ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣದ ಗದ್ದಲಕ್ಕೆ ದಿನದ ಕಲಾಪ ಬಲಿ, ಸದನದಲ್ಲಿ ಖಾಲಿ ಸಿಡಿ ಪ್ರದರ್ಶನ: ಪಟ್ಟು ಸಡಿಲಿಸದ ಕಾಂಗ್ರೆಸ್

Source: VB | By S O News | Published on 24th March 2021, 6:41 PM | State News |

ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಬೇಕು. 'ಆಕ್ಷೇಪಾರ್ಹ' ವರದಿ ಬಿತ್ತರಕ್ಕೆ ತಡೆ ಕೋರಿ  ಕೋರ್ಟ್ ಮೆಟ್ಟಿಲೇರಿದ ಆರು ಮಂದಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಹಿನ್ನೆಲೆಯಲ್ಲಿ ಇಡೀ ದಿನದ ಕಲಾಪ ಬಲಿಯಾಯಿತು.

ಮಂಗಳವಾರ ಬೆಳಗ್ಗೆ 11ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಯಿತು. ಮೊದಲಿಗೆ ಮಾಜಿ ಸಚಿವ ಬಿ.ಡಿ.ಬಸವರಾಜು ಅವರಿಗೆ ಸಂತಾಪ ಸೂಚನೆ ಬಳಿಕ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಸತ್ಯಾಗ್ರಹ
ಮುಂದುವರಿಸಿದರು. 'ಸಿಡಿ ಸರಕಾರಕ್ಕೆ ಧಿಕ್ಕಾರ' ಎಂದು ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು. ಅಲ್ಲದೆ, ವಿಧಾನಸಭೆಯ ಕಲಾಪದಲ್ಲೇ ಕಾಂಗ್ರೆಸ್ ಸದಸ್ಯರು ಸಿಡಿಗಳನ್ನು ಪ್ರದರ್ಶಿಸಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಬಿಜೆಪಿ ಸದಸ್ಯರಾದ ಅರಗ 

ಎಲ್ಲಿ ಹೆಣ್ಣುಮಕ್ಕಳು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆಂಬುದು ನಮ್ಮ ಸಂಸ್ಕೃತಿ. ಹೆಣ್ಣುಮಗಳಿಗೆ ರಕ್ಷಣೆ ಕೊಡಬೇಕು. ಸಿಡಿ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆಯನ್ನೇ ನಡೆಸಲಿ. ಆದರೆ, ಆತನಿಖೆ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನಡೆಯಬೇಕು. ಸಂತ್ರಸ್ತ ಹೆಣ್ಣುಮಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಆರು ಮಂದಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ನಮ್ಮ ಬೇಡಿಕೆಗೆ ಸರಕಾರ ಒಪ್ಪಿದರೆ ಧರಣಿ ಹಿಂಪಡೆದು ಸಭಾತ್ಯಾಗ ಮಾಡುತ್ತೇವೆ.

ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಜ್ಞಾನೇಂದ್ರ, ಎಂ.ಪಿ. ರೇಣುಕಾಚಾರ್ಯ, ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರು, “ಸಿಡಿ ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ' ಎಂದು ಪ್ರತಿಯಾಗಿ ಏರಿದ ಧ್ವನಿಯಲ್ಲಿ ಘೋಷಣೆ ಕೂಗಿದರು.

ಕಲಾಪ ಬಲಿ

ಇದರಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಇವರಿಗೆ ನೈತಿಕತೆ ಇಲ್ಲ: ರಾಜ್ಯ ಸರಕಾರ ನೀಡಿರುವ ಉತ್ತರ ನಮಗೆ ತೃಪ್ತಿತಂದಿಲ್ಲ. ಅತ್ಯಾಚಾರ ಪ್ರಕರಣ ದಾಖಲಿಸಬೇಕು ಹಾಗೂ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಆರು ಮಂದಿ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇವರಿಗೆ ಸಚಿವರಾಗಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲ ಎಂದು ಗದ್ದಲದ ಮಧ್ಯೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಮೊದಲು ಪ್ರಶೋತ್ತರ ಅವಧಿ ಮುಗಿಯಲಿ. 'ಪ್ರಶೋತ್ತರ ಅಮೂಲ್ಯವಾದುದು. ಪ್ರಶ್ನೆ ಕೇಳುವುದು ಎಲ್ಲ ಸದಸ್ಯರ ಹಕ್ಕು. ಕಲಾಪ ನಡೆಯಲು ಅವಕಾಶ ಕೊಡಿ' ಎಂದು ಕೋರಿದರು. ಆದರೆ, ಇದಕ್ಕೆ ಸೊಪ್ಪು ಹಾಕದ ಕಾಂಗ್ರೆಸ್ ಸದಸ್ಯರು, ಆರು ಮಂದಿ ಸಚಿವರು ಮೊದಲು ರಾಜೀನಾಮೆ ನೀಡಬೇಕು ಎಂದು ಗದ್ದಲ ಮುಂದುವರಿಸಿದರು.

ಪ್ರತಿಪಕ್ಷಗಳ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ,

ಸಹಕಾರ ನೀಡಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರೂ ಕಾಂಗ್ರೆಸ್, ಕುಂಟು ನೆಪ ಹೇಳಿ ವಿಧಾನಸಭೆಯಲ್ಲಿ ಧರಣಿ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ. ಆ ಹೆಣ್ಣುಮಗಳು ಪತ್ತೆಯಾದರೆ ಈ ಪ್ರಕರಣಕ್ಕೆ ಅಂತ್ಯ ದೊರೆಯಲಿದೆ. ಆಕೆಯ ಪತ್ತೆ ಕಾರ್ಯ ನಡೆದಿದೆ. ಕಲಾಪ ನಡೆಸಲು ಪ್ರತಿಪಕ್ಷ ಸಹಕಾರ ನೀಡಬೇಕು.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಸರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಉತ್ತರ ನೀಡಿದೆ. ಪ್ರಕರಣದಲ್ಲಿ ಸರಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ. ಎಸ್‌ಐಟಿ ನಿಷ್ಪಕ್ಷವಾಗಿ ತನಿಖೆ ನಡೆಸುತ್ತಿದೆ. ಮೊದಲು ಪ್ರಶೋತ್ತರ ಅವಧಿ ಮುಗಿಯಲಿ. ಇದು ಸದಸ್ಯರ ಹಕ್ಕು ಎಂದು ಪ್ರತಿಪಾದಿಸಿದರು.

ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಆ ಬಳಿಕ ವಿಪಕ್ಷ ನಾಯಕ, ಸಭಾ ನಾಯಕ(ಸಿಎಂ) ಸೇರಿದಂತೆ ಸದನದ ಹಿರಿಯ ಮುಖಂಡರೊಂದಿಗೆ ಸ್ಪೀಕರ್ ಸಂಧಾನ ನಡೆಸಿದರು. ಆ ಬಳಿಕ ಮಧ್ಯಾಹ್ನ 12:40ರ ಸುಮಾರಿಗೆ ಕಲಾಪ ಮತ್ತೆ ಸಮಾವೇಶಗೊಂಡಿತು. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಭೋಜನ ವಿರಾಮಕ್ಕೆ ಭೋಜನ ವಿರಾಮದ ಬಳಿಕ ಕಲಾಪ ಪುನಃ ಮಧ್ಯಾಹ್ನ 3ಗಂಟೆಯ ಸುಮಾರಿಗೆ ಸಮಾವೇಶಗೊಂಡಿತು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಉಂಟಾದ ಗದ್ದಲ-ಕೋಲಾಹಲದ ಮಧ್ಯೆ ಸ್ಪೀಕರ್, ವಿಧೇಯಕಗಳ ಮಂಡಿಸಿ, ಅನುಮೋದನೆ ಮಾಡಿಕೊಟ್ಟರು. ಪೂರಕ ಅಂದಾಜುಗಳ ಮಂಡನೆ ಮಾಡಿ ಧ್ವನಿಮತದ ಅಂಗೀಕಾರ ದೊರಕಿಸಿಕೊಟ್ಟರು. ಆ ಬಳಿಕ ಕಲಾಪವನ್ನು ಮಾ.24ಕ್ಕೆ ಮುಂದೂಡಿದರು.

ಜೆಡಿಎಸ್ ಸಭಾತ್ಯಾಗ: ಎರಡು ರಾಷ್ಟ್ರೀಯ ಪಕ್ಷಗಳು ಸಿಡಿಯನ್ನು ಇಟ್ಟುಕೊಂಡು ಈ ಸದನದ ಸಮಯ ಹಾಳು ಮಾಡುತ್ತಿವೆ. ನಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನದಲ್ಲಿ ಅವಕಾಶ ಸಿಗದಿದ್ದರೆ ಹೇಗೇ? ಆದುದರಿಂದ, ನಾವು ಸಭಾತ್ಯಾಗ ಮಾಡಿ ಹೊರಗೆ ಹೋಗುತ್ತಿದ್ದೇವೆ ಎಂದು ಜೆಡಿಎಸ್ ಸದಸ್ಯರು ಮಾಜಿ ಸಚಿವ ಎಚ್. ಡಿ.ರೇವಣ್ಣ ನೇತೃತ್ವದಲ್ಲಿ ಸಭಾತ್ಯಾಗ ಮಾಡಿ ಹೊರ ನಡೆದರು.ಕಲಾಪವನ್ನು ಮುಂದೂಡಿದರು.
 

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...