬೇಕಿದೆ: ದಿಲ್ಲಿ ಸಿಎಂ

ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಶುಕ್ರವಾರ ತಿಹಾರ್ ಜೈಲಿನಿಂದ ...

ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...