ಐಸಿಎಸ್ ಇ - ಐಎಸ್ ಸಿ ಫಲಿತಾಂಶ ಪ್ರಕಟ, ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಪಾಸ್

Source: uni | Published on 10th July 2020, 11:41 PM | State News | Don't Miss |

 

ಬೆಂಗಳೂರು: ಐಸಿಎಸ್ ಇ ಮತ್ತು ಐಎಸ್ ಸಿಯ 10, 12ನೇ ತರಗತಿಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ರಾಜ್ಯದ ಶೇ.100 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಪರೀಕ್ಷೆ ಬರೆದಿದ್ದ ರಾಜ್ಯದ 339 ಐಸಿಎಸ್‌ಇ ಶಾಲೆಗಳ 19,770 ವಿದ್ಯಾರ್ಥಿಗಳು ಮತ್ತು 41 ಐಎಸ್‌ಸಿ ಶಾಲೆಗಳ 1,804 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಒಟ್ಟು ತೇರ್ಗೆಡೆಯಾದ ಐಸಿಎಸ್‌ಇ ವಿದ್ಯಾರ್ಥಿಗಳ ಪೈಕಿ 50.76 ರಷ್ಟು ಬಾಲಕರಾಗಿದ್ದು, ಉಳಿದವರು ಬಾಲಕಿಯರು. ಐಸಿಇ ವಿದ್ಯಾರ್ಥಿಗಳಲ್ಲಿ, 48.76% ಬಾಲಕರು ಮತ್ತು ಉಳಿದವರು ಬಾಲಕಿಯರಾಗಿದ್ದಾರೆ.
ದೇಶಾದ್ಯಂತ ಈ ವರ್ಷ ಒಟ್ಟು 2,06,525 ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಮತ್ತು 1,377 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ ಸಿ) ಪರೀಕ್ಷೆ ಎಂದು ಕರೆಯಲ್ಪಡುವ 12ನೇ ತರಗತಿ ಪರೀಕ್ಷೆಯಲ್ಲಿ  85,611 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ, 2,798 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ

Read These Next