ಮುಖ್ಯ ಮಂತ್ರಿ ಗೆಹ್ಲೂಟರಿಂದ ಮತ್ತೆ ಐದು ಹೊಸ ಗ್ಯಾರಂಟಿ ಘೋಷಣೆ; ಈ. ಡಿ. ದಾಳಿಗಳ ಕುರಿತು ಕೇಂದ್ರದ ವಿರುದ್ಧ ದಾಳಿ

Source: Vb | By I.G. Bhatkali | Published on 28th October 2023, 2:10 PM | National News |

ಜೈಪುರ: ವಿಧಾನಸಭಾ ಚುನಾವಣೆಗಳು ಸಮೀಪಿ ಸುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್   ಅವರು ಶುಕ್ರವಾರ ರಾಜ್ಯದ ಜನರಿಗೆ ಇನ್ನೂ ಐದು ಗ್ಯಾರಂಟಿಗಳನ್ನು ಪ್ರಕಟಿಸಿದರು.

ಹಳೆಯ ಪಿಂಚಣಿ ಯೋಜನೆ ಕುರಿತು ಕಾನೂನು, ಪ್ರತಿ ಕೆ.ಜಿ.ಗೆ ಎರಡು ರೂ.ದರದಲ್ಲಿ ಹಸುವಿನ ಸೆಗಣಿ ಖರೀದಿ, ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ವಿತರಣೆ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಉಂಟಾದ ನಷ್ಟಕ್ಕೆ 15 ಲ.ರೂ.ಗಳ ವಿಮೆ, ಒಂದು ಕೋಟಿ ಮಹಿಳೆಯರಿಗೆ ಮೂರು ವರ್ಷಗಳವರೆಗೆ ಉಚಿತ ಇಂಟರ್ನೆಟ್ ಸೇವೆಯೊಂದಿಗೆ ಸ್ಟಾರ್ಟ್ ಫೋನ್ ವಿತರಣೆ; ಇವು ಗೆಲ್ಲೋಟ್ ಶುಕ್ರವಾರ ಪ್ರಕಟಿಸಿದ ಹೊಸ ಗ್ಯಾರಂಟಿಗಳು. 1.05 ಕೋ. ಕುಟುಂಬಗಳಿಗೆ 500 ರೂ.ದರದಲ್ಲಿ ಎಲ್‌ ಪಿಜಿ ಸಿಲಿಂಡರ್ ಮತ್ತು ಕುಟುಂಬದ ಯಜಮಾನಿಗೆ ಕಂತುಗಳಲ್ಲಿ ವಾರ್ಷಿಕ 10,000 ರೂ.ಗೌರವ ಧನ ನೀಡುವ ಗ್ಯಾರಂಟಿಗಳನ್ನು ಗೆಹ್ಲೋಟ್  ಬುಧವಾರ ಪ್ರಕಟಿಸಿದ್ದರು.

ಭರವಸೆಗಳನ್ನು ಈಡೇರಿಸುವಲ್ಲಿ ತನ್ನ ಸಾಧನೆಯನ್ನು ಎತ್ತಿ ತೋರಿಸಿದ ಗೆಹ್ಲೋಟ್, ಏಳು ದಿನಗಳಲ್ಲಿ ರೈತರ ಸಾಲಗಳನ್ನು ಮನ್ನಾ ಮಾಡುವ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವರ ಭರವಸೆಯನ್ನು ಸಕಾಲದಲ್ಲಿ ಈಡೇರಿಸಲಾಗಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ.ಡಿ.ದಾಳಿಗಳ ಕುರಿತು ಕೇಂದ್ರದ ವಿರುದ್ಧ ದಾಳಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೆಲ್ಲೋಟ್ ಆರೋಪಿಸಿದರು. ಗುರುವಾರವಷ್ಟೇ ಜಾರಿ ನಿರ್ದೇಶನಾಲಯ (ಈ.ಡಿ.)ವು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋಡ್ತಾರಾ ಅವರಿಗೆ ಸೇರಿದ ಆವರಣಗಳ ಮೇಲೆ ದಾಳಿ ನಡೆಸಿತ್ತು. 'ಈ ದೇಶದಲ್ಲಿ ನಾಯಿಗಳಿಗಿಂತ ಹೆಚ್ಚಾಗಿ ಈ.ಡಿ.ಓಡಾಡುತ್ತಿದೆ ಎಂದು ಮುಖ್ಯಮಂತ್ರಿ ಗಳೋರ್ವರು (ಭೂಪೇಶ್ ಬಫೆಟ್) ಹೇಳು ವಂತಾಗಿತ್ತು. ಇದಕ್ಕಿಂತ ದೊಡ್ಡ ದೌರ್ಭಾಗ್ಯ ಬೇರೆ ಏನಿದೆ?' ಎಂದು ಪ್ರಶ್ನಿಸಿದ ಗೆಲ್ಲೋಟ್, ಅವರು ಏನನ್ನೇ ಹೇಳಿರಲಿ,ನೋವಿನಿಂದಲೇ ಅದನ್ನು ಹೇಳಿದ್ದಾರೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳ ಬಹುದು ಎಂದು ಸುದ್ದಿಗಾರನ್ನುದ್ದೇಶಿಸಿ ಹೇಳಿದರು. ದೋಟ್ಟಾರಾ ಬಿಜೆಪಿಯ ವಿರುದ್ಧ ಧ್ವನಿ | ಎತ್ತುತ್ತಿರುವುದರಿಂದ ಈ.ಡಿ.ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ ಗೆಲ್ಲೋಟ್, ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರಗಳಾಗಿವೆ. ಮೋದೀಜಿ, ನಿಮಗೆ ಗೊತ್ತಿಲ್ಲ,ನಿಮ್ಮ ಅಧಿಕಾರದ ಕ್ಷಣಗಣನೆ ಈಗಾಗಲೇ ಆರಂಭಗೊಂಡಿದೆ ಎಂದರು.

'ಪ್ರಧಾನಿ ಮೋದಿ ಕೂಡ ನಮ್ಮ ಗ್ಯಾರಂಟಿ ಮಾದರಿಯನ್ನು ಅನುಸರಿಸುತ್ತಿದ್ದಾರೆ' ಎಂದು ಅವರು ಪ್ರತಿಪಾದಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...