ಎರಡು ವರ್ಷದ ಬಾಲಕಿ ಕಾಣೆ

Source: SO News | By Laxmi Tanaya | Published on 13th September 2021, 10:20 PM | State News | Don't Miss |

ಧಾರವಾಡ : ಸವದತ್ತಿ ತಾಲೂಕಿನ ಮುರಗೋಡ ಸಮೀಪದ ಗೌಂಡವಾಡ ಗ್ರಾಮದ ಆರೋಹಿ ಮಹಾದೇವಪ್ಪ ಪವಾರ ಎಂಬ 2 ವರ್ಷದ ಬಾಲಕಿ  ಆಗಸ್ಟ್ 16 ರಿಂದ ಕಾಣೆಯಾಗಿದ್ದಾಳೆ. 

ಬಾಲಕಿಯು ತನ್ನ ಅಜ್ಜಿಯೊಂದಿಗೆ ಸೊಗಲ ಸೊಮೇಶ್ವರ ಕ್ಷೇತ್ರಕ್ಕೆ ತೆರಳಿದಾಗ ಬಾಲಕಿಯನ್ನು ಅಪಹರಣ  ಮಾಡಿರಬಹುದು ಎಂದು ಶಂಕಿಸಿ ಬಾಲಕಿಯ ಅಜ್ಜಿ ಭಾರತಿ ವೈಜು ಪವಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಾಲಕಿಯು ಕಾಣೆಯಾದಾಗ ಗುಲಾಬಿ ಬಣ್ಣದ ಫ್ರಾಕ್ ಧರಿಸಿದ್ದಳು. 2 ಅಡಿ 6 ಇಂಚು ಎತ್ತರ ಇರುವ ಈಕೆ,  ಕೊರಳಲ್ಲಿ ಕೆಂಪು ಬಣ್ಣದ ದಾರದ ತಾಯಿತ, ಕಾಲಲ್ಲಿ ಚೈನು ಧರಿಸಿದ್ದಳು, ಸಾದಗಪ್ಪು ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲು, ದುಂಡು ಮುಖ ಹೊಂದಿರುತ್ತಾಳೆ.

 ಬಾಲಕಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮುರಗೋಡ ಪಿ.ಎಸ್.ಐ: 08337-265533,9480804079, ಸವದತ್ತಿ ವೃತ್ತ ಸಿ.ಪಿ.ಐ: 08330-222303, 9480804039, ರಾಮದುರ್ಗ ಡಿ.ಎಸ್.ಪಿ : 08335-242033, 9480804126 ಅಥವಾ ಬೆಳಗಾವಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೋಣೆ: 9480804000 ಸಂಪರ್ಕಿಸಬಹುದೆಂದು ಮುರಗೋಡ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...