ಜಾಗತಿಕ ಹಸಿವು ಸೂಚ್ಯಂಕ; 125 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 111ನೇ ಸ್ಥಾನ; ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಲಂಕಾಗಿಂತಲೂ ಹಿಂದೆ ಬಿದ್ದ ಭಾರತ!

Source: Vb | By I.G. Bhatkali | Published on 14th October 2023, 7:27 AM | National News |

ಹೊಸದಿಲ್ಲಿ: ಗುರುವಾರ ಬಿಡುಗಡೆಗೊಂಡಿರುವ 2023ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ, ಭಾರತವು 125 ದೇಶಗಳ ಪಟ್ಟಿಯಲ್ಲಿ 111ನೇ ಸ್ಥಾನದಲ್ಲಿದೆ.

ಸೊನ್ನೆಯಿಂದ 100 ಅಂಕಗಳ ಮಾಪಕದಲ್ಲಿ ಭಾರತವು 28.7 ಅಂಕಗಳನ್ನು ಗಳಿಸಿದೆ. ಈ ಮಾಪಕದಲ್ಲಿ ಸೊನ್ನೆ ಎಂದರೆ ಶ್ರೇಷ್ಠ ಅಂಕವಾಗಿದೆ (ಹಸಿವೆಯೇ ಇಲ್ಲ) ಮತ್ತು 100 ಎಂದರೆ ಅತ್ಯಂತ ಕೆಟ್ಟ ಪರಿಸ್ಥಿತಿ (ಹಸಿವೆಯಿಂದ ತೀವ್ರವಾಗಿ ಬಳಲುತ್ತಿರುವುದು)ಯಾಗಿದೆ.

ಸರಕಾರೇತರ ಸಂಘಟನೆಗಳಾದ 'ಕನ್ಸರ್ನ್ ವರ್ಲ್ಡ್ವೈಡ್' ಮತ್ತು 'ವೆಲ್ಡ್ ಹಂಗರ್ ಹಿಲ್ಲೆ ಗುರುವಾರ ಬಿಡುಗಡೆಗೊಳಿಸಿರುವ ಸೂಚ್ಯಂಕವು ಭಾರತದಲ್ಲಿ ಹಸಿವಿನ ತೀವ್ರತೆಯನ್ನು 'ಗಂಭೀರ'ದ ವರ್ಗಕ್ಕೆ ಸೇರಿಸಿದೆ.

ಸೋಜಿಗದ ಸಂಗತಿಯೆಂದರೆ, ಈ ಬಾರಿಯ ಹಸಿವು ಸೂಚ್ಯಂಕದಲ್ಲಿ ಭಾರತವು ಅಫ್ಘಾನಿಸ್ತಾನವನ್ನು ಹೊರತುಪಡಿಸಿ ಇತರೆಲ್ಲಾ ತನ್ನ ನೆರೆ ದೇಶಗಳಿಗಿಂತ ಹಿಂದುಳಿದಿದೆ. ಪಾಕಿಸ್ತಾನ 102ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 81, ನೇಪಾಳ 69 ಮತ್ತು ಶ್ರೀಲಂಕಾ 60ನೇ ಸ್ಥಾನಗಳಲ್ಲಿವೆ.

ಹಸಿವೆಯಲ್ಲಿ ಭಾರತಕ್ಕಿಂತಲೂ ಕಳಪೆ ಸಾಧನೆ ಮಾಡಿರುವ ದೇಶಗಳಲ್ಲಿ ಅಫ್ಘಾನಿಸ್ತಾನ, ಕೆರಿಬಿಯನ್ ದೇಶ ಹೈಟಿ ಮತ್ತು ಸಬ್ ಸಹಾರ ಆಫ್ರಿಕಾದ 12 ದೇಶಗಳು ಒಳಗೊಂಡಿವೆ.

ಜಾಗತಿಕ ಹಸಿವು ಸೂಚ್ಯಂಕವನ್ನು ನಾಲ್ಕು ಅಂಶಗಳನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಅವುಗಳೆಂದರೆ ಅಪೌಷಿಕತೆ, ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪ್ರಮಾಣ, ಪ್ರಾಯಕ್ಕೆ ತಕ್ಕಷ್ಟು ಎತ್ತರವಿಲ್ಲದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪ್ರಮಾಣ ಮತ್ತು ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ದರ.

ಈ ಬಾರಿಯ ವರದಿಯನ್ನು 2000, 2008 ಮತ್ತು 2015ರ ವರದಿಗಳೊಂದಿಗೆ ಮಾತ್ರ ಹೋಲಿಸಬಹುದಾಗಿದೆ ಎಂದು ಸಮೀಕ್ಷೆ ನಡೆಸಿರುವ ಸಂಸ್ಥೆಗಳು ಹೇಳಿವೆ. ಯಾಕೆಂದರೆ ಅಂಕಿಅಂಶಗಳನ್ನು ಪ್ರತಿವರ್ಷ ಪರಿಷ್ಕರಿಸಲಾಗುತ್ತದೆ ಮತ್ತು ಪಟ್ಟಿಯಲ್ಲಿ ಬರುವ ದೇಶಗಳು ಬದಲಾಗುತ್ತಿರುತ್ತವೆ ಎಂದು ಅದು ತಿಳಿಸಿದೆ.

2015ರಲ್ಲಿ ಭಾರತ 29.2 ಅಂಕಗಳನ್ನು ಗಳಿಸಿತ್ತು. ಅದಕ್ಕೆ ಹೋಲಿಸಿದರೆ, ಈ ಬಾರಿ 28.7 ಅಂಕಗಳೊಂದಿಗೆ ಭಾರತ ಕೊಂಚ ಪ್ರಗತಿ ಸಾಧಿಸಿದೆ. ಆದರೆ, 2008ರ 35.5 ಮತ್ತು 2000ದ 38.4 ಅಂಕಗಳಿಗೆ ಹೋಲಿಸಿದರೆ, ಈ ಬಾರಿಯ ಪ್ರಗತಿ ಗಣನೀಯವಾಗಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...