ಭಟ್ಕಳದಲ್ಲಿ ಇವಿಎಂ/ವಿವಿಪ್ಯಾಡ್ನಲ್ಲಿ ಮತದಾನದ ವೀಕ್ಷಣೆ. ಚುನಾವಣೆಗೂ ಮುನ್ನ ಮತದಾನದ ವಿಧಾನ ತಿಳಿದುಕೊಳ್ಳುವಂತೆ ಜನರಲ್ಲಿ ಮನವಿ

Source: SO News | By Laxmi Tanaya | Published on 7th February 2023, 11:35 PM | Coastal News | Don't Miss |

ಭಟ್ಕಳ:  EVM/VVpad ನಲ್ಲಿ ಮತ ಚಲಾಯಿಸುವುದು ಹೇಗೆ, ಅದೇ ಪಕ್ಷಕ್ಕೆ ವೋಟ್ ಕೊಟ್ಟಿದ್ದಾರೋ ಇಲ್ಲವೋ, ವಿವಿಪ್ಯಾಡ್ ನಲ್ಲಿ ಪರಿಶೀಲಿಸುವುದು ಹೇಗೆ, ಈ ಎಲ್ಲಾ ಪ್ರಾತ್ಯಕ್ಷಿಕೆಯನ್ನು ಭಟ್ಕಳದಲ್ಲಿ ಸರಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಡೆಮೊ ನಡೆಸಲಾಯಿತು. 

ಇವಿಎಂ/ವಿವಿಪ್ಯಾಡ್ ಉದ್ಘಾಟಿಸಿ ಮಾತನಾಡಿದ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ, ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಾರ್ವಜನಿಕರಿಗೆ ಮುಂಗಡ ಮಾಹಿತಿ ನೀಡುವ ಉದ್ದೇಶದಿಂದ ಡೆಮೊ ನಡೆಸಲಾಗುತ್ತಿದೆ. ಯಾವುದೇ ವ್ಯಕ್ತಿ ತಾಲೂಕಾ ಸೌಧಕ್ಕೆ ಆಗಮಿಸಿ ಮತದಾನ ಅಭ್ಯಾಸ ಮಾಡಬಹುದಾಗಿದ್ದು, ಮನಸ್ಸಿನಲ್ಲಿ ಏನಾದರೂ ಪ್ರಶ್ನೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಕೇಳಿ ಮಾಹಿತಿ ತಿಳಿದುಕೊಳ್ಳಬಹುದು ಎಂದರು.

ಮಂಗಳವಾರ ತಾಲೂಕಾ ಸೌಧದಲ್ಲಿ ನಡೆದ ವೋಟಿಂಗ್ ಡೆಮೊ ಕಾರ್ಯಕ್ರಮದಲ್ಲಿ ಹೊಸ ಮತದಾರರು ಹಾಗೂ ಹಿರಿಯ ಮತದಾರರಿಗೆ ಇವಿಎಂ ಯಂತ್ರದಲ್ಲಿ ಮತದಾನ ಅಭ್ಯಾಸ ಮಾಡಿ ಅಗತ್ಯ ಮಾಹಿತಿ ನೀಡಲಾಯಿತು. ಅದೇ ರೀತಿ ಭಟ್ಕಳ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ಜನರಿಗೆ ಮಾಹಿತಿ ಮತ್ತು ಡೆಮೊ ನೀಡುವಂತೆ ಸೂಚಿಸಿ, ಮೊಬೈಲ್ ವ್ಯಾನ್‌ಗಳಿಗೆ ಚಾಲನೆ ನೀಡಲಾಯಿತು.

ಭಟ್ಕಳದ ಜನತೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಹಾಯಕ ಆಯುಕ್ತರು ವಿನಂತಿಸಿದ್ದು, ಪ್ರತಿ ಬೂತ್‌ಗೆ ಒಂದು ಅಥವಾ ಎರಡು ದಿನಗಳನ್ನು ನಿಗದಿಪಡಿಸಲಾಗಿದ್ದು, ಮೊಬೈಲ್ ವಾಹನಗಳು ಆಯಾ ಮತಗಟ್ಟೆಗಳಿಗೆ ಆಗಮಿಸಿ ಇವಿಎಂಗಳಲ್ಲಿ ಮತ ಚಲಾಯಿಸಲು ಅನುವು ಮಾಡಿಕೊಡುತ್ತವೆ ಹೇಗೆ ಎಂದು ತಿಳಿಸುವರು. ಜನರು ಮತದಾನ ಪ್ರಕ್ರಿಯೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ, ಇವಿಎಂ ಯಂತ್ರದಲ್ಲಿ ಮತದಾನ ಮಾಡುವ ಮೂಲಕ ಮತದಾನದ ಪ್ರಕ್ರಿಯೆಯನ್ನು ಸ್ವತಃ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮತಗಟ್ಟೆಗೆ ಆಗಮಿಸುವ ಅಧಿಕಾರಿಯಿಂದಲೂ ಮತದಾರರು ಅಗತ್ಯ ಮಾಹಿತಿ ಪಡೆಯಬಹುದು.

ಇವಿಎಂ/ವಿವಿಪ್ಯಾಡ್ ಉದ್ಘಾಟನೆ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಅವರೊಂದಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕನಮನೆ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಮತಗಟ್ಟೆ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...