ಕಾರಿಗೆ ಬೆಂಕಿ ಹಚ್ಚಿ, ಭಾರತೀಯ ಸೈನಿಕನ ಅಪಹರಿಸಿದ ಶಂಕಿತ ಉಗ್ರರು

Source: ANI | Published on 4th August 2020, 12:41 AM | National News | Don't Miss |

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಶಂಕಿತ ಉಗ್ರರು ಭಾನುವಾರ ಸಂಜೆ ಭಾರತೀಯ ಸೈನಿಕನನ್ನು ಅಪಹರಿಸಿದ್ದಾರೆ. ನಂತರ ಅವರ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಬೆಟಾಲಿಯನ್‌-162ನ ರೈಫಲ್‌ಮನ್ ಶಕೀರ್ ಮನ್ಸೂರ್‌ ಅವರು ಭಾನುವಾರ ಸಂಜೆ 5ರಿಂದ ಕಾಣೆಯಾಗಿದ್ದಾರೆ. ಅವರು ಬಳಸುತ್ತಿದ್ದ ಕಾರು ಸುಟ್ಟ ಸ್ಥಿತಿಯಲ್ಲಿ ಕುಲ್ಗಂ ಬಳಿ ಪತ್ತೆಯಾಗಿದೆ. ಸೈನಿಕನನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಪತ್ತೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ಸೇನೆಯ ಶ್ರೀನಗರ 15-ಕಾರ್ಪ್ಸ್ ಟ್ವೀಟ್ ಮಾಡಿದೆ.
ದಮ್ಹಾಲ್‌ನ ಹಾಂಜಿಪೊರಾ ಕಾರ್ಯನಿರ್ವಹಿಸುತ್ತಿರುವ, ಶೋಪಿಯಾನ್ ಜಿಲ್ಲೆಯ ನಿವಾಸಿ ಮನ್ಸೂರ್‌ ಅವರ ಕಾರನ್ನು ಅಡ್ಡಗಟ್ಟಿ ಉಗ್ರರು ಅವರನ್ನು ಅಪಹರಿಸಿದ್ದಾರೆ. ನಂತರ ಕಾರನ್ನು ಸುಟ್ಟುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ

Read These Next

ತಬ್ಲಿಗಿ ವೈರಸ್, ಪಾಕಿಸ್ತಾನಿ ಪಿಶಾಚಿಗಳು: ಕನ್ನಡ ಮಾಧ್ಯಮಗಳ 'ದ್ವೇಷ ಪ್ರೇಮ'ದ ಹಲವು ಮುಖಗಳು

ವಕೀಲರು, ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನೊಳಗೊಂಡ ಸಂಘಟನೆ ‘ದಿ ಕ್ಯಾಂಪೇನ್ ಅಗೇನ್‌ಸ್ಟ್ ಹೇಟ್ ಸ್ಪೀಚ್’ (ಸಿಎಎಚ್‌ಎಸ್) ...

ಬಿಜೆಪಿ ಮಿತ್ರಪಕ್ಷಗಳಿಂದ ವಿವಾದಿತ ಕೃಷಿ ಮಸೂದೆ ವಿರೋಧಿಸಿ ’ಚಕ್ಕಾಜಾಮ್’ ಪ್ರತಿಭಟನೆಗೆ ಕರೆ

ಚಂಡೀಗಢ: ಸಂಸತ್ತಿನಲ್ಲಿ ಅಂಗೀಕಾರ ಪಡೆದ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್ ರಾಜ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷ ...

2020 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳು “Online” ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ...