ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಂಗೇಹಳ್ಳಿ ಬಾಲೆಯ ಭರತನಾಟ್ಯ ರಂಗಪ್ರವೇಶ

Source: shabbir | By Arshad Koppa | Published on 21st June 2017, 6:49 AM | Guest Editorial | Don't Miss |

ಕೋಲಾರ:- ನಗರದ ಜಯ ನಾಟ್ಯ ಕಲಾ ಅಕಾಡೆಮಿ ಹಾಗೂ ಬೆಂಂಗಳೂರಿನ ಶ್ರೀಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ ಆಶ್ರಯದಲ್ಲಿ ತಾಲ್ಲೂಕಿನ ಸಿಂಗೇಹಳ್ಳಿಯ ಶಿಕ್ಷಕ ಸತೀಶ್ ಹಾಗೂ ವೀಣಾ ದಂಪತಿಗಳ ಪುತ್ರಿ ಕುಮಾರಿ ಎಸ್.ಸಿರೀಷ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಜೂ.23 ರ ಶುಕ್ರವಾರ ಸಂಜೆ 5 ಗಂಟೆಗೆ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ನಿವೃತ್ತ ಮುಖ್ಯ ಶಿಕ್ಷಕರಾದ ನ್ಯಾನಪ್ಪ ಮತ್ತು ನಂಜಪ್ಪ ಅವರ ಮೊಮ್ಮಗಳಾದ ಸಿರೀಷ ಕಳೆದ ಐದು ವರ್ಷಗಳಿಂದ ಜಯನಾಟ್ಯ ಕಲಾ ಅಕಾಡೆಮಿಯಲ್ಲಿ ನೃತ್ಯಗುರು ವಿದ್ವಾನ್ ಕೋಲಾರ ರಮೇಶ್ ಶಿಷ್ಯೆಯಾಗಿ ಭರತನಾಟ್ಯ ಕಲಿಯುತ್ತಿದ್ದು, ಇದೀಗ ರಂಗಪ್ರವೇಶಕ್ಕೆ ಸಜ್ಜಾಗಿದ್ದಾರೆ. 
ರವಿಂದ್ರ ಕಲಾಕ್ಷೇತ್ರದಲ್ಲಿ ಜೂ.23 ರಂದು ನಡೆಯುವ ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಲಿದ್ದು, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ರಾಜಣ್ಣ ಅಧ್ಯಕ್ಷತೆ ವಹಿಸುವರು.
ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಮಹದೇವಪುರ ಕಸಾಪ ಅಧ್ಯಕ್ಷ  ಡಾ.ವೆ.ಅಜಿತ್‍ಕುಮಾರ್‍ರಿಂದ ಗೆಜ್ಜೆ ನುಡಿಯಾಡಲಿದ್ದಾರೆ.
ಖ್ಯಾತ ನೃತ್ಯ ಅಂಕಣಗಾರ ನಂಜುಂಡರಾವ್, ಕುಮಾರವ್ಯಾಸ ಪ್ರಶಸ್ತಿ ವಿಜೇತ ಕೆ.ಆರ್.ಜ್ಞಾನಮೂರ್ತಿ, ನೃತ್ಯಗುರು ಮಂಡ್ಯ ರಮೇಶ್, ವೆಂಕಟಾದ್ರಿ ಮತ್ತಿತರರು ಉಪಸ್ಥಿತರಿರುವರು. 

 

    


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...