ಹೊಸದಿಲ್ಲಿ: ಎಂ.ಜೆ. ಅಕ್ಟರ್‌ ಮಾನನಷ್ಟ ಮೊಕದ್ದಮೆ ಪ್ರಕರಣ ಪತ್ರಕರ್ತೆ ಪ್ರಿಯಾ ರಮಣಿ ದೋಷಮುಕ್ತಿ

Source: VB | By S O News | Published on 18th February 2021, 5:33 PM | National News |

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಟರ್‌ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಅವರನ್ನು ದಿಲ್ಲಿ ನ್ಯಾಯಾಲಯ ಬುಧವಾರ ದೋಷಮುಕ್ತಗೊಳಿಸಿದೆ. 2018ರಲ್ಲಿ ನಡೆದ 'ಮಿ ಟೂ' ಟ್ವಿಟರ್  ಅಭಿಯಾನದಲ್ಲಿ ಪ್ರಿಯಾ ರಮಣಿ ಅವರು, ಎಂ.ಜೆ ಅಕ್ಟರ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದರು.

ಇದರ ವಿರುದ್ದ ಎಂ.ಜೆ. ಅಕ್ಟರ್‌ ಅವರು 2018ರ ಅಕ್ಟೋಬರ್ 15ರಂದು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ದಿಲ್ಲಿಯ ಹೆಚ್ಚುವ ಮೆಟ್ರೋಪಾಲಿಟನ್ ಮ್ಯಾಜಿನೇಟ್ ರವೀಂದ್ರ ಕುಮಾರ್ ಅವರು ಫೆ.1ರಂದು   ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಫೆ.17ಕ್ಕೆ ತೀರ್ಪನ್ನು ಕಾದಿರಿಸಿದ್ದರು.

ಇಂದು ತೀರ್ಪು ಪ್ರಕಟಿಸಿದ ರವೀಂದ್ರ ಕುಮಾರ್, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಆರೋಪಿ ಪ್ರಿಯಾ ರಮಣಿ ಅವರನ್ನು ದೋಷಮುಕ್ತಗೊಳಿಸಿದರು." ಲೈಂಗಿಕ ಕಿರುಕುಳದಿಂದ ಸಂತ್ರಸ್ತರ ಮೇಲಾಗುವ ಪರಿಣಾಮವನ್ನು ಸಮಾಜವು ಅರಿತುಕೊಳ್ಳಬೇಕು.

ಅನ್ಯಾಯಕ್ಕೊಳಗಾಗಿ ದಶಕಗಳಾದ ಬಳಿಕವೂ ಮಹಿಳೆಗೆ ತನ್ನ ನೋವನ್ನು ಹೇಳುವ ಹಕ್ಕಿದೆ'' ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಕೆಲಸದ ಸ್ಥಳಗಳಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳವನ್ನು ವಿರೋಧಿಸುವ ಹಿತದೃಷ್ಟಿಯಿಂದ ಪ್ರಿಯಾ ರಮಣಿ ಅವರು ಈ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆಂದು ನ್ಯಾಯಾಲಯ ಅಭಿಪ್ರಾಯಿಸಿತು.

ಉನ್ನತ ಸಾಮಾಜಿಕ ಸ್ಥಾನಮಾನವನ್ನು ಹೊಂದಿರುವ ವ್ಯಕ್ತಿಯೂ ಲೈಂಗಿಕ ಶೋಷಕನಾಗಿರುವ ಸಾಧ್ಯತೆಯಿರುತ್ತದೆ.ಮಹಿಳೆಯ ಘನತೆಯ ಬೆಲೆತೆತ್ತು ವ್ಯಕ್ತಿಯೊಬ್ಬನ ಪ್ರತಿಷ್ಠೆಯ ಹಕ್ಕನ್ನು ಸಂರಕ್ಷಿಸಲು ಸಾಧ್ಯವಿಲ್ಲವೆಂದು ನ್ಯಾಯಾಧೀಶರು ತೀರ್ಪಿನಲ್ಲಿ ಅಭಿಪ್ರಾಯಿಸಿದರು.

2017ರಲ್ಲಿ ಪ್ರಿಯಾ ರಮಣಿ ಅವರು ವೋಗ್ ಆಂಗ್ಲ ನಿಯತಕಾಲಿಕಕ್ಕೆ ಬರೆದ ಲೇಖನವೊಂದರಲ್ಲಿ, ಪತ್ರಿಕೆಯೊಂದರಲ್ಲಿ ಉದ್ಯೋಗಕ್ಕಾಗಿ ಸಂದರ್ಶನದ ಸಂದರ್ಭದಲ್ಲಿ ತಾನು ಪತ್ರಿಕಾಸಂಸ್ಥೆಯ ಮುಖ್ಯಸ್ಥನಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ ಎಂಬುದಾಗಿ ಹೇಳಿದ್ದರು.

ಒಂದು ವರ್ಷದ ಆನಂತರ ಟ್ವಿಟರ್‌ನಲ್ಲಿ ನಡೆದ ಮಿ ಟೂ ಆಂದೋಲನದಲ್ಲಿ ಪ್ರಿಯಾ ಅವರು, ತನಗೆ ಕಿರುಕುಳ ನೀಡಿದ್ದ ವ್ಯಕ್ತಿ ಎಂ.ಜೆ.ಅಕ್ಟರ್‌ ಎಂಬುದಾಗಿ ಬಹಿರಂಗಪಡಿಸಿದ್ದರು. 'ಮಿ ಟೂ' ಆಂದೋಲನದಲ್ಲಿ ಪಾಲ್ಗೊಂಡ ಇತರ ಕೆಲವು ಮಹಿಳೆಯರು ಕೂಡಾ ಎಂ.ಜೆ. ಅಕ್ಟರ್‌ ವಿರುದ್ಧ ಲೈಂಗಿಕ ದುರ್ನಡತೆಯ ಆರೋಪ ಹೊರಿಸಿದ್ದರು.

ಪ್ರಿಯಾ ರಮಣಿ ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಬಳಿಕ ಎಂ.ಜೆ. ಅಕ್ಟರ್‌ ಅವರು ಅ.17ರಂದು ತನ್ನ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ತನ್ನ ವಿರುದ್ಧ ಹೊರಿಸಲಾದ ಆರೋಪಗಳನ್ನು ಅಲ್ಲಗಳೆದಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...