ಭಟ್ಕಳ; ಎಡೆಬಿಡದ ಮಳೆಗೆ ಜನಜೀವನ ಅಸ್ತವ್ಯಸ್ಥ

Source: sonews | By Staff Correspondent | Published on 21st July 2019, 4:15 PM | Coastal News | Don't Miss |

ಭಟ್ಕಳ: ರವಿವಾರ ಬೆಳಿಗ್ಗೆಯಿಂದ ಭಟ್ಕಳ ತಾಲೂಕಿನಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯೆಸ್ಥಗೊಂಡಿದೆ.ನಗರದ ತಗ್ಗು ಪ್ರದೇಶಗಳು ತುಂಬಿಕೊಂಡಿದ್ದು ಮನಗಳ ಒಳಗೆ ನೀರು ನುಗ್ಗತೊಡಗಿದೆ. 

ನಗರದ ಹೃದಯಭಾಗವಾಗಿರುವ ಶಮ್ಸುದ್ದೀನ್ ವೃತ್ತದಲ್ಲಿ ನೀರು ಮೊಣಕಾಲು ಮಟ್ಟ ತುಂಬಿಕೊಂಡಿದ್ದು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.  ಹನಿಫಾಬಾದ್ ಪ್ರದೇಶದ ರಹ್ಮತಾಬಾದ್ ಮೊಹಲ್ಲಾದಲ್ಲಿ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಶಾಲಾವಾಹನವೊಂದು ರಸ್ತೆಯಲ್ಲಿ ಸಿಲುಕಿಕೊಂಡ ಪರಿಣಾ ಕೆಲ ಹೊತ್ತು ರಸ್ತೆ ತಡೆಯುಂಟಾಗಿರುವ ಘಟನೆಯೂ ವರದಿಯಾಗಿದೆ. ಅಲ್ಲದೆ ರಸ್ತೆಯ ಪಕ್ಕದಲ್ಲಿ ನಿರ್ಮಿಸಿದ ಚರಂಡಿ ಮಳೆನೀರಿನಿಂದ ತುಂಬಿಕೊಂಡಿದ್ದು ರಸ್ತೆ ಹಾಗೂ ಚರಂಡಿ ನಡುವೆ ವ್ಯತ್ಯಾಸ ಕಾಣದೆ ಜನರು ಚರಂಡಿಗೆ ಜಾರಿ ಆಸ್ಪತ್ರೆಗೆ ಸೇರಿರುವ ಘಟನೆಯೂ ವರದಿಯಾಗಿದ್ದು ಇನ್ನೂ ಗ್ರಾಮೀನ ಭಾಗದದಲ್ಲಿ ಏನೆಲ್ಲ ತೊಂದರೆಗಳು ಸಂಭವಿಸಿವೆ ಎನ್ನುವುದು ಇನ್ನಷ್ಟೆ ತಿಳಿದುಬರಬೇಕಾಗಿದೆ.  
 
Read These Next

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್