ಯುವಕರ ಮೇಲೆ ಮಾರಣಾಂತಿಕ ಹಲ್ಲೆಗೈದವರ ವಿರುದ್ಧ ಕಠಿಣ ಕ್ರಮಕ್ಕೆ ತಂಝೀಮ್ ಆಗ್ರಹ

Source: sonews | By Staff Correspondent | Published on 9th March 2018, 7:19 PM | Coastal News | State News | Don't Miss |

ಭಟ್ಕಳ: ಹೊನ್ನಾವರದ ಕರ್ಕಿ ರಾ.ಹ ಯಲ್ಲಿ ಭಟ್ಕಳದ ಇಬ್ಬರು ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ತೀವ್ರವಾಗಿ ಖಂಡಿಸಿದ್ದು ಕೂಡಲೇ ಹಲ್ಲೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಈ ಕುರಿತು ಭಟ್ಕಳದ ಪ್ರಭಾರಿ ಡಿ.ವೈ.ಎಸ್.ಪಿ ಜಿ.ಟಿ.ನಾಯಕರನ್ನು ಭೇಟಿಯಾಗಿರುವ ತಂಝೀಮ್ ನಿಯೋಗ ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕಾನೂನು ಜರಗಿಸಬೇಕು, ಮುಂದೇ ಈ ರೀತಿಯ ಘಟನಾವಳಿಗಳು ಮರುಕಳಿಸದಂತೆ ಜಾಗೃತೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಕೇವಲ ನಾಲ್ಕು ಜನರನ್ನು ಬಂಧಿಸಿ ಸುಮ್ಮನೆ ಕುಳಿತುಕೊಂಡರೆ ಸಮಸ್ಯೆಗೆ ಪರಿಹಾರ ಸಿಗದು, ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಕ್ರಮ ಜರಗಿಸುವಂತೆ ನಿಯೋಗ ಆಗ್ರಹಿಸಿದೆ.

ತಂಝೀಮ್ ನಿಯೋಗದ ನೇತೃತ್ವ ವಹಿಸಿದ್ದ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮುಹಿದ್ದೀನ್ ಖರೂರಿ ಡಿ.ವೈ.ಎಸ್.ಪಿ ಯೊಂದಿಗೆ ಮಾತನಾಡಿ, ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಕೆಲವರು ಇಂತಹ ಹಲವು ಘಟನೆಗಳಲ್ಲಿ ಆಗಾಗ ಭಾಗವಹಿಸುತ್ತಿದ್ದು ಆರಂಭದಲ್ಲಿ ಕೆಲವು ಮಂದಿಯನ್ನು ಹಿಡಿದಂತೆ ಮಾಡಿ ಆ ಮೇಲೆ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದ್ದು ಈ ಪ್ರಕರಣವೂ ಕೂಡ ಅದರ ಸಾಲಿಗೆ ಸೇರುವಂತಾಗಬಾರದು, ಜನರು ಪ್ರತಿಭಟನೆಗಿಳಿಯುವಂತೆ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದು ನಾವು ನಮ್ಮ ಯುವಕರನ್ನು ಹತೋಟಿಯಲ್ಲಿಟ್ಟುಕೊಂಡಿದ್ದೇವೆ. ಯಾವುದೇ ಅಹಿತಕರ ಘಟನೆಗಳಿಗೆ ನಾವು ಅವಕಾಶ ಮಾಡಿಕೊಡುವುದಿಲ್ಲ. ಆದರೆ ಪೊಲೀಸರು ಮಾತ್ರ ತಮ್ಮ ಕರ್ತವ್ಯವನ್ನು ಪಕ್ಷಾತೀತವಾಗಿ ಮಾಡಬೇಕೆಂದು ಆಗ್ರಹಿಸಿದರು. 

ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಇತ್ತಿಚೆಗೆ ಹೊನ್ನಾವರದಲ್ಲಿ ನಾಪತ್ತೆಯಾಗಿದ್ದ ಸಿರ್ಸಿಯ ಮುಸ್ಲಿಮ್ ಯುವಕನನ್ನು ಪತ್ತೆ ಹಚ್ಚಲಾಯಿತು. ಆದರೆ ಆತನ ಮೇಲೆ ಹಲ್ಲೆಗೈದು ಅಪಹರಣ ಮಾಡಿದವರ ಮೇಲೆ ಇದುವರೆಗೂ ಯಾವುದೇ ಕ್ರಮ ಜರಗಿಸಿಲ್ಲ. ಭಟ್ಕಳದಲ್ಲಿ ಮಂದಿರಗಳ ಮೇಲೆ ಮಾಂಸ ಎಸೆತದ ಪ್ರಕರಣವನ್ನೂ ಉದಾಹರಿಸಿದ ಅವರು, ಓರ್ವ ಪಿಎಸ್‍ಐ ಯೊಬ್ಬರು ಘಟನೆಯನ್ನು ಜಾಲಾಡಿ ರಾಜ್ಯದ ಗೃಹ ಮಂತ್ರಿಗೆ ವರದಿಯನ್ನು ನೀಡಿದ್ದರೂ ಇದುವರೆಗೂ ಆ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ವಿರುದ್ಧ ಒಂದು ಪ್ರಕರಣ ದಾಖಲಾಗಿಲ್ಲ ಮತ್ತು ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ, ಹೊನ್ನಾವರದಲ್ಲಿ ಪೂರ್ವಯೋಜಿತವಾಗಿ ದನಸಾಗಾಟದ ನೆಪದಲ್ಲಿ ಭಟ್ಕಳದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗಿದೆ ಇದರ ಸಂಪೂರ್ಣ ತನಿಖೆಯಾಗಬೇಕು ಮತ್ತು ಘಟನೆಯಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. 

ತಂಝೀಮ್ ನಿಯೋಗದೊಂದಿಗೆ ಮಾತನಾಡಿದ ಡಿವೈಎಸ್ಪಿ  ಜಿ.ಟಿ.ನಾಯಕ, ಘಟನೆಯ ಮಾಹಿತಿ ದೊರೆತ 15ನಿಮಿಷದಲ್ಲೇ ಪೊಲೀಸರ ತಂಡ ಘಟನಾಸ್ಥಳಕ್ಕೆ ತಲುಪಿದ್ದು ಹಲ್ಲೆಗೊಳದವರ ರಕ್ಷಣೆಯನ್ನು ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ತಕ್ಷಣವೇ ಪರಿಸ್ಥಿತಿಯನ್ನು ಹತೋಟಿಗೆ ತಂದು ಶಾಂತಿ ಸ್ಥಾಪಿಸುವಲ್ಲಿ ಪೊಲೀಸರು ನೆರವಾಗಿದ್ದಾರೆ. ಪೊಲೀಸರು ಯಾವುದೇ ಅಪರಾಧಿಯನ್ನು ಕ್ಷಮಿಸುವುದಿಲ್ಲ. ಬಂಧನದ ಭಯದಿಂದ ಆರೋಪಿಗಳು ತಲೆಮರೆಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಅವರು ಒಂದಿಲ್ಲೊಂದು ದಿನ ಪೊಲೀಸರ ಬಲೆಗೆ ಬೀಳುತ್ತಾರೆ ಎಂದ ಅವರು ಹಲ್ಲೆ ಮಾಡಿದವರಲ್ಲಿ ಭಟ್ಕಳದ ಕೆಲವರು ಭಾಗಿಯಾಗಿರುವ ಸಾಧ್ಯತೆಗಳಿದ್ದು ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಲು ಕ್ರಮ ಜರಗಿಸಲಾಗುವುದು ಎಂದರು. 

ನಿಯೋಗದಲ್ಲಿ ಭಟ್ಕಳ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾಧಿಖ್ ಮಟ್ಟಾ, ಭಟ್ಕಳ ಮುಸ್ಲಿಮ್ ಫೆಡರೇಷನ್ ಅಧ್ಯಕ್ಷ ಇಮ್ತಿಯಾಝ್ ಉದ್ಯವರ್, ತಂಝೀಮ್ ಮುಖಂಡರಾದ ಮುಹಮ್ಮದ್ ಸಿದ್ದಿಖ್ ಡಿ.ಎಫ್, ಮೌಲಾನ ಯಾಸಿರ್ ಬರ್ಮಾವರ್ ನದ್ವಿ, ಮುಹಮ್ಮದ್ ಅಶ್ಫಾಖ್ ಕೆ.ಎಂ. ಮೌಲಾನ ಅಝೀಝುರ್ರಹ್ಮಾನ್ ನದ್ವಿ, ಅಬ್ದುಲ್ ರಹೀಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Read These Next

ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ...

ರಸ್ತೆಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು

ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ...

ಹುಬ್ಬಳ್ಳಿ-ಧಾರವಾಡ ಕೊಲೆ ಪ್ರಕರಣಗಳು ವರದಿ ಸಲ್ಲಿಸಲು ಎಡಿಜಿಪಿಗೆ ಸೂಚನೆ; ಪರಮೇಶ್ವ‌ರ್

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪದೇ ಪದೇ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ...

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆ; ಆರೋಪಿ ಪರಾರಿ | ಹುಬ್ಬಳ್ಳಿಯಲ್ಲಿ ನಡೆದ ಎರಡನೇ ಬರ್ಬರ ಕೃತ್ಯ

ಹುಬ್ಬಳ್ಳಿಯ ನೇಹಾ ಹಿರೇಮಠ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮೀನಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಪ್ರೀತಿ ನಿರಾಕರಿಸಿದ ಕಾರಣಕ್ಕೆ ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...