ಕೋಲಾರ: ಕಾಣೆಯಾದ ಮಕ್ಕಳ ಪತ್ತೆಗಾಗಿ ಸಹಕರಿಸಿ

Source: shabbir | By Arshad Koppa | Published on 24th August 2017, 8:27 AM | State News | Guest Editorial |

ಕೋಲಾರ, ಆಗಸ್ಟ್ 23 :      ಮಸ್ಕಂ ಬಾಲಕರ ಬಾಲ ಮಂದಿರದಲ್ಲಿದ್ದ ಸತ್ಯ ಬಿನ್ ವೆಂಕಟೇಶ್ (10 ವರ್ಷ), ಎಂಬ ಬಾಲಕನು ಬಾಲ ಮಂದಿರದಿಂದ ದಿನಾಂಕ:08-01-2015 ರಂದು ಸಂಜೆ ಸುಮಾರು 6-15 ಗಂಟೆಯ ಸಮಯದಲ್ಲಿ ಕಾಣೆಯಾಗಿರುತ್ತಾರೆ. 


ಶಿವ ಶಂಕರ್ (7 ವರ್ಷ)

ಮತ್ತು ಯುವರಾಜ್ (5 ವರ್ಷ), ಈ ಇಬ್ಬರು ಬಾಲಕರು ದಿನಾಂಕ 01-04-2015 ರಂದು ಮನೆಯನ್ನು ಬಿಟ್ಟು ಹೋಗಿದ್ದು ಈ ವರೆಗೂ ಪತ್ತೆಯಾಗಿರುವದಿಲ್ಲ.  

                 
      ಕೆ.ಜಿ.ಎಫ್‍ನ ಆಂಡ್ರಸನ್‍ಪೇಟೆ ಪೋಲೀಸ್ ಠಾಣೆ ಸರಹದ್ದು ಮಸ್ಕಂನಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ದಾಖಲಾಗಿದ್ದ ಸುಮಾರು 16 ವರ್ಷ ವಯಸ್ಸಿನ ಬಾಲಕನಾದ ಮುತ್ತುರಾಮನ್ ಬಿನ್ ಸುಬ್ರಮಣ್ಯ ಎಂಬುವರು ದಿನಾಂಕ 07.04.2015 ರಂದು ಬೆಳಗ್ಗೆ 11-50 ಗಂಟೆಯಲ್ಲಿ ಬಾಲಮಂದಿರದ ಶೌಚಾಲಯದ ವೆಂಟಿಲೇಟರ್ ಅನ್ನು ಮುರಿದು ಅದರ ಮೂಲಕ ಓಡಿ ಹೋಗಿ ಕಾಣೆಯಾಗಿರುತ್ತಾನೆ.


    ಚಿರು ಶ್ರೀ ಶಂಕರ್  

ಮತ್ತು 3 ವರ್ಷದ ದಾತ್ರಿ ನಿಸರ್ಗ  ರವರು ಬೀಮಗಾನಹಳ್ಳಿಗೆ ಬಂದು ದಿನಾಂಕ 20-12-2015 ರಂದು  ಕಾಣೆಯಾಗಿರುತ್ತಾರೆ. ಸಂಬಂದಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. 
    

ದೀಪಿಕಾ 17 ವರ್ಷದ ಬಾಲಕಿಯನ್ನು ಕೃಷ್ಣಾ ಎಂಬುವನು ದಿನಾಂಕ 17-01-2017 ರಂದು ಕರೆದು ಕೊಂಡು ಹೋಗಿರುತ್ತಾರೆ. ಇದುವರೆಗೂ ದೀಪಿಕಾ ಸಿಕ್ಕಿಲ್ಲ. ಅದೇ ರೀತಿ

ಪೂಣ ್ಮಾ (16 ವರ್ಷ) ಎಂಬ ಬಾಲಕಿಯು ಕಾಲೇಜಿಗೆ ಹೋದವಳು ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಸದರಿ ಬಾಲಕಿಯು ಕಾಣೆಯಾಗಿದ್ದಾರೆ. 


    ಚಿತ್ರದಲ್ಲಿನ ಬಾಲಕ ದಿನಾಂಕ 06-06-2017 ರಂದು ರಾತ್ರಿ ಸುಮಾರು 7.45 ಗಂಟೆ ಸಮಯದಲ್ಲಿ  ಸಂಸ್ಥೆಯ ಶೌಚಾಲಯದಲ್ಲಿರುವ ಕಿಟಕಿಯನ್ನು ಮುರಿದು ಪರಾರಿಯಾಗಿದ್ದು, ತಕ್ಷಣ ಬಾಲಕರನ್ನು ಸ್ಥಳೀಯ, ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ಸ್ಟ್ಯಾಂಡ್ ಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳೆಲ್ಲ ಕಡೆಯೂ ಹುಡುಕಲಾಗಿ ಬಾಲಕರು ಸಿಕ್ಕಿರುವುದಿಲ್ಲ. 


    ಕಾಣೆಯಾಗಿರುವ ಈ ಎಲ್ಲಾ ಬಾಲಕ-ಬಾಲಕಿಯರು ಪತ್ತೆಯಾದಲ್ಲಿ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೆನರಾ ಬ್ಯಾಂಕ್ ಕಟ್ಟಡ, ಡೂಂ ಲೈಟ್ ಸರ್ಕಲ್ ಹತ್ತಿರ, ಕೋಲಾರ-563101. ಇಲ್ಲಿಗೆ  ದೂರವಾಣಿ ಸಂ:08152-220166 ಅಥವಾ ಇ-ಮೇಲ್ ವಿಳಾಸ : [email protected] ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕೋಲಾರ: ಸಾಕ್ಷ್ಯಾಚಿತ್ರ ನಿರ್ಮಾಣ: ಮಾಹಿತಿಗೆ ಕೋರಿಕೆ
ಕೋಲಾರ, ಆಗಸ್ಟ್ 23 :    ನಾಡಿನ ಕಲೆ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಅಭಿವೃದ್ಧಿ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದ ಮಹಿಳಾ ಸಾಧಕಿಯರ ಕುರಿತು ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಯೋಜನೆ ರೂಪಿಸಿದೆ. 
    ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರ ಮಾಹಿತಿಯನ್ನು ಅಗತ್ಯ ದಾಖಲೆ ಸಹಿತ ಹಿರಿಯ ಸಹಾಯಕ ನಿರ್ದಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೋಲಾರ. ಈ ಕಚೇರಿಗೆ ಆಗಸ್ಟ್ 28 ರ ಒಳಗೆ ತಲುಪುವಂತೆ ಕಳುಹಿಸಲು ತಿಳಿಸಿದೆ. 

Read These Next

ಉತ್ತರಕನ್ನಡಕ್ಕೆ ಉಡಾನ್ ವಿಮಾನ ನಿಲ್ದಾಣ ಅಂಕೋಲಾಕ್ಕೆ ಹೆಚ್ಚಿನ ಒಲವು ; ಭಟ್ಕಳಿಗರ ಬತ್ತದ ಕನಸು

ಭಟ್ಕಳದಲ್ಲಿ ಪರಿಸರ ಸ್ನೇಹಿ ಉಡಾನ್ ನಾಗರಿಕ ಸೇವಾ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯ ತೀರ್ಮಾನವನ್ನು ನ್ಯಾಯಾಲಯ ಸರಕಾರದ ...

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು -ಶಾಸಕ ಕೆ.ಆರ್‌.ರಮೇಶ್

ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ...

ಕೋಲಾರದಲ್ಲಿ ನೀರಿಗೆ ಅಭಾವ ಇದ್ದರೂ, ಸರ್ಕಾರದಿಂದ ಬರುವ ಅನುದಾನದಲ್ಲಿ ಕೊರತೆ ಇಲ್ಲ – ಎ.ಸಿ.ಬಿ ಪುರುಷೋತ್ತಮ್

ಕೋಲಾರ: ಕೋಲಾರದಲ್ಲಿ ನೀರಿಗೆ ಅಭಾವ ಇದ್ದರೂ, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುತ್ತಿರುವ ಅನುದಾನದಲ್ಲಿ ಕೊರತೆ ಇಲ್ಲ, ಆದರೂ ಹಣದ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...