ಹುಬ್ಬಳ್ಳಿ: ಆ ೧೨ ರಂದು ಕು.ಶೃತಿ ಮುಸಳೆ ಸ್ಥಾಪಿಸಿರುವ ಶೃತಿ ನೃತ್ಯ ಅಕಾಡೆಮಿ(ರಿ)ಯ ಉದ್ಟಾಟನೆ

Source: so english | By Arshad Koppa | Published on 12th August 2017, 8:33 AM | State News | Guest Editorial |

ಹುಬ್ಬಳ್ಳಿ : ಬಾಲ್ಯದಿಂದಲೂ ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕು.ಶೃತಿ ಮುಸಳೆ ಸ್ಥಾಪಿಸಿರುವ ಶೃತಿ ನೃತ್ಯ ಅಕಾಡೆಮಿ(ರಿ)ಯ ಉದ್ಘಾಟನಾ ಸಮಾರಂಭ ಇದೇ ದಿ.೧೨ರಂದು ಸಂಜೆ ೫ಗಂಟೆಗೆ ಇಲ್ಲಿನ ಆದರ್ಶನಗರದ ಡಾ.ಡಿ.ಎಸ್.ಕರ್ಕಿ ಭವನದಲ್ಲಿ ನಡೆಯಲಿದೆ.
ನಗರದ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಶೃತಿ ಮುಸಳೆ ಅವರು, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಅಕಾಡೆಮಿಯನ್ನು ಉದ್ಘಾಟಿಸಲಿದ್ದಾರೆಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಂ.ಶಂಕರಾಚಾರ್ಯ, ವರದಾ ಕಡ್ಲಾಸ್ಕರ, ರಂಗಾಯಣ ಮಾಜಿ ಅಧ್ಯಕ್ಷ ಸುಭಾಸ ನರೇಂದ್ರ ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ ಮಂಗಳೂರಿನ ಉದಯೋನ್ಮುಖ ನೃತ್ಯ ಕಲಾವಿದ ಅಭಿಲಾಷ ಉಡಪರವರಿಗೆ ಪ್ರಥಮ ಸನ್ಮಾನವನ್ನು ಅರ್ಪಿಸಲಿದ್ದೇವೆ. ಅಲ್ಲದೇ ಇದೇ ವೇಳೆ ಸಂಸ್ಥೆಯ ಲಾಂಛನ ಬಿಡುಗಡೆಗೊಳ್ಳಲಿದೆ ಅವರು ತಿಳಿಸಿದರು.
ಉದ್ಘಾಟನೆ ಬಳಿಕ ಸಂಸ್ಥೆಯ ಸಂಸ್ಥಾಪಕಿ ಕು.ಶೃತಿ ಮುಸಳೆ ಮತ್ತು ಅಭಿಲಾಷ ಉಡಪ, ವಿಕಲ ಚೇತನ ಬಾಲಕಿ ಕು.ವೈಭವಿ ಕುಲಕರ್ಣಿ ಅವರಿಂದ ನೃತ್ಯ ಪ್ರದರ್ಶನ ಜರುಗಲಿದೆ ಎಂದರು.
ಇದಕ್ಕೂ ಮುನ್ನ ಅಂದು ಬೆಳಿಗ್ಗೆ ೧೦ಗಂಟೆಗೆ ನಗರದ ಗೋಕುಲರಸ್ತೆ ಗ್ರೀನಗಾರ್ಡನ್ ಉದ್ಯಾನವನದಲ್ಲಿ ಪರಿಸರ ಜನಜಾಗೃತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಪ್ನಾ ಮುಸಳೆ, ಕಿರಣ.ಎಚ್.ಎಸ್., ಮುರಳಿಧರ ಮುಸಳೆ, ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಮತ್ತಿತರರಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...