ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ : ಕಮಾಂಡರ್ ಸಾವು : ಇಬ್ಬರು ಗಂಭೀರ..!

Source: so news | By Manju Naik | Published on 26th April 2019, 9:15 PM | Coastal News | Don't Miss |

ಕಾರವಾರ : ಉತ್ತರಕನ್ನಡ ಕಾರವಾರ ತಾಲೂಕಿನ ಅರಗಾದಲ್ಲಿರುವ ಭಾರತೀಯ ನೌಕಾ ಸೇನೆಯ ಯುದ್ದ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕಮಾಂಡರ್ ಡಿ.ಎಸ್. ಚೌವ್ಹಾಣ್ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪತಂಜಲಿ ನೌಕಾ ಆಸ್ಪತ್ರೆಗೆ ಸೇರಿಸಲಾಗಿದೆ.ಇಲ್ಲಿನ ಕದಂಬ ನೌಕಾನೆಲೆಯಲ್ಲಿ ವಿಕ್ರಮಾದಿತ್ಯ ಲಂಗರು ಹಾಕುವ ವೇಳೆ ಘಟನೆ ನಡೆದಿದೆ. ಬೆಂಕಿ ನಂದಿಸಲಾಗಿದೆ ಎಂದು ನೌಕಾ ಸೇನೆಯ ಪ್ರಕಟಣೆ ತಿಳಿಸಿದೆ.

INS ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಸಾವನ್ನಪ್ಪಿದ್ದಾರೆ. ನೌಕಾಸೇನೆಯ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹ್ಹಾಣ ಸಾವನ್ನಪ್ಪಿದ ದುರ್ದೈವಿ.
ಉತ್ತರ ಕನ್ನಡ ಜಿಲ್ಲೆಯ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯ ವಿಕ್ರಮಾದಿತ್ಯ ಯುದ್ಧನೌಕೆಯ ಬಾಯ್ಲರ್ ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಈ ವೇಳೆ ಬೆಂಕಿ ನಿಯಂತ್ರಣ ತರುವ ಪ್ರಯತ್ನ ನಡೆದಿದ್ದು, ನೌಕಾನೆಲೆಯ ಹಲವು ಸಿಬ್ಬಂದಿಗೆ ಗಾಯವಾಗಿದೆ.
ಇನ್ನು ಈ ಬೆಂಕಿ ಅವಘಡದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹ್ಹಾಣ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇತರರನ್ನು ಸ್ಥಳೀಯ ನೌಕಾನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಕಾನೆಲೆಯ ಯುದ್ಧನೌಕೆಯಲ್ಲಿ ಹೇಗೆ ಬೆಂಕಿ ಕಾಣಿಸಿಕೊಂಡಿತು ಎಂಬುದರ ಪರಿಶೀಲನೆ ತನಿಖಾ ತಂಡ ರಚಿಸಲಾಗಿದೆ

Read These Next

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸ ಸಿಬ್ಬಂದಿಗೆ ಕೊರೋನಾ: ಕಾವೇರಿಯಲ್ಲಿ ಸಿಎಂ ಕ್ವಾರಂಟೈನ್!

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸ ಸಿಬ್ಬಂದಿಗೆ ಕೊರೋನಾ: ಕಾವೇರಿಯಲ್ಲಿ ಸಿಎಂ ಕ್ವಾರಂಟೈನ್!