ಎತ್ತುಗಳ ಕಾದಾಟದಲ್ಲಿ ಸಿಲುಕಿದ ಸ್ಕೂಟರ್ ಸವಾರ ಗಂಭೀರ

Source: sonews | By Staff Correspondent | Published on 26th December 2018, 5:37 PM | Coastal News | Don't Miss |

ಭಟ್ಕಳ: ಎರಡು ಎತ್ತುಗಳ ನಡುವೆ ನಡೆದ ಕಾದಾಟದಲ್ಲಿ ಸಿಲುಕಿದ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆ ಸೇರಿದ ಘಟನೆ ರಾ.ಹೆ.66ರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಎತ್ತುಗಳ ಕಾದಾಟದಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಸೈಯ್ಯದ್ ಅಬ್ದುಲ್ ಕಾದಿರ್(46) ಎಂದು ಗುರುತಿಸಲಾಗಿದೆ. 

ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗಾಗಿ ಮದೀನಾ ಕಾಲೋನಿಯಿಂದ ಬಸ್ ನಿಲ್ದಾಣ ಬಳಿಯ ನೂರ್ ಮಸೀದಿಗೆ ತೆರಳುತ್ತಿದ್ದಾಗ ಶಿಫಾ ಕ್ರಾಸ್ ಬಳಿಯ ರಾ.ಹೆ.66ರಲ್ಲಿ ಎರಡು ಎತ್ತುಗಳು  ಪರಸ್ಪರ ಕಾದಾಟ ನಡೆಸುತ್ತ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದ್ದು ಎತ್ತುಗಳ ರಭಸದ ಬಡಿತಕ್ಕೆ ಸ್ಕೂಟರ್ ನಲ್ಲಿ ಚಾಲಕ ಸೈಯ್ಯದ್ ಅಬ್ದುಲ್ ಕಾದಿರ್ ಎಂಬುವವರು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದು ಇದರಿಂದಾಗಿ ಅವರ ಕೈ ಹಾಗೂ ಕಾಲು ಮುರಿದಿದೆ. ಅವರ ಹೆಗಲ ಮೇಲೂ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. 
ಜನರು ಸಾಕು ಪ್ರಾಣಿಗಳನ್ನು ಬಿಡಾಡಿ ದನಗಳನ್ನಾಗಿ ಮಾಡಿಕೊಂಡಿದ್ದು ಅವುಗಳ ಸರಿಯಾದ ನಿರ್ವಾಹಣೆ ಮಾಡದೆ ರಸ್ತೆ ಮೇಲೆ ಬಿಡುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೆ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ತೊಂದರೆಯುಂಟಾಗುತ್ತಿದೆ. ಪುರಸಭೆಯವರು ಈ ಕುರಿತಂತೆ ಯಾವುದೇ ಕ್ರಮ ಜರಗಿಸದೆ ಇರುವುದು ಆಶ್ಚರ್ಯ ತರುವಂತೆ ಮಾಡಿದೆ ಎಂದು ಮದೀನ ಕಾಲೋನಿ ಅಬ್ದುಲ್ ಕಾದಿರ್ ಎಂಬುವವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎತ್ತುಗಳ ಹೊಡೆದಾಟಕ್ಕೆ ಸಿಲುಕಿ ಕೈಕಾಲು ಮುರಿದುಕೊಳ್ಳುವವರು ಯಾರ ಬಳಿ ದೂರಬೇಕು ಎಂದೂ ಅವರು ಪ್ರಶ್ನಿಸಿದ್ದಾರೆ. 

Read These Next

ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ...

ರಸ್ತೆಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು

ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...