ಭಟ್ಕಳದಲ್ಲಿ ಗುಡುಗುಮಿಂಚಿನ ಮಳೆಗೆ ಧರಾಶಾಹಿಯಾದ ಮರ; ರಸ್ತೆ ಸಂಚಾರ ಅಸ್ತವ್ಯಸ್ಥ

Source: SOnews | By Staff Correspondent | Published on 19th May 2024, 5:11 PM | Coastal News | Don't Miss |

 

ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ತಂಪಿನ ಅನುಭವ ನೀಡಿದ ಮಳೆರಾಯ

ಭಟ್ಕಳ: ಭಟ್ಕಳದಲ್ಲಿ ಭಾನುವಾರ ಬೆಳಗ್ಗೆಯಿಂದ ಬಿರುಗಾಳಿಯೊಂದಿಗೆ ಧಾರಾಕಾರ ಮಳೆ ಆರಂಭಗೊಂಡಿದ್ದು ಕೆಲವು ಕಡೆಗಳಲ್ಲಿ ಬೃಹತ್ ಮರಗಳು ಧರೆಗೆ ಉರುಳಿ ಬಿದ್ದಿವೆ ಎಂದು ವರದಿಯಾಗಿದೆ.

ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ  ಅಲ್ಲಮಾ ಇಕ್ಬಾಲ್ ಪ್ರಾಥಮಿಕ ಶಾಲೆ ಬಳಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಬೃಹತ್ ಮರವು ರಸ್ತೆಗೆ ಉರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಪ.ಪಂ. ಸದಸ್ಯರಾದ ತೌಫೀಖ್ ಬ್ಯಾರಿ, ವಸೀಮ್ ಮನೆಗಾರ್ ಎಸ್.ಡಿ.ಪಿಐ ಭಟ್ಕಳ ಅಸೆಂಬ್ಲಿ ಅಧರ್ಧಕ್ಷ ಮಕ್ಬೂಲ್ ಶೇಕ್ ಮತ್ತು ಇರ್ಫಾನ್ ಎಂಬುವವರು ಸ್ಥಳಕ್ಕೆ ತಲುಪಿ ಮರವನ್ನು ತೆರವುಗೊಳಿಸಿದರು.

ಕಳೆದ ಹಲವುದಿನಗಳಿಂದ ಭಟ್ಕಳದಲ್ಲಿ ಉತ್ತರಕರ್ನಾಟಕದ ರೀತಿಯಲ್ಲಿ ಬಿಸಿಲಿನ ಝಳದ ಅನುಭವವಾಗುತ್ತಿದ್ದು ಭಾನುವಾರ ಬಿದ್ದ ಮಳೆಗೆ ವಾತವರಣದಲ್ಲಿ ಕೊಂಚ ಬದಲಾವಣೆಯಾದಂತಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದಿಂದಾಗಿ ಕರಾವಳಿ ಕರ್ನಾಟಕದ ಮೇಲೆ ಗಂಟೆಗೆ 40 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಹೆಚ್ಚಿನ ಅಲೆಗಳು ಮತ್ತು ಬಿರುಗಾಳಿ ಬೀಸುವ ಸಾಧ್ಯತೆಗಳೂ ಇವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿದಿರುವವರು ಕೂಡಲೇ ದೋಣಿಗಳನ್ನು ಬಿಟ್ಟು ಬೋಟು ಸಮೇತ ದಡಕ್ಕೆ ಬರಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಇದೇ ರೀತಿಯ ಟ್ರೆಂಡ್ ಮೇ 22 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.

ಭಟ್ಕಳ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಕಳೆದ ವಾರ ಬಿಸಿಲಿನ ಝಳದಿಂದಾಗಿ ಜನರ ಸ್ಥಿತಿ ಶೋಚನೀಯವಾಗಿತ್ತು. ಕೆಲವೆಡೆ ಮಿಂಚು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

 

Read These Next

ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿಯರ ಆರೋಗ್ಯದ ದತ್ತು ಯೋಜನೆಗೆ ಅಭೂತಪೂರ್ವ ಯಶಸ್ಸು

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡುವ ದೃಷ್ಠಿಯಿಂದ, ಜಿಲ್ಲಾಧಿಕಾರಿ ...

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಗುರುತು ಬಹಿರಂಗ ಪಡಿಸದೇ ಇರುವಂತೆ ಜಿಲ್ಲಾಧಿಕಾರಿ ಮನವಿ

ಒಂದು ವೇಳೆ ಪ್ರಕಟವಾದಲ್ಲಿ, ಪ್ರಕಟಿ ಪಡಿಸಿದವರ ವಿರುದ್ಧ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ ಕಾಯ್ದೆ ...

ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿಯರ ಆರೋಗ್ಯದ ದತ್ತು ಯೋಜನೆಗೆ ಅಭೂತಪೂರ್ವ ಯಶಸ್ಸು

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡುವ ದೃಷ್ಠಿಯಿಂದ, ಜಿಲ್ಲಾಧಿಕಾರಿ ...