ಟಿವಿ ವಾಹಿನಿಗಳ ಕಾರ್ಯಕ್ರಮಗಳ ಕುರಿತ ದೂರಿಗಾಗಿ ಸಹಾಯವಾಣಿ ಸ್ಥಾಪನೆ.

Source: sonews | By Staff Correspondent | Published on 12th December 2019, 7:30 PM | State News |

ಕೋಲಾರ: ವಾರ್ತಾ ಮತ್ತು ಸಾರಗವಜನಿಕ ಸಂಪರ್ಕ ಇಲಾಖೆಯು ಕೇಬಲ್ ಟಿವಿ ಮತ್ತು ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ದೂರುಗಳನ್ನು ಸಲ್ಲಿಸಲು 24*7 ಸಾರ್ವಜನಿಕ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. 

ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮ ಸದಭಿರುಚಿ ಅಥವಾ ಸಭ್ಯತೆಯ ವಿರುದ್ಧ, ಮಿತ್ರ ರಾಷ್ಟ್ರಗಳ ಟೀಕೆ, ಧರ್ಮ, ಸಮುದಾಯ ಅಥವಾ ಧಾರ್ಮಿಕ ಸಮೂಹಗಳನ್ನು ನಿಂದಿಸುವ ಮಾತುಗಳು, ದೃಶ್ಯಗಳು ಅಥವಾ ಕೋಮುವಾದಿ ಭಾವನೆಗಳನ್ನು ಉತ್ತೇಜಿಸುವುದು.  ಯಾವುದೇ ಅಸಹ್ಯಕರ, ಮಾನನಷ್ಟ ಮಾಡುವಂತ ಉದ್ದೇಶಪೂರ್ವಕ, ಸುಳ್ಳು, ಸೂಚನಾತ್ಮಕ ವ್ಯಂಗ್ಯೋಕ್ತಿ, ಅರ್ಧ ಸತ್ಯ, ಹಿಂಸೆಯನ್ನು ಉತ್ತೇಜಿಸುವ, ಪ್ರಚೋದಿಸುವ, ಕಾನೂನು ಮತ್ತು ಶಿಸ್ತುಪಾಲನೆ ಕೆಣಕುವುದು, ರಾಷ್ಟ್ರ ವಿರೋಧಿ ಭಾವನೆಯನ್ನು ಉತ್ತೇಜಿಸುವುದು ಅಥವಾ ನ್ಯಾಯಾಲಯ ನಿಂದನೆಗೆ ಕಾರಣವಾಗುವಂತ ಅಂಶಗಳು ಕಂಡುಬಂದರೆ ಯಾವುದೇ ನಾಗರೀಕರು ಅದರ ವಿರುದ್ದ ಈ ಸಹಾಯವಾಣಿಗೆ ದೂರು ಸಲ್ಲಿಸಬಹುದಾಗಿದೆ.

ಕಾಯ್ದೆಯ ಪರಿಚ್ಛೇದ 7 ರಂತೆ ಜಾಹೀರಾತು ಸಂಹಿತೆಗೆ ಸಂಬಂಧಿಸಿದಂತೆ ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಜಾಹೀರಾತುಗಳು ದೇಶದ ಕಾನೂನುಗಳಿಗೆ ಪೂರಕವಾಗಿರಬೇಕು ಮತ್ತು ಚಂದಾದಾರರ ನೈತಿಕತೆ ಮತ್ತು ಸಭ್ಯತೆ, ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡಬಾರದು. ಯಾವುದೇ ಮತ, ಜಾತಿ, ವರ್ಣ, ಕೋಮು ಮತ್ತು ರಾಷ್ಟ್ರೀಯತೆಯನ್ನು ಅವಹೇಳನ ಮಾಡಬಾರದು.  ಭಾರತ ಸಂವಿಧಾನದ ಯಾವುದೇ ಉಪಬಂಧದ ವಿರುದ್ಧ ಇರಬಾರದು. ಜನರನ್ನು ಅಪರಾಧಕ್ಕೆ ಪ್ರಚೋದಿಸುವುದಾಗಲಿ, ಅಶಾಂತಿ ಅಥವಾ ಹಿಂಸೆಗೆ ಯಾವುದೇ ರೀತಿಯ ಅಶ್ಲೀಲತೆಗೆ ಕಾರಣವಾಗುವುದಕ್ಕೆ ಅವಕಾಶ ಉಂಟಾಗಬಾರದು. ಅಪರಾಧೀಕರಣ ಬಯಸುವಂತೆ ಬಿಂಬಿಸಿಬಾರದು ಹಾಗೂ ರಾಷ್ಟ್ರೀಯ ಲಾಂಛನ, ಸಂವಿಧಾನದ ಯಾವುದೇ ಭಾಗ ಅಥವಾ ವ್ಯಕ್ತಿ, ರಾಷ್ಟ್ರೀಯ ನಾಯಕರ ವ್ಯಕ್ತಿತ್ವ ಅಥವಾ ರಾಷ್ಟ್ರದ ಗಣ್ಯರ ಶೋಷಣೆಯಾಗಬಾರದು ಇವುಗಳನ್ನು ಉಲ್ಲಂಘಿಸಿದ್ದು ಕಂಡು ಬಂದಲ್ಲಿ  ದೂರುಗಳನ್ನು ಸಲ್ಲಿಸಬಹುದಾಗಿದ್ದು, ಸದರಿ ದೂರನ್ನು ಸಂಬಂಧಿಸಿದ ಜಿಲ್ಲಾ ನಿರ್ವಹಣಾ ಸಮಿತಿಗೆ/ ರಾಜ್ಯ ನಿರ್ವಹಣಾ ಸಮಿತಿಗೆ ಸೂಕ್ತ ಕ್ರಮಕ್ಕಾಗಿ ವರ್ಗಾಯಿಸಲಾಗುದು. 

ಸಾರ್ವಜನಿಕರು ಹೆಚ್ಚು ಜಾಗೃತರಾಗಿ ನಿರ್ಭೀತಿಯಿಂದ ಈ ಮೇಲ್ಕಂಡ ಯಾವುದೇ ಆಕ್ಷೇಪಗಳನ್ನು  ಸಹಾಯವಾಣಿ ದೂರವಾಣಿ ಸಂಖ್ಯೆ: 080-22028013, 9480841212 ಅಥವಾ complaintsontelevision@gmail.com  ಗೆ ಸಲ್ಲಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ  ಪಲ್ಲವಿ ಹೊನ್ನಾಪುರ ಅವರು ಕೋರಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...