ಈ.ಡಿ. ಯಿಂದ ಪ.ಬಂ, ಸಚಿವ ಮಲಿಕ್‌ ಬಂಧನ; ಪಡಿತರ ವಿತರಣೆ ಹಗರಣ

Source: Vb | By I.G. Bhatkali | Published on 28th October 2023, 1:52 PM | National News |

ಕೋಲ್ಕತಾ: ಜಾರಿ ನಿರ್ದೇಶನಾಲಯ (ಈ.ಡಿ.)ವು ಪಶ್ಚಿಮ ಬಂಗಾಳದಲ್ಲಿಯ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ಯದ ಸಚಿವ ಜ್ಯೋತಿಪ್ರಿಯ ಮಲಿಕ್ ಅವರನ್ನು ಶುಕ್ರವಾರ ಬಂಧಿಸಿದೆ. ಮಲಿಕ್ ಅವರನ್ನು 18 ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ.

ಬಳಿಕ ಇಂದು ನಸುಕಿನಲ್ಲಿ ಅವರನ್ನು ಬಂಧಿಸಲಾಗಿದೆ. ಪ್ರಕರಣವು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಪಡಿತರ ವಿತರಣೆಯಲ್ಲಿ ನಡೆದಿತ್ತೆನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು,ಆಗ ಮಲಿಕ್ ಪ.ಬಂಗಾಳದ ಆಹಾರ ಸಚಿವರಾಗಿದ್ದರು. ಪ್ರಸ್ತುತ ಅವರು ಅರಣ್ಯ ಖಾತೆಯನ್ನು ಹೊಂದಿದ್ದಾರೆ.

ಅ.14ರಂದು ಬಂಧಿಸಲ್ಪಟ್ಟಿರುವ ಉದ್ಯಮಿ ಬಕೀಬುರ್ ರಹ್ಮಾನ್ ಜೊತೆ ಮಲಿಕ್ ಸಂಪರ್ಕಗಳ ಕುರಿತು ಈ.ಡಿ. ತನಿಖೆ ನಡೆಸುತ್ತಿದೆ. ರಹ್ಮಾನ್ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಆರೋಪಿಯಾಗಿದ್ದಾರೆ. ಈ.ಡಿ.ಗುರುವಾರ ಮಲಿಕ್ ಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಎಂಟು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿತ್ತು. ಉತ್ತರ 24 ಪರಗಣಗಳ ಜಿಲ್ಲೆಯಲ್ಲಿನ ಮಲಿಕ್‌ ಅವರ ಆಪ್ತ ಸಹಾಯಕ ಅಮಿತ್ ಡೇ ನಿವಾಸವನ್ನೂ ಅದು ಶೋಧಿಸಿತ್ತು.

'ನಾನು ಘೋರ ಪಿತೂರಿಯ ಬಲಿಪಶುವಾಗಿದ್ದೇನೆ' ಎಂದು ಮಲಿಕ್ ತನ್ನನ್ನು ಈ.ಡಿ.ವಶಕ್ಕೆ ತೆಗೆದುಕೊಂಡ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

'ಮಲಿಕ್ ಆರೋಗ್ಯ ಉತ್ತಮವಾಗಿಲ್ಲ ಮತ್ತು ಅವರು ಮಧುಮೇಹಿಯಾಗಿದ್ದಾರೆ. ಅವರು ಸತ್ತರೆ ನಾನು ಬಿಜೆಪಿ ಮತ್ತು ಈ.ಡಿ.ವಿರುದ್ಧ ಎಫ್‌ಐಆರ್ ದಾಖಲಿಸುತ್ತೇನೆ' ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದರು. ಕೇಂದ್ರೀಯ ಏಜೆನ್ಸಿಗಳು ಪ್ರತಿಯೊಬ್ಬ ಸಚಿವರ ಮನೆಯ ಮೇಲೂ ದಾಳಿ ನಡೆಸುತ್ತಿದ್ದರೆ ಸರಕಾರವನ್ನು ಯಾರು ನಡೆಸುತ್ತಾರೆ ಎಂದು ಅವರು ಪ್ರಶ್ನಿಸಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...