ಭಟ್ಕಳ:ಹುಚ್ಚು ನಾಯಿ ದಾಳಿ ಯಿಂದ ವೃದ್ದೆ ಸಾವು:ಇಬ್ಬರು ಗಂಭೀರ!

Source: so news | By MV Bhatkal | Published on 6th June 2019, 1:34 AM | Coastal News | Don't Miss |

 


ಭಟ್ಕಳ:ಹುಚ್ಚುನಾಯಿ ಕಡಿದು ವೃದ್ಧೆ ಸಾವು ಕಂಡು ಮೂರು ಜನರು ಗಂಭೀರ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.
ಮುಂಡಳ್ಳಿ ಗ್ರಾಮದ ಜೋಗಿಮನೆ ನಿವಾಸಿ ಜಟ್ಟಮ್ಮ ಕುಪ್ಪಯ್ಯ ದೇವಡಿಗ್(ಪ್ರಾಯ90) ಹುಚ್ಚುನಾಯಿ ಕಡಿತದಿಂದ ಮೃತಳಾದ ವೃದ್ಧೆಯಾಗಿದ್ದು ದಾಳಿ ಪರಿಣಾಮ ವೃದ್ಧೆಯ ಮುಖ ಹಾಗೂ ಮೂಗು ಮಾಂಸ ಹೊರಗೆ ಬಂದು ಗುರುತು ಪತ್ತೆಯಾಗದಂತೆ ಸಿತ್ಥಿಯಲ್ಲಿದ್ದು,ಬುಧವಾರ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಆಕೆಯ ಮಗ ಶ್ರೀನಿವಾಸ್ ಕುಪ್ಪಯ್ಯ(60 ), ಪಕ್ಕದ ಮನೆಯ ರಿತೀಶ್ (18), ಜ್ಯೋತಿ ಎಂಬುವವರಿಗೆ ಕಡಿದಿದ್ದು ಇವರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಇನ್ನು ಜ್ಯೋತಿ ಎನ್ನುವ ಯುವತಿಗೆ ಚಿಕ್ಕಪುಟ್ಟ ಗಾಯವಾಗಿದ್ದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿಸ್ಸೆ ನೀಡಲಾಗಿದೆ.
ಈ ಹಿಂದೆ ಮುಂಡಳ್ಳಿಯಲ್ಲಿ ಮಂಗನ ಕಾಟದಿಂದ ಮುಕ್ತಿ ಸಿಕ್ಕಿದೆಂತು ನಿಟ್ಟುಸಿರು ಬಿಡುವ ಹೊತ್ತಿನಲ್ಲಿಯೇ ಈಗ ಹುಚ್ಚು ನಾಯಿ ಕಡಿತದ ಘಟನೆ ನಡೆದಿರುವುದು ಗ್ರಾಮಸ್ಥರು ಚಿಕ್ಕಮಕ್ಕಳು ಓಡಾಡಲು ಭಯಪಡುವಂತಾಗಿದೆ. 
ಈ ಬಗ್ಗೆ ಸುದ್ದಿ ತಿಳಿದು ತಹಶಿಲ್ದಾರರ ಎನ್.ಬಿ.ಪಾಟೀಲ್,ತಾಲ್ಲೂಕು ವೈದ್ಯ ಅಧಿಕಾರಿಗಳು,ಪಶು ವೈದ್ಯರು,ಕಂದಾಯ ನಿರೀಕ್ಷರು,ಮುಂಡಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಗಳು,ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು
ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.ತಾಲೂಕಿನಲ್ಲಿ ಈ ರೀತಿಯ ಘಟನೆ ಪದೇ ಪದೇ ಮರುಕಳಿಸುತ್ತಿದ್ದು,ಇಲಾಖೆ 
ಇನ್ನಷ್ಟು ಗಮನ ಹರಿಸಬೇಕಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...