ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ;ಕೆನರಾ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆ

Source: sonews | By Staff Correspondent | Published on 17th March 2019, 10:46 PM | State News | Don't Miss |

ಬೆಂಗಳೂರು: ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಮತ್ತು ರಾಜ್ಯದ 28 ಕ್ಷೇತ್ರಗಳ ಆಕಾಂಕ್ಷಿಗಳ ಬಗ್ಗೆ ಚರ್ಚಿಸಿದ್ದು, ಅಂತಿಮ ಪಟ್ಟಿ ಸಿದ್ದಪಡಿಸಲಾಗಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ: ಕೋಲಾರ-ಡಿ.ಎಸ್.ವೀರಯ್ಯ, ಚಿಕ್ಕಬಳ್ಳಾಪುರ -ಬಿ.ಎನ್.ಬಚ್ಚೇಗೌಡ, ಬೆಂ.ದಕ್ಷಿಣ-ತೇಜಸ್ವಿನಿ ಅನಂತಕುಮಾರ್, ಬೆಂ.ಕೇಂದ್ರ- ಪಿ.ಸಿ.ಮೋಹನ್, ಬೆಂ.ಉತ್ತರ-ಸದಾನಂದ ಗೌಡ/ಎಚ್.ಎಂ.ಚಂದ್ರಶೇಖರ್, ಬೆಂ. ಗ್ರಾಮಾಂತರ-ಸಿ.ಪಿ.ಯೋಗೇಶ್ವರ್/ರುದ್ರೇಶ್.

ಚಾಮರಾಜನಗರ-ವಿ.ಶ್ರೀನಿವಾಸ ಪ್ರಸಾದ್, ಮೈಸೂರು-ಪ್ರತಾಪ್ ಸಿಂಹ, ತುಮಕೂರು-ಜಿ.ಎಸ್.ಬಸವರಾಜು, ಚಿತ್ರದುರ್ಗ -ಎ.ನಾರಾಯಣಸ್ವಾಮಿ/ ಮಾನಪ್ಪ ವಜ್ಜಲ್, ದಕ್ಷಿಣ ಕನ್ನಡ-ನಳೀನ್ ಕುಮಾರ್ ಕಟೀಲ್, ಹಾಸನ- ಎ.ಮಂಜು, ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ, ಶಿವಮೊಗ್ಗ-ಬಿ.ವೈ. ರಾಘವೇಂದ್ರ.

ದಾವಣಗೆರೆ-ಜಿ.ಎಂ.ಸಿದ್ದೇಶ್ವರ್, ಉತ್ತರ ಕನ್ನಡ-ಅನಂತ್ ಕುಮಾರ್ ಹೆಗ್ಡೆ, ಧಾರವಾಡ-ಪ್ರಹ್ಲಾದ್ ಜೋಶಿ, ಹಾವೇರಿ-ಶಿವಕುಮಾರ್ ಉದಾಸಿ, ಬಳ್ಳಾರಿ -ದೇವೆಂದ್ರಪ್ಪ/ವೆಂಕಟೇಶ್ ಪ್ರಸಾದ್, ಕೊಪ್ಪಳ-ಸಂಗಣ್ಣ ಕರಡಿ, ಬೀದರ್-ಭಗವತ್ ಖೂಬಾ, ರಾಯಚೂರು-ತಿಪ್ಪರಾಜು ಹವಾಲ್ದಾರ್/ಅಮರೇಶ್ ನಾಯಕ್/ ಫಕೀರಪ್ಪ, ಕಲಬುರ್ಗಿ-ಡಾ.ಉಮೇಶ್ ಜಾಧವ್.

ವಿಜಯಪುರ-ರಮೇಶ್ ಜಿಗಜಿಣಗಿ, ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್, ಬೆಳಗಾವಿ-ಸುರೇಶ್ ಅಂಗಡಿ, ಚಿಕ್ಕೋಡಿ-ಪ್ರಭಾಕರ್ ಕೋರೆ/ರಮೇಶ್ ಕತಿ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದ್ದು, ಒಂದೆರಡು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದು, ಕೇಂದ್ರ ಚುನಾವಣಾ ಸಮಿತಿ ಪಟ್ಟಿ ಅಂತಿಮಗೊಳಿಸಲಿದೆ ಎಂದು ಗೊತ್ತಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...