ಪುಟ್‍ಬಾಲ್ ಕ್ಷೇತ್ರದ ಬೆಳವಣಿಗೆ: ಶಾಸಕರ ಭರವಸೆ

Source: so news | Published on 12th February 2020, 12:16 AM | State News | Don't Miss |

ಹಾಸನ:- ಜಿಲ್ಲೆಯಲ್ಲಿ ಪುಟ್‍ಬಾಲ್ ಕ್ರೀಡೆ ಬೆಳೆಯಲು ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕರಾದ ಪ್ರೀತಂ ಜೆ ಗೌಡ ಅವರು ತಿಳಿಸಿದರು.

ಹಾಸನ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಹಾಸನ ಜಿಲ್ಲಾ ಫುಟ್ಬಾಲ್ ಲೀಗ್ ಫೈನಲ್ ಪಂದ್ಯ ಹೊಯ್ಸಳ ಫುಟ್ಬಾಲ್ ಕ್ಲಬ್ ಹಾಗೂ ಯಂಗ್ ಬಾಯ್ಸ್ ಫುಟ್ಬಾಲ್ ಕ್ಲಬ್ ತಂಡಗಳ ನಡುವೆ ಜಿಲ್ಲಾ ಕ್ರೀಡಾಂಗಣದಲ್ಲಿ ರೋಚಕ ಫೈನಲ್ ಪಂದ್ಯ ನಡೆಯಿತು.

ಈ ಫೈನಲ್ ಪಂದ್ಯವನ್ನು ಬಾಲು ಒದೆಯುವುದರ ಮೂಲಕ ಶಾಸಕರಾದ ಪ್ರೀತಂ ಜೆ ಗೌಡರವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಫುಟ್ಬಾಲ್ ಅಸೋಸಿಯೇಶನ್ ಈಗ ಪ್ರಾರಂಭವಾಗಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಮುಂದಿನ ದಿನಗಳಲ್ಲಿ ಹಾಸನ ಫುಟ್ಬಾಲ್ ಅಸೋಸಿಯೇಷನ್ ಇನ್ನೂ ಹೆಚ್ಚು ಬೆಳೆಯಲ್ಲಿ ಮತ್ತು ಹೆಚ್ಚು ಹೆಚ್ಚು ಯುವಕರು ಫುಟ್ಬಾಲ್ ಕ್ರೀಡೆಯಲ್ಲಿ ಪಾಲ್ಗೊಳ್ಳಲಿ ಎಂದು ಆಶಿಸಿದರು.
ಈ ಪಂದ್ಯದಲ್ಲಿ ಹಾಸನದ ಹೊಯ್ಸಳ ಫುಟ್ ಬಾಲ್ ಕ್ಲಬ್ 5-0 ಗೋಲುಗಳ ಮೂಲಕ ಯಂಗ್ ಬಾಯ್ಸ್ ತಂಡವನ್ನು ಮಣಿಸಿದರು.
ಫುಟ್ಬಾಲ್ ಪ್ರೇಮಿ ಎಸ್.ಎಸ್.ಎಂ ಆಸ್ಪತ್ರೆ ಮಾಲೀಕರಾದ ಡಾ|| ದಿನೇಶ್ ಅವರ ಸ್ಮರಣಾರ್ಥ ಆಟಗಾರರಿಗೆ ಟ್ರೋಫಿಗಳನ್ನು ನೀಡಲಾಯಿತು. ಬಹುಮಾನ ವಿತರಣೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ರಾಮಕೃಷ್ಣ, ಮೋಹನ್ ಪ್ರಶಾಂತ್, ಅಪ್ಪಾಜಿ ಹಾಗೂ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಡಿಸೆಂಬರ್ ತಿಂಗಳಲ್ಲಿ ಪ್ರಾರಂಭವಾದ ಹಾಸನ ಫುಟ್ಬಾಲ್ ಲೀಗ್ ಸತತ ಒಂದೂವರೆ ತಿಂಗಳು ಯಶಸ್ವಿಯಾಗಿ ನಡೆದು ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...