ಸಂವಿಧಾನಬದ್ಧ ಹಕ್ಕಿನಿಂದ ವಂಚಿತರಾಗುತ್ತಿರುವ ಗೊಂಡ ಸಮುದಾಯ

Source: sonews | By Staff Correspondent | Published on 6th September 2020, 10:10 PM | Coastal News | Special Report | Don't Miss |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗೊಂಡ ಜಾತಿಯವರಿಗೆ ಪರಿಶಿಷ್ಟ ವರ್ಗದ ಪ್ರಮಾಣ ಪತ್ರ ನೀಡುವುದನ್ನು ಸ್ಥಗಿತಗೊಳಿಸಿರುವುದರಿಂದ, ಸಂವಿಧಾನಬದ್ಧ ಹಕ್ಕಿನಿಂದ ವಂಚಿತರಾಗಿದ್ದಾರೆ. ನೈಜ ಗೊಂಡ ಜಾತಿಯವರಿಗೆ ಅನ್ಯಾಯವನ್ನು ಸರಿದೂಗಿಸುವಲ್ಲಿ ಸರಕಾರ ದಿಟ್ಟ ಕ್ರಮ ಜರುಗಿಸುವುದು ಅವಶ್ಯವಿದೆ ಎಂದು ನ್ಯಾಯಾವಾದಿ ಹಾಗೂ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅಭಿಪ್ರಯಾಪಟ್ಟಿದ್ದಾರೆ. 

ಆವರು ಈ ಕುರಿತಂತೆ ಪತ್ರಿಕಾ ಪ್ರಕಟಣೆಯೊಂದನ್ನು ಜಾರಿಗೊಳಿಸಿದ್ದು, ಗೊಂಡ ಸಮುದಾಯಕ್ಕೆ ನ್ಯಾಯಾ ದೊರಕಿಸಿಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯ ಭಟ್ಕಳಾದ್ಯಂತ ಸುಮಾರು 14 ಸಾವಿರಕ್ಕಿಂತ ಮಿಕ್ಕಿ ಗೊಂಡ ಜಾತಿಯು ಕೃಷಿ, ಬೇಸಾಯ, ಮತ್ತು ಕೃಷಿ-ಕೂಲಿ ವೃತ್ತಿಯನ್ನಾಗಿ ಅನಾದಿಕಾಲದಿಂದಲೂ ತಾಲೂಕಾದ್ಯಂತ ಜೀವಿಸುತ್ತಿದ್ದಾರೆ. ಗೊಂಡ ಸಮಾಜದವರು ಮೂಲ ಆದಿವಾಸಿ ಜನಾಂಗದವರು.

1956 ರಿಂದಲೂ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಪಡೆದುಕೊಂಡು ಬರುತ್ತಿರುವ ಗೊಂಡ ಜಾತಿಯವರಿಗೆ ಸಂವಿಧಾನಬದ್ಧ ಹಕ್ಕಿನಿಂದ ಚ್ಯುತಿಯಾಗದ ರೀತಿಯಲ್ಲಿ ಕಾನೂನಾತ್ಮಕ ಪರಿಹಾರವನ್ನ ನೀಡುವಲ್ಲಿ ಸರಕಾರ ಚಿಂತಿಸಬೇಕಾಗಿದೆ. ಇಲ್ಲದಿದ್ದರೆ ಸಂವಿಧಾನಬದ್ಧ ಹಕ್ಕಿಗೆ ವಂಚಿಸುವಲ್ಲಿ ಸರಕಾರವೇ ಪಾತ್ರವಾಗುವುದರಲ್ಲಿ ಸಂಶಯವಿಲ್ಲ.

ಕನ್ನಡ ವಿಶ್ವವಿದ್ಯಾಲಯ ಗೊಂಡ ಬುಡಕಟ್ಟು ಅಧ್ಯಯನ ವಿಭಾಗ, ಗೊಂಡ ಜನಾಂಗದ ಬಗ್ಗೆ ಕುಲ ಶಾಸ್ತ್ರೀಯ ಅಧ್ಯಯನವನ್ನು ಮಾಡಿದ್ದು ಭಟ್ಕಳ ತಾಲೂಕಿನಲ್ಲಿ ಗೊಂಡರು, ಆದಿವಾಸಿಗಳು ಎನ್ನುವುದರಲ್ಲಿ ಸಂಶಯವಿಲ್ಲ. ಪಾರ್ಥಮಿಕ ಶಿಕ್ಷಣದಲ್ಲಿ ಪಾಲಕರ ಅಜ್ಞಾನದಿಂದ ಶಿಕ್ಷಕರ ತಪ್ಪಿನಿಂದ ತಪ್ಪಾಗಿ ಜಾತಿ ನಮೂದಿಸಿದ್ದಲ್ಲಿ ಅಥವಾ ಬರವಣಿಗೆಯಲ್ಲಿ ವ್ಯತಿರಿಕ್ತವಾದಲ್ಲಿ ಅಂತಹ ಸಂದರ್ಭದಲ್ಲಿ ಸ್ಥಾನಿಕ ಸಮೀಕ್ಷಾ ವರದಿ, ಆಚಾರ-ವಿಚಾರ ಅಡಿಯಲ್ಲಿ ಗೊಂಡ ಜಾತಿಯ ಪರಿಶಿಷ್ಟ ಪಂಗಡಕ್ಕೆ ಪ್ರಮಾಣ ಪತ್ರ ನೀಡುವ ಅವಶ್ಯಕತೆಯನ್ನ ಅಗಸ್ಟ 2012 ರಲ್ಲಿ ಉಲ್ಲೇಖಿಸಿರುವುದು ದಾಖಲಾರ್ಹ. ಆದರೂ ಸರಕಾರ ಈ ದಿಶೆಯಲ್ಲಿ ಗೊಂಡ ಸಮಾಜಕ್ಕೆ ಕಳೆದ 3 ವರ್ಷದಿಂದ ಆಗುವ ಅನ್ಯಾಯ ಸರಿದೂಗಿಸದೇ ಇತ್ತೀಚಿಗೆ ಸಂಪೂರ್ಣವಾಗಿ ಪ್ರಮಾಣ ಪತ್ರ ನೀಡುವುದನ್ನು ಸ್ಥಗಿತಗೊಳಿಸಿರುವದು ವಿಷಾದಕರ.

ಹಿಗಿದ್ದಾಗಿಯೂ, ಗೊಂಡ ಜಾತಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ತೊಂದರೆ ಅನಿಭವಿಸುತ್ತಿರುವ ಹಿನ್ನೆಲೆಯಲ್ಲಿ ನೈಜ ಗೊಂಡರಿಗೆ ಸರಕಾರ ಶೀಘ್ರ ನ್ಯಾಯ ಕೊಡಿಸುವುದು ಅತೀ ಅವಶ್ಯವಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಮತ್ತು ಸಂಘಟನಾತ್ಮಕ ಹೋರಾಟಕ್ಕೆ ನಾಂದಿಆಗುವ ಲಕ್ಷಣ ಕಂಡುಬರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅನ್ಯಾಯ ಸರಿದೂಗಿಸಿ: ಏಕಾಎಕಿಯಾಗಿ ಗೊಂಡ ಜಾತಿಯನ್ನ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಇತ್ತೀಚಿನ ದಿನಗಳಲ್ಲಿ ಸ್ಥಗಿತಗೊಳಿಸಿರುವದರಿಂದ ಸಮಾಜದ ಮಕ್ಕಳ ವಿದ್ಯಾಭ್ಯಾಸ, ಸ್ಕಾಲರ್‍ಶಿಫ್, ನೌಕರಿ, ಸರಕಾರಿ ಸವಲತ್ತು ಮುಂತಾದ ಹಕ್ಕಿನಿಂದ ವಂಚಿತರಾಗುತ್ತಿದ್ದು, ಸರಕಾರದ ಈ ನೀತಿಯು ಕಾನೂನಿಗೆ ವ್ಯತಿರಿಕ್ತವಾಗಿದ್ದು ಇರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ನ್ಯಾಯವಾದಿ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...