ಬಿಡಿಬಿಡಿವ್ಯಕ್ತಿಗಳಿಗೂ ಭಯೋತ್ಪಾದಕರೆಂಬ ಹಣೆಪಟ್ಟಿ

Source: sonews | By Staff Correspondent | Published on 11th August 2019, 6:47 PM | National News | Special Report | Don't Miss |

ಯುಎಪಿಎ ಕಾಯಿದೆಗೆ ಮಾಡಿರುವ ತಿದ್ದುಪಡಿಗಳು ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನೇ ಖೈದು ಮಾಡುವ ಸಾಧ್ಯತೆಯನ್ನು ಹೊಂದಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಜಾರಿಯಲ್ಲಿರುವ ಹಲವಾರು ಕರಾಳ ರಾಷ್ಟ್ರೀಯ ಭದ್ರತಾ ಕಾನೂನುಗಳಿಗೆ ಹೋಲಿಸಿದರೂ ಅನ್ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಷನ್) ಅಮೆಂಡ್ಮೆಂಟ್ ಆಕ್ಟ್ -೨೦೧೯, (ಭಯೋತ್ಪಾದನಾ ಚಟುವಟಿಕೆಗಳ (ಪ್ರತಿಬಂಧಕಾ) ತಿದ್ದುಪಡಿ ಕಾಯಿದೆ-೨೦೧೯) ಕಾಯಿದೆಯು ಮಾತ್ರ ಅವೆಲ್ಲಕ್ಕಿಂತಲೂ ಹೆಚ್ಚು ಕರಾಳವಾಗಿದೆ. ತಿದ್ದುಪಡಿ ಕಾಯಿದೆಯಲ್ಲಿ ಯಾವುದೇ ನಾಗರಿಕರನ್ನು ಭಯೋತ್ಪಾದಕರೆಂದು ಘೋಷಿಸಲೆಂದೇ  ಮಾಡಿಕೊಂಡಿರುವ ಅವಕಾಶವು ಸ್ವಸ್ಥಮನಸ್ಥಿತಿಯ ನಾಗರಿಕರೆಲ್ಲರಲ್ಲೂ ಭೀತಿಯನ್ನು ಹುಟ್ಟುಹಾಕುವಂತಿದೆ ತಿದ್ದುಪಡಿಯ ಬಗ್ಗೆ ನಡೆಯುತ್ತಿರುವ ಹೆಚ್ಚಿನ ಸಾರ್ವಜನಿಕ ಚರ್ಚೆಯು ಇದರ ಸುತ್ತಲೇ ಕೇಂದ್ರೀಕರಿಸಿದೆ.

ಮೂಲ ಯುಎಪಿಎ ಕಾಯಿದೆಯು ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಸಂಘmನೆಯೆಂದು ಘೋಷಿಸುವ ಮತ್ತು ಸಂಘಟನೆಯ ಸದಸ್ಯರು ಮತ್ತು ಸಕ್ರಿಯ ಬೆಂಬಲಿಗರ ಮೇಲೆ ಕಾನೂನು ಕ್ರಮ ಜರುಗಿಸಲು ಬೇಕಾದ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತಿತ್ತು. ಹೀಗೆ ಘೋಷಿಸುವುದಕ್ಕೆ ಪೂರ್ವಭಾವಿಯಾಗಿ ಯಾವುದೇ ಪ್ರಕ್ರಿಯೆಗಳನ್ನು ಜರುಗಿಸಬೇಕಿಲ್ಲವಾದರೂ, ಸಂಘಟನೆ ಅಥವಾ ಸಂಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭಯೋತ್ಪಾದಕ ಪಟ್ಟಿಯನ್ನು ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಹಾಲಿ ಅಥವಾ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸಲಾಗುವ ಪುನರಾವಲೋಕನ ಸಮಿತಿಯ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಿಕೊಡುತ್ತದೆ.

ಭಯೋತ್ಪಾದಕ ಚಟುವಟಿಕೆಗಳನ್ನು ವ್ಯಕ್ತಿಗಳು ನಡೆಸುತ್ತಾರೆಯೇ ವಿನಾ ಸಂಘಟನೆಗಳಲ್ಲ ಎಂದು ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ. ಹೀಗಾಗಿ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸದಿದ್ದರೆ ಅವರು ಕಾನೂನಿನಲ್ಲಿರುವ ಲೋಪಗಳನ್ನು ಬಳಸಿಕೊಂಡು ಮತ್ತೊಂದು ಸಂಘಟನೆಯನ್ನು ರಚಿಸಿಕೊಂಡು ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸುತ್ತಾರೆ ಎಂದು ಕೂಡಾ ಸರ್ಕಾರ ಹೇಳಿದೆ. ಆದರೆ ತಿದುಪ್ಪಡಿಯಾಗುವ ಮುಂಚೆಯೂ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ್ದ ವ್ಯಕ್ತಿಗಳನ್ನು ಮತ್ತು ಅವರ ಸಕ್ರಿಯ ಬೆಂಬಲಿಗರನ್ನು ಶಿಕ್ಷಿಸುವ ಅವಕಾಶವಿತ್ತು. ಹೀಗಿರುವಾಗ ಹೀಗೆ ವಿಶೇಷವಾಗಿ ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ಘೋಷಿಸುವುದು ಯಾವ ಉದ್ದೇಶವನ್ನು ಈಡೇರಿಸಬಲ್ಲದೆನ್ನುವುದು ಪ್ರಶ್ನಾರ್ಹವಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈಗ ಬಿಡಿವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುತ್ತದೆ. ಭಾರತವು ವಿಶ್ವಸಂಸ್ಥೆಯ ಸನ್ನದುಗಳಿಗೆ ಪಾಲುದಾರ ದೇಶನಾಗಿರುವುದರಿಂದ ನಮ್ಮ ದೇಶವೂ ಕೂಡಾ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವಕಾಯಿದೆಯನ್ನು ಜಾರಿಗೆ ತರಲೇ ಬೇಕಿದೆಯೆಂಬುದು ಸರ್ಕಾರವು ಕೊಡುತ್ತಿರುವ ಮತ್ತೊಂದು ಕಾರಣ. ಇದು ಒಂದು ಅರೆಬರೆ ಕಾರಣವಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುತ್ತಿರುವುದು ನಿಜವಾದರೂಯಾವುದೇ ವ್ಯಕ್ತಿಯನ್ನು ಭಯೋತ್ಪಾದಕರೆಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಏಕೆ ಕೊಡಲಾಗಿದೆಯೆಂಬುದನ್ನೇನೂ ಅದು ವಿವರಿಸುವುದಿಲ್ಲ.

ಕಾನೂನಿನಷ್ಟೇ ಸಮಸ್ಯಾತ್ಮಕವಾಗಿರುವುದು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಲು ಅಳವಡಿಸಲಾಗಿರುವ ಪ್ರಕ್ರಿಯೆಗಳು. ನಮ್ಮ ಸಂವಿಧಾನವು ಸಂಘಟನೆಗಳಿಗಿಲ್ಲದ ಕೆಲವು ಮೂಲಭೂತ ಹಕ್ಕುಗಳನ್ನು ವ್ಯಕ್ತಿಗಳಿಗೆ ಖಾತರಿ ಮಾಡುತ್ತದೆ. ಆದರೆ ಅದನ್ನು  ಕಿಂಚಿತ್ತೂ ಪರಿಗಣಿಸದೆ ಸಂಘಟನೆಗಳನ್ನು :ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವಾಗ ಯಾವ ಪ್ರಕ್ರಿಯೆಗಳನ್ನು ಅಳವಡಿಸಲಾಗಿತ್ತೋ ಅದೇ ಪ್ರಕ್ರಿಯೆಗಳನ್ನು ವ್ಯಕ್ತಿಗಳನ್ನು ಭಯೋತ್ಪಾದಕ ಎಂದು ಘೋಷಿಸುವಾಗಲೂ ಅಳವಡಿಸಲಾಗುತ್ತಿದೆ. ಹಾಗಿದ್ದಲ್ಲಿ ಸರ್ಕಾರಕ್ಕೆ ಸಂವಿಧಾನದ ಆರ್ಟಿಕಲ್ ೨೧ರ ಬಗ್ಗೆ ಅರಿವಿರಲಿಲ್ಲವೇ ಅಥವಾ ಇದ್ದರೂ ಅದನ್ನು ಕಡೆಗಣಿಸಿ ತಿದ್ದುಪಡಿಗಳನ್ನು ಮಾಡಲಾಗಿದೆಯೇ?

ಹಾಗೆ ನೋಡುವುದಾದರೆ, ಯುಎಪಿಎ ಅಡಿಯಲ್ಲಿ ರೀತಿ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವುದರಿಂದ ಯಾವುದೇ ಕಾನೂನಾತ್ಮಕ ಪರಿಣಾಮಗಳು ಉದ್ಭವಿಸುವುದಿಲ್ಲವಾದರೂ ವ್ಯಕ್ತಿಯೊಬ್ಬರನ್ನು ಭಯೋತ್ಪಾದಕರೆಂದು ಘೋಷಿಸುವುದರ ಪರಿಣಾಮವೇನಾಗುತ್ತದೆಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕರೆಂದು ಘೋಷಿಸಲು ವ್ಯಕ್ತಿಯು ಯಾವುದಾದರೂ ಭಯೋತ್ಪಾದಕ ಕಾಯಿದೆಯಡಿ ಶಿಕ್ಷೆಗೂ ಗುರಿಯಾಗಿರಬೇಕಿಲ್ಲ ಅಥವಾ ಅವರ ಮೇಲೆ ಭಯೋತ್ಪಾದಕ ಕಾಯಿದೆಯಡಿ ವಿಚಾರಣೆಯೂ ನಡೆಯುತ್ತಿರಬೇಕಿಲ್ಲ.

ಈಗಾಗಲೇ ಭಯೋತ್ಪಾದನೆಗಳ ಹುಸಿ ಆರೋಪಗಳ ಮೇಲೆ ಮುಸ್ಲಿಂ ಯುವಕರು ದಶಕಗಳಿಂದ ಸೆರೆಮನೆಯಲ್ಲಿ ಬಂಧಿತಾರಾಗಿದ್ದಾರೆಮತ್ತೊಂದೆಡೆ ಮುಸ್ಲಿಮರ ಮೇಲೆ ದಾಳಿ ನಡೆಸಲಾಗಿರುವ ಪ್ರಕರಣಗಳಲ್ಲಿ  ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯು  (ಎನ್ಐಎ) ಆರೋಪವನ್ನು ಉದ್ದೇಶಪೂರ್ವಕವಾಗಿ ಸಡಿಲಗೊಳಿಸುತ್ತಿದೆ. ಹೀಗಿರುವಾಗ ಕಾನೂನನ್ನು ಪೂರ್ವಗ್ರಹವಿಲ್ಲದೆ ಬಳಸಲಾಗುತ್ತದೆ ಎಂದು ನಂಬಿಕೊಳ್ಳಲು ಯಾವ ಕಾರಣಾವೂ ಇಲ್ಲ. ತನಿಖೆ ಮಾಡುವಾಗ ಮತ್ತು ಕಾನೂನು ಕ್ರಮಗಳನ್ನು ನಡೆಸುವಾಗ ಎದುರಾಗುತ್ತಿದ್ದ ಅಡೆತಡೆಗಳನ್ನು ನಿವಾರಿಸಿಕೊಳ್ಳಲೆಂದು ತಿದ್ದುಪಡಿಯನ್ನು ತರಲಾಯಿತೆಂಬ ವಾದದಲ್ಲಿ ಯಾವುದೇ ಹುರುಳಿಲ್ಲವೆಂಬುದು ವಿಷಯವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿದಾಗ ಅರ್ಥವಾಗುತ್ತದೆ. ತನಿಖೆ ಮತ್ತು ಇತರೆ ಕಾನೂನು ಕ್ರಮಗಳು ಪ್ರಧಾನವಾಗಿ ಸಂಬಂಧಪಟ್ಟವರ ಅಸಮರ್ಥತೆಯಿಂದಾಗಿ ವೈಫಲ್ಯವನ್ನು ಅನುಭವಿಸುತ್ತಿವೆಯೇ ಹೊರತು ಹೊಸ ತಿದ್ದುಪಡಿಯಲ್ಲಿ ಅವುಗಳಲ್ಲಿ ಬದಲಾವಣೆ ತರಬಲ್ಲ ಯಾವೊಂದು ಹೊಸ ಕಲಮುಗಳನ್ನೂ ಸೇರಿಸಲಾಗಿಲ್ಲ.

ಕಾನೂನನ್ನು ಅನುಮೋದಿಸಲಾದ ಪರಿಯೂ ಕೂಡಾ ಅಷ್ಟೇ ಕಳವಳಕಾರಿಯಾಗಿದೆ. ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಜುಲೈ ೮ಕ್ಕೆ ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್ ೨ಕ್ಕೆ ಮಂಡಿಸಲಾಯಿತು. ಮಸೂದೆಯನ್ನು ಯಾವುದೇ ವಿಷಯ ಸಮಿತಿಯ ಪರಿಗಣನೆಗೆ ವರ್ಗಾಯಿಸಲಿಲ್ಲ ಅಥವಾ ಮಸೂದೆಯ ಬಗ್ಗೆ ಗಂಭೀರ ಪರಿಶೀಲನೆಯಾಗಲೀ, ಚರ್ಚೆಯಾಗಲೀ ನಡೆಯಲೇ ಇಲ್ಲ. ಲೋಕಸಭೆಯಲ್ಲಿ ತನಗಿರುವ ಬಹುಮತ ಹಾಗೂ ರಾಜ್ಯಸಭೆಯಲ್ಲಿ ಪ್ರಾದೇಶಿಕ ಪಕ್ಷಗಳಿಂದ ಸಿಗುತ್ತಿರುವ ಬೆಂಬಲವನ್ನು ಆಧರಿಸಿ ಸಂಸತ್ತಿನಲ್ಲಿ ಒಂದಾದ ಮೇಲೊಂದರಂತೆ ಮಸೂದೆಗಳು ಅನುಮೋದನೆಗೊಳ್ಳುತ್ತಿರುವ ರೀತಿಯಲ್ಲೇ ಮಸೂದೆಯೂ ಅನುಮೋದಿಸಲ್ಪಟ್ಟಿತು. ಹೀಗಾಗಿ ಸಂಸತ್ತಿನ ಅನುಮೋದನೆ ಎಂಬುದು ಈಗ ಕೇವಲ ಒಂದು ಔಪಚಾರಿಕತೆಯಾಗಿಬಿಟ್ಟಿದೆ. ಹಾಗೂ ಬಾರಿ ಸಂಸತ್ತು ಹೆಚ್ಚು ಉಪಯುಕ್ತತೆಯನ್ನು ಪ್ರದರ್ಶಿಸಿತು ಎಂಬ ಹೆಗ್ಗಳಿಕೆಗಳು ಪ್ರಕ್ರಿಯೆಗಳ ಅಗತ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ. ೨೦೧೯ರ ಚುನಾವಣಾ  ಫಲಿತಾಂಶಗಳ ನಂತರ ದಿಕ್ಕೆಟ್ಟಿರುವ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮಸೂದೆಯ ಬಗ್ಗೆ ಸಾಂಕೇತಿಕ ವಿರೋಧವನ್ನಷ್ಟೇ ವ್ಯಕ್ತಪಡಿಸಿದವು. ಇದು ಭಾರತದಲ್ಲಿ ಪ್ರಜಾತಂತ್ರವು ನಮ್ಮಗಳ ಊಹೆಗಿಂತ ಹೆಚ್ಚು ಹದಗೆಟ್ಟಿದೆಯೆಂಬುದನ್ನು ಸೂಚಿಸುತ್ತಿದೆ.

೨೦೧೮ರಷ್ಟು ಇತ್ತೀಚೆಗೆ ಹಲವಾರು ಕಾರ್ಯಕರ್ತರಿಗೆ ಮತ್ತು ರಾಜಕೀಯ ವಿರೋಧಿಗಳಿಗೆ ನಗರದ ನಕ್ಸಲರೆಂಬ ಹಣೆಪಟ್ಟಿ ಹಚ್ಚಿ, ನಿರಾಧಾರ ಆರೋಪಗಳನ್ನು ಹೊರಿಸಿ, ಜಾಮೀನನ್ನು ಕೂಡ ದೊರಕದಂತೆ ಮಾಡಿ ಸೆರೆಯಲ್ಲಿ ಕೊಳೆಯುವಂತೆ ಮಾಡಲಾಯಿತು. ಭಯೋತ್ಪಾದನೆಯ ವಿರುದ್ಧ ಸೆಣೆಸಲು ಕಾನೂನುಗಳ ಅಗತ್ಯವಿದೆಯಾದರೂ ಈಗ ಮಾಡಲಾಗಿರುವ ತಿದ್ದುಪಡಿಗಳನ್ನು ಸಾಕಷ್ಟು ದುರ್ಬಳಕೆ ಮಾಡಿಕೊಳ್ಳಬಹುದು. ಇಂಥಾ ವಿಷಯಗಳ ಬಗ್ಗೆ ಶಾಸನವನ್ನು ಜಾರಿ ಮಾಡುವಾಗ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಕೃಪೆ: Economic and Political Weekly ಅನು:

 

Read These Next

ಕಣಿವೆಯಲ್ಲಿ ಭರ್ಜರಿ ಭೇಟಿ: ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರ ಹತ್ಯೆ- ಐಜಿ ವಿಜಯ್ ಕುಮಾರ್

ಕಣಿವೆಯಲ್ಲಿ ಭರ್ಜರಿ ಭೇಟಿ: ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರ ಹತ್ಯೆ- ಐಜಿ ವಿಜಯ್ ಕುಮಾರ್

ಮೊದಲ ಯಶಸ್ವಿ ಚಾರ್ಟೆಡ್ ವಿಮಾನ ಹಾರಾಟದ ನಂತರ ಜೂ.23ಕ್ಕೆ  ದುಬೈಯಿಂದ ಮಂಗಳೂರಿಗೆ ಮೊತ್ತೊಂದು ವಿಮಾನ ಹಾರಾಟಕ್ಕೆ ಸಿದ್ಧ

ಭಟ್ಕಳ: ಭಟ್ಕಳದ ಉದ್ಯಮಿ ಹಾಗೂ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿಯವರು ದುಬೈಯಲ್ಲಿ ಸಿಲುಕಿಕೊಂಡಿದ್ದ 184 ...

ದಿಲ್ಲಿ ಹಿಂಸಾಚಾರ: ಅಮಿತ್ ಶಾಗೆ ಸಲ್ಲಿಸಲಾದ ‘ಸತ್ಯಶೋಧನಾ ವರದಿ’ಯಲ್ಲಿ ಹಲವು ಸುಳ್ಳುಗಳು!

ಗೃಹಸಚಿವ ಅಮಿತ್ ಶಾ ಮೇ 29ರಂದು ದೆಹಲಿಯ ಎನ್ ಜಿಒ ‘ಕಾಲ್ ಫಾರ್ ಜಸ್ಟೀಸ್‍’ನ ‘ಸತ್ಯಶೋಧನಾ ವರದಿ’ಯನ್ನು ಸ್ವೀಕರಿಸಿದ್ದಾರೆ. ಹಲವು ...

ಲಾಕ್ಡೌನ್ ಎಫೆಕ್ಟ್‍ನಿಂದ ದುಸ್ತರವಾದ ಬದುಕು; ಕಾರು, ಆಟೋ ರಿಕ್ಷಾ ಓಡಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರು

ಭಟ್ಕಳ; ಲಾಕ್‍ಡೌನ್ ಪರಿಣಾಮ ದೇಶದ ಎಲ್ಲ ವರ್ಗಗಳ ಮೇಲೊ ಪರಿಣಾಮ ಬೀರುದ್ದು ಹಲವು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ...

ಭಟ್ಕಳದ ಗರ್ಭಿಣಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಹೊತ್ತು ಜೂ.12ಕ್ಕೆ ದುಬೈಯಿಂದ ಮಂಗಳೂರಿಗೆ ಹಾರಲಿದೆ ಬಾಡಿಗೆ ವಿಮಾನ

ಭಟ್ಕಳ : ಲಾಕ್ಡೌನ್ ನಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿರುವ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಚಾರ್ಟರ್ಡ್ ...

ಭಟ್ಕಳ ನಗರ ಸೇರಿದಂತೆ ಜಾಲಿ ಪ.ಪಂ ಹಾಗೂ ಹೆಬಳೆ ಪಂಚಯತ್ ವ್ಯಾಪ್ತಿಯಲ್ಲಿ ಸಂ.6ರಿಂದ ಬೆ.6 ಗಂಟೆ ವರೆಗೆ ಲಾಕ್ಡೌನ್

ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆ ...