ಬೆಂಗಳೂರಿನಲ್ಲಿ ಹಲವು ಬಡಾವಣೆಗಳು ಜಲಾವೃತ; ರಾಜಕಾಲುವೆ ಪಕ್ಕದ ಗೋಡೆ ನೆಲಸಮ; ಮನೆ ಮೇಲೆ ಉರುಳಿದ ಮರ; ಕೆರೆಯಂತಾದ ರಸ್ತೆಗಳು

Source: Vb | By I.G. Bhatkali | Published on 31st August 2022, 7:44 AM | State News |

ಬೆಂಗಳೂರು: ನಗರದಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಇದರ ನಡುವೆ ರಾಜ ಕಾಲುವೆ ಪಕ್ಷದ ಗೋಡೆ ನೆಲಸಮವಾಗಿದ್ದು, ಕೂದಲೆಳೆ ಅಂತರದಲ್ಲಿ ಎರಡು ಕುಟುಂಬಗಳು ಪಾರಾಗಿವೆ.

ಬೊಮ್ಮನಹಳ್ಳಿಯ ರೈನ್‌ ಬೋ ಲೇಔಟ್, ಅನುಗ್ರಹ ಲೇಔಟ್ ಸೇರಿದಂತೆ ಎರಡು ಬಡಾವಣೆಗಳು ಜಲಾವೃತಗೊಂಡಿವೆ. ಎಂದಿನಂತೆ ಸಾಯಿ ಲೇಔಟ್, ಪೈ ಲೇಔಟ್ ಸಹ ನೀರಿನಿಂದ ಭರ್ತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ನೀರು ಹೊರ ಹಾಕುತ್ತಿದ್ದಾರೆ. ಹಲವು ನಿವಾಸಿಗಳನ್ನು ದೋಣಿಗಳ ಮೂಲಕವೂ ಸಾಗಿಸಲಾಯಿತು.

ಗೋಡೆ ಕುಸಿತ: ಮಳೆ ಪ್ರವಾಹಕ್ಕೆ ನಗರದ ನಾಗವಾರ ಬಳಿ ರಾಜಕಾಲುವೆ ಪಕ್ಕದಲ್ಲಿರುವ ಮನೆ ಗೋಡೆ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ. ಈ ಎರಡು ಕುಟುಂಬಗಳ ಮನೆಯಲ್ಲಿ 4 ಪುಟ್ಟ ಮಕ್ಕಳ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ನಿನ್ನೆ ಜೋರಾದ ಮಳೆಯಿಂದ ಬೇರೆ ಮನೆಗೆ ತೆರಳಿ ಮಲಗಿದ್ದರು. ಮಂಗಳವಾರ ಬೆಳಗ್ಗೆ ನೋಡಿದರೆ ಮನೆ ಗೋಡೆ ಕುಸಿದಿದೆ. ಈ ಬಗ್ಗೆ ಹಲವು ಬಾರಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮಳೆಯಿಂದಾಗಿ ಕಬ್ಬನ್ ಪಾರ್ಕ್‌ನಲ್ಲಿರುವ ಹೊಂಡಗಳು, ಕಸ್ತೂರ್ಬಾ ರಸ್ತೆಯ ಎಡಬದಿಯಲ್ಲಿರುವ ಹೊಂಡಗಳೂ ಭರ್ತಿಯಾಗಿವೆ. ನಂದಿನಿ ಲೇಔಟ್ ಮುಖ್ಯರಸ್ತೆಯ 11ನೇ ಕ್ರಾಸ್ ಬಳಿಯ ಮನೆ ಮೇಲೆ ಬೃಹತ್ ಮರ ಉರುಳಿಬಿದ್ದಿದೆ. ಬೃಹತ್ ಮರ ಉರುಳಿದ ಪರಿಣಾಮ ಪಕ್ಕದಲ್ಲಿದ್ದ ವಿದ್ಯುತ್‌ ಕಂಬ ತುಂಡಾಗಿ ದೆ. ತುಂಡಾದ ವಿದ್ಯುತ್‌ ಕಂಬ ಮನೆ ಮೇಲೆ ವಾಲಿದೆ. ಮರ ಉರುಳಿಬಿದ್ದ ಮನೆ ಬಳಿಗೆ ಬಿಬಿಎಂಪಿ ಅರಣ್ಯಘಟಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೇ ರೀತಿ, ನಗರದಲ್ಲಿ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ರಿಚ್ಚಂದ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ನಿಂತಿದೆ. ಬಿಳೇಕಹಳ್ಳಿ ಸಮೀಪದ ಅನುಗ್ರಹ ಲೇಔಟ್ ಪೂರ್ತಿ ನೀರು ನಿಂತಿದೆ. ಯಶವಂತಪುರದ ಪೊಲೀಸ್‌ ಠಾಣೆ ರಸ್ತೆಗೆ ಅಡ್ಡಲಾಗಿ ಮರದ ಬೃಹತ್ ಕೊಂಬೆ ಬಿದ್ದಿದೆ.

ನಗರ ಮಾತ್ರವಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿಯಲ್ಲಿ ಮಳೆ ಸುರಿದ ಕಾರಣ ಹಲವು ರಸ್ತೆಗಳು ಜಲಾವೃತಗೊಂಡಿವೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...