ಭಟ್ಕಳ ವಿಧಾನಸಭೆ ಕ್ಷೇತ್ರದಲ್ಲಿ 2.35 ಲಕ್ಷ ಮತದಾರರು

Source: so news | By MV Bhatkal | Published on 16th April 2019, 12:10 AM | Coastal News | Don't Miss |

ಭಟ್ಕಳ: 79-ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ತಯಾರಾಗಿದ್ದು, ಒಟ್ಟು ವಿಧಾನಸಭಾ ಕ್ಷೇತ್ರದಲ್ಲಿ 2,15,440 ಮಂದಿ ಮತದಾರರು ಅಂತಿಮ ಹಂತವಾಗಿ ಸೇರ್ಪಡೆಯಾಗಿದೆ ಎಂದು ಸಹಾಯಕ ಆಯುಕ್ತ, ಚುನಾವಣಾಧಿಕಾರಿ ಸಾಜಿದ್ ಅಹ್ಮದ ಮುಲ್ಲಾ ತಿಳಿಸಿದರು.
ಸಹಾಯಕ ಆಯುಕ್ತರ ಕಛೇರಿಯಲ್ಲಿ ಪತ್ರಕರ್ತರ ಜೊತೆಗೆ ಚುನಾವಣಾ ಪೂರ್ವ ತಯಾರಿ, ಭದ್ರತೆ ಕುರಿತಾಗಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
‘ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಜಾರಿಯಲ್ಲಿರುವ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ಮತದಾನದ ಜಾಗೃತಿ ಬಗ್ಗೆ ಮಾಹಿತಿಯನ್ನು ಮತದಾರರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಕಾರ್ಯಕ್ರಮವೂ ಯಶಸ್ವಿಯಾಗಿದ್ದು ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುವ ಭರವಸೆ ಇದ್ದು, ಮತದಾನದಿಂದ ವಂಚಿತರಾಗದೇ ಎಲ್ಲರು ಮತದಾನ ಪ್ರಕ್ರಿಯೆಯಲ್ಲಿ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗದ ಸೂಚನೆಯ 11 ದಾಖಲೆಗಳೊಂದಿಗೆ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದ ಅವರು ಕ್ಷೇತ್ರವಾರು ಅಂತಿಮ ಹಂತದ ಮತದಾರರ ಪಟ್ಟಿಯಲ್ಲಿ ಒಟ್ಟು 2,15,440 ಮತದಾರರಾಗಿದ್ದು, ಈ ಪೈಕಿ 1,09, 741 ಪುರುಷರು ಹಾಗೂ 1,05,699 ಮಹಿಳಾ ಮತದಾರರಿದ್ದಾರೆ. ಅದೇ ರೀತಿ ಸರ್ವಿಸ್ ಮತದಾರರು(ಸೈನಿಕರು) 86 ಜನರಿದ್ದು ಒಟ್ಟು 248 ಮತಗಟ್ಟೆ ಕೇಂದ್ರದಲ್ಲಿ ಚುನಾವಣೆ ನಡೆಯಲಿದೆ.
ಒಟ್ಟು ಮತಗಟ್ಟೆಯಲ್ಲಿ 71 ಸೂಕ್ಷ್ಮ ಮತಗಟ್ಟೆ ಹಾಗೂ ದುರ್ಬಲ ಮತಗಟ್ಟೆ 23 ಎಂದು ಗುರುತಿಸಲಾಗಿದೆ. ಹಾಗೂ 2 ವಿಶೇಷ ಮತಗಟ್ಟೆಯನ್ನು ಸಖಿ (ಮಹಿಳಾ) ಪೊಲೀಂಗ್ ಸ್ಟೇಶನ ಎಂದು ಗುರುತಿಸಲಾಗಿದ್ದು, ಮತಗಟ್ಟೆಯಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ. 1 ಪಿಡಬ್ಲುಡಿ ಮತಗಟ್ಟೆ ಹಾಗೂ 1 ಮಾದರಿ ಮತಗಟ್ಟೆಯನ್ನು ಆಯ್ಕೆ ಮಾಡಲಾಗಿದ್ದು ಒಟ್ಟು 1096 ಮಂದಿ ಸಿಬ್ಬಂದಿಗಳು ಕ್ಷೇತ್ರವಾರು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು 27 ಮತಗಟ್ಟೆಯಲ್ಲಿ ವೆಬ್ ಕಾಸ್ಟಿಂಗ್ (ಮತಗಟ್ಟೆಯಿಂದ ಚುನಾವಣಾ ಆಯೋಗಕ್ಕೆ ನೇರ ಪ್ರಸಾರ ವಿಕ್ಷಣೆ) ಹಾಗೂ 51 ಮತಗಟ್ಟೆಯಲ್ಲಿ ಮೈಕ್ರೋ ಒಸರವರ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲಾ ಮತಗಟ್ಟೆಗಳ ಪರಿಶೀಲನೆ ಹಾಗೂ ತಯಾರಿ ಕಾರ್ಯಗಳು ಜಾರಿಯಲ್ಲಿದ್ದು, ತಾಲೂಕಿನಲ್ಲಿ ಓರ್ವ ಸಾಮಾನ್ಯ ಚುನಾವಣಾ ವಿಕ್ಷಕರು, ಓರ್ವ ಖರ್ಚುವೆಚ್ಚದ ವೀಕ್ಷಕರು ಹಾಗೂ ಓರ್ವ ಪೊಲೀಸ ವೀಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ 7 ಪ್ಲೈಯಿಂಗ್ಸ ಸ್ಕ್ವಾಡ್ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. 
ಅದೇ ರೀತಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 5 ಪೊಲೀಸ ಚೆಕ್ ಪೋಸ್ಟಗಳಲ್ಲಿ ವಾಹನಗಳ ಮೇಲೆ ಕಣ್ಗಾವಲಿಟ್ಟಿದ್ದು ಪರಿಶೀಲನಾ ಕಾರ್ಯಗಳೂ ನಡೆಯುತ್ತಿವೆ. 25 ಸೆಕ್ಟರ ಅಧಿಕಾರಿಗಳು ನೇಮಕಗೊಂಡಿದ್ದು ಓರ್ವ ಸೆಕ್ಟರ ಅಧಿಕಾರಿಗೆ 10-15 ಮತಗಟ್ಟೆ ವ್ಯಾಪ್ತಿಯ ಬರಲಿದೆ. ಕ್ಷೇತ್ರದಲ್ಲಿ 2 ವಿಡಿಯೋ ಸರವೈವಲೆನ್ಸ ತಂಡ ಕಾರ್ಯನಿರ್ವಹಿಸುತ್ತಿದ್ದು ಹೊನ್ನಾವರಕ್ಕೆ ಒಂದು ತಂಡ ಹಾಗೂ ಭಟ್ಕಳಕ್ಕೆ 1 ತಂಡವಿದ್ದು ಪ್ರಚಾರ ಕಾರ್ಯಕ್ಕೆಂದು ಇನ್ನೊಂದು ತಂಡವೂ ಸೇರ್ಪಡೆಗೊಂಡಿದೆ. ಅದೇ ರೀತಿ ಸಹಾಯಕ ಆಯುಕ್ತರ ಕಛೇರಿಯಲ್ಲಿ ಕಂಟ್ರೋಲ್ ರೂಮನಲ್ಲಿ ಚುನಾವಣಾ ಪ್ರಚಾರದ ವಿಡಿಯೋ ವಿವಿಂಗ್ ತಂಡವಿದೆ. ಮತಗಟ್ಟೆಯಲ್ಲಿ ಮತದಾರರಿಗೆ ಕಣ್ಣಿನ ದೋಷವಿದ್ದರೆ ಮತದಾನಕ್ಕೆ ಭೂತಗನ್ನಡಿಯ ವ್ಯವಸ್ಥೆ, ಅಂಗವಿಕಲರಿಗೆ ವೀಲ್ ಚೇರ್ ಹಾಗೂ ದೃಷಿ ಹೀನರಿಗೆ ಬ್ರೈಲ್ ಲಿಪಿ ಮತಯಂತ್ರ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಮತಗಟ್ಟೆಯಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 
ತಾಲೂಕಿನ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷದ ಮುಖಂಡರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿಲ್ಲವಾಗಿದ್ದು, ಪರವಾನಿಗೆ ಪಡೆದುಕೊಂಡು ಸಾಮಾನ್ಯ ಕಾರ್ಯಕ್ರಮ ನಡೆಸುತ್ತಿದ್ದಾರೆ. ಏಪ್ರಿಲ್ 16ಕ್ಕೆ ತರಬೇತಿ ಕಾರ್ಯಕ್ರಮವೂ ಆನಂದ ಆಶ್ರಮ ಕಾನ್ವೆಂಟನಲ್ಲಿ ನಡೆಯಲಿದ್ದು, ಜಿಲ್ಲೆಯ ವಿವಿಧ ಕ್ಷೇತ್ರದಿಂದ ಅಧಿಕಾರಿಗಳು ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ. 

 

Read These Next

ಮುಂಡಗೋಡ: ಜಾನಪದ ರಾಜ್ಯ ಪ್ರಶಸ್ತಿ ವಿಜೇತ ಸಹದೇವಪ್ಪ ನಡಿಗೇರ ಗೆ ಗಂಗಾಮತ ಸಮಾಜದಿಂದ ಸನ್ಮಾನ

ಮುಂಡಗೋಡ ನಗರ ಗಂಗಾಮತಸ್ಥ ಕುಲಬಾಂದವರು  ಭಾನುವಾರ ರಾಜ್ಯಮಟ್ಟದ ಜಾನಪದ ಅಕಾಡಮಿ ಪ್ರಶಸ್ತಿ ಗೆ ಭಾಜನರಾದ ಇಂದೂರ ಗ್ರಾಮದ  ಸಹದೇವಪ್ಪ ...

ದೇಶದ ರಕ್ಷಣೆ, ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ : ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ್

ಮಂಗಳೂರು : ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ದೇಶದ ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ...

ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಶಾಸಕ ಯು ಟಿ ಖಾದರ್ ಆರೋಪ.

ಮಂಗಳೂರು : ಸಿ.ಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವಾ. ಜನ ಸಾಮಾನ್ಯರ ಮರಳು ಗಾಡಿಯನ್ನ ವಶ ಪಡಿಸಿಕೊಳ್ಳತ್ತಾರೆ. ಆದರೆ ...

ದೇಶದ ರಕ್ಷಣೆ, ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ : ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ್

ಮಂಗಳೂರು : ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ದೇಶದ ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ...

ಸಿಎಂ ತವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಶಾಸಕ ಯು ಟಿ ಖಾದರ್ ಆರೋಪ.

ಮಂಗಳೂರು : ಸಿ.ಎಂ ತವರು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಇಲ್ಲವಾ. ಜನ ಸಾಮಾನ್ಯರ ಮರಳು ಗಾಡಿಯನ್ನ ವಶ ಪಡಿಸಿಕೊಳ್ಳತ್ತಾರೆ. ಆದರೆ ...

ರಾಜ್ಯದಲ್ಲಿ ಟ್ರ್ಯಾಕ್ಟರ್‌ ಪರೇಡ್‌: ಬೆಳಗಾವಿ ರೈತರಿಗೆ ಆರ್‌ಟಿಒ, ಪೊಲೀಸರಿಂದ ವಾಹನ ಜಪ್ತಿ ಬೆದರಿಕೆ

ಬೆಳಗಾವಿ : ಕೃಷಿ ಕಾಯ್ದೆ ವಿರೋಧಿಸಿ ಜ. 26ರಂದು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್‌ ಪರೇಡ್‌ ಬೆಂಬಲಿಸಿ ರಾಜ್ಯದಲ್ಲೂ ...