ಮೀನುಗಾರ ರಿಂದ ಪ್ರತಿಭಟನೆ:ಮುರ್ಡೆಶ್ವರ ಪೋಲಿಸ್ ಠಾಣೆಗೆ ಮುತ್ತಿಗೆ

Source: so news | Published on 20th August 2019, 12:49 PM | Coastal News | Don't Miss |


ಭಟ್ಕಳ: ದೋಣಿ ಇಡುವ ಸ್ಥಳದಲ್ಲಿ ನಿರ್ವಿುಸುತ್ತಿದ್ದ ಗೇಟಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಪಿಡಿಒ ಕ್ರಮ ಖಂಡಿಸಿ ನೂರಾರು ಮೀನುಗಾರರು ಮುರ್ಡೆಶ್ವರ ಕಡಲ ತೀರದಲ್ಲಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ತೀರದಲ್ಲಿ ದೋಣಿಯ ಮೀನುಗಾರರಿಗಾಗಿ ದೋಣಿ ಇಡಲು ಕಾಂಕ್ರೀಟ್​ನಿಂದ ಇಳಿದಾಣ ನಿರ್ವಿುಸಲಾಗಿತ್ತು. ದೋಣಿ ಇಡುವ ಸ್ಥಳದಲ್ಲಿ ಖಾಸಗಿ ವಾಹನಗಳು ಸಂಚಾರ, ರ್ಪಾಂಗ್ ಮಾಡುತ್ತಿದ್ದವು. ಇದರಿಂದ ದೋಣಿಗಳಿಗೆ ಹಾನಿ ಆಗುತ್ತಿದೆ ಎಂದು ಮೀನುಗಾರರು ಮೈದಾನಕ್ಕೆ ತೆರಳುವ ಸ್ಥಳಕ್ಕೆ ಗೇಟ್ ನಿರ್ವಿುಸಲು ಉದ್ದೇಶಿಸಿದ್ದರು. ಗೇಟ್ ನಿರ್ವಣದಿಂದ ಪ್ರವಾಸಿಗರಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಿಇಒ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.

ಆ. 15ರಂದು ಭಟ್ಕಳ ಇಒ ಲಕ್ಷ್ಮೀ ನಾರಾಯಣ ಸ್ವಾಮಿ ಮಾವಳ್ಳಿ- 2 ಪಂಚಾಯಿತಿ ಪಿಡಿಒ ಅವರಿಗೆ ಅದನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಅದರಂತೆ ಪಂಚಾಯಿತಿ ಸಿಬ್ಬಂದಿ ತೆರಳಿ ಗೇಟ್ ನಿರ್ವಣದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದರು.
ಸ್ಥಳೀಯ ಮೀನುಗಾರರು ಸೋಮವಾರ ಮತ್ತೆ ಕಾಮಗಾರಿ ಮುಂದುವರಿಸಿದ್ದು, ಕಾಮಗಾರಿ ನಿಲ್ಲಿಸಿ, ಸಂಪೂರ್ಣ ಮಾಹಿತಿ ನೀಡುವಂತೆ ಮತ್ತೆ ಭಟ್ಕಳದ ಇಒ ಅವರು ಪಿಡಿಒ ಅವರಿಗೆ ಆದೇಶಿಸಿದ್ದರು. ಮಾವಳ್ಳಿ- 2ರ ಸಿಬ್ಬಂದಿ ಅದನ್ನು ತೆರವುಗೊಳಿಸುತ್ತಿದ್ದಂತೆ ಮುರ್ಡೆಶ್ವರ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣಾ ಹರಿಕಾಂತ, ರಾಜೇಶ ಹರಿಕಾಂತ, ಪರಮೇಶ್ವರ ಮಾಸ್ತಪ್ಪ ಮೊಗೇರ ಸೇರಿ ನೂರಾರು ಸಂಖ್ಯೆಯ ಮೀನುಗಾರರು ಪ್ರತಿಭಟಿಸಿದರು.

ಠಾಣೆಗೆ ದೂರು: ರೊಚ್ಚಿಗೆದ್ದ ಮೀನುಗಾರರು ಮುರ್ಡೆಶ್ವರ ಗ್ರಾಮೀಣ ಠಾಣೆಗೆ ತೆರಳಿ ಸಮಸ್ಯೆ ಕುರಿತು ದೂರು ನೀಡಿದ್ದಾರೆ. ನಾವು ಗೇಟ್ ನಿರ್ವಿುಸಲು ತಂದಿದ್ದ ಕಲ್ಲು, ರೇತಿ ಕಬ್ಬಿಣದ ರಾಡ್​ಗಳನ್ನು ಪಂಚಾಯಿತಿ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದು, ಸೂಕ್ತ ರಕ್ಷಣೆ ನೀಡಿ, ತೊಂದರೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...