ಅಕ್ಟೋಬರ್ ಒಂದರಿಂದ ಮಂಗಳೂರು-ಹೈದ್ರಾಬಾದ್ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಅಂಬಾರಿ ಬಸ್.

Source: SO News | By Laxmi Tanaya | Published on 30th September 2020, 4:14 PM | State News |

ಮಂಗಳೂರು  : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅ. 1ರಿಂದ ಮಂಗಳೂರು-ಹೈದರಾಬಾದ್‌ ಮಾರ್ಗದಲ್ಲಿ ಅಂಬಾರಿ ಡ್ರೀಮ್‌ಕ್ಲಾಸ್‌ ಮಲ್ಟಿ ಆ್ಯಕ್ಸಿಲ್‌ ಎಸಿ ಸ್ಲಿಪರ್‌ ದರ್ಜೆಯ ಬಸ್‌ ಹಾಗೂ ಉಡುಪಿ-ಹೈದರಾಬಾದ್‌ ಮಾರ್ಗದಲ್ಲಿ ರಾಜಹಂಸ ಬಸ್‌ ಸೇವೆ ಪ್ರಾರಂಭಿಸಲಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಯಾಣಿಸಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಸಾರಿಗೆ ವಿವರ:
ಅಂಬಾರಿ ಡ್ರೀಮ್‌ಕ್ಲಾಸ್‌ ಮಲ್ಟಿ ಆ್ಯಕ್ಸಿಲ್‌ ಎಸಿ ಸ್ಲಿಪರ್‌ ಬಸ್‌ ಮಧ್ಯಾಹ್ನ 3ಕ್ಕೆ ಮಂಗಳೂರಿನಿಂದ ಹೊರಟು ಸುರತ್ಕಲ್‌, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಮೂಲಕ ಹೈದರಾಬಾದ್‌ಗೆ ಮರುದಿನ ಬೆಳಗ್ಗೆ 8.30ಕ್ಕೆ ತಲುಪಲಿದೆ. ಹೈದರಾಬಾದ್‌ನಿಂದ ಸಂಜೆ 5ಕ್ಕೆ ಹೊರಟು ಅದೇ ಮಾರ್ಗವಾಗಿ ಮಂಗಳೂರಿಗೆ ಮರುದಿನ ಬೆಳಗ್ಗೆ 10 ಗಂಟೆಗೆ ತಲುಪಲಿದೆ. ಪ್ರಯಾಣ ದರ 1,700 ರೂ.

ರಾಜಹಂಸ ಬಸ್‌ ಉಡುಪಿಯಿಂದ ಬೆಳಗ್ಗೆ 11.30ಕ್ಕೆ ಹೊರಟು ಮಣಿಪಾಲ, ಕುಂದಾಪುರ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಹರಿಹರ, ಹರಪನಹಳ್ಳಿ, ಹೊಸಪೇಟೆ, ಗಂಗಾವತಿ, ಮಾನ್ವಿ, ರಾಯಚೂರು ಮೂಲಕ ಹೈದರಾಬಾದ್‌ಗೆ ಮರುದಿನ ಬೆಳಗ್ಗೆ 6.30ಕ್ಕೆ ತಲುಪಲಿದೆ. ಹೈದರಾಬಾದ್‌ನಿಂದ ಸಂಜೆ 5.30ಕ್ಕೆ ಹೊರಟು ಉಡುಪಿಗೆ ಮರುದಿನ ಬೆಳಗ್ಗೆ 11 ಗಂಟೆಗೆ ತಲುಪಲಿದೆ. ಪ್ರಯಾಣ ದರ 970 ರೂ. ಸಾರಿಗೆಗೆ ಅವತಾರ್‌ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟನಣೆ ತಿಳಿಸಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...