ಭಟ್ಕಳದಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ಸರಕಾರಿ ನೌಕರರ

Source: sonews | By MV Bhatkal | Published on 28th October 2021, 8:56 PM | Coastal News | Don't Miss |

ಭಟ್ಕಳ :ಪರಿಶಿಷ್ಟ ಜಾತಿ ಬುಡಕಟ್ಟು ಜನಾಂಗ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯ ದುರುಪಯೋಗವಾಗುತ್ತಿದ್ದು, ಇನ್ನು ಮುಂದೆ ಇಂತಹ ಪ್ರಕರಣಗಳನ್ನು ದಾಖಲಿಸುವ ಪೂರ್ವದಲ್ಲಿ ಕಾನೂನಾತ್ಮಕವಾಗಿ ಪ್ರಾಥಮಿಕ ವಿಚಾರಣೆ ನಡೆಸಿ, ಸಂಬAಧಿಸಿದ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸುವುದು ಅತ್ಯವಶ್ಯವಾಗಿರುತ್ತದೆ ಎಂದು ಕರ್ನಾಟಕ ನೌಕರರ ಸಂಘದ ಭಟ್ಕಳ ತಾಲೂಕಾಧ್ಯಕ್ಷ ಮೋಹನ ನಾಯ್ಕ ಹೇಳಿದರು. 
ಅವರು ಇತ್ತೀಚಿಗೆ ಎಸಿ, ತಹಸೀಲ್ದಾರ, ಪುರಸಭೆ ಮುಖ್ಯಾಧಿಕಾರಿಗಳ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಈ ಕಾನೂನಿನ ದುರುಪಯೋಗವಾಗದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಉಪವಿಭಾಗೀಯ ಹಾಗೂ ತಾಲೂಕ ದಂಡಾಧಿಕಾರಿಗಳ ಮೇಲೆ ಕಾನೂನು ಬಾಹೀರವಾಗಿ ಪ್ರಕರಣದ ದಾಖಲಿಸಿದಲ್ಲಿ ಆಡಳಿತದ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗುತ್ತದೆ. ಸಾಮಾನ್ಯ ಜನಾಂಗದ ಪ್ರಜೆಗಳು ಭೀತರಾಗಿ ಭಯದ ವಾತಾವರಣದಲ್ಲಿ ಜೀವಿಸುವ ಪರಿಸ್ಥಿತಿ ಭಟ್ಕಳದಲ್ಲಿ ಉದ್ಭವಿಸುವುದರಲ್ಲಿ ಯಾವುದೇ ಸಂಶಯವಿರುವದಿಲ್ಲ. ಆಡಳಿತ ವ್ಯವಸ್ಥೆಯ ಎಲ್ಲ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಆತ್ಮಸ್ಥೆರ್ಯ ಕಳೆದುಕೊಂಡು ಸಾರ್ವಜನಿಕರೊಂದಿಗೆ ಸಮಾನತೆ, ಸಹಭಾಗಿತ್ವ, ಭಾತೃತ್ವ, ಸಂವಿಧಾನಾತ್ಮಕ ಧೈಯಗಳ ಅಂಶಗಳನ್ನು ಆಡಳಿತದಲ್ಲಿ ಸಂಪೂರ್ಣ ಅನುಷ್ಠಾನ ಮಾಡಲು ಅಡ್ಡಿಯುಂಟಾಗುವ ಪರಿಸ್ಥಿತಿಯುಂಟಾಗುತ್ತಿದೆ. ಇತ್ತೀಚೆಗೆ ಹಲವು ಸುಳ್ಳು ಜಾತಿ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದನ್ನು ಅವಲೋಕಿಸಬಹುದಾಗಿದೆ. ಭಟ್ಕಳ ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿಗಳು ಎಲ್ಲ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಿರ್ಭಯ ಹಾಗೂ ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೋಡಬೇಕು. ಅಲ್ಲದೆ ಇತ್ತೀಚಿಗೆ ನಡೆದ ಪುರಸಭೆ ಹರಾಜು ಪ್ರಕ್ರಿಯೆಯಲ್ಲಿ ತಹಶೀಲ್ದಾರ ಹಾಗೂ ತಾಲೂಕ ದಂಡಾಧಿಕಾರಿಗಳು, ಶಿಷ್ಟಾಚಾರ ನಿಯಮದಂತೆ ಹಾಜರ ಇದ್ದರು. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ಯಾವುದೇ ಸಮುದಾಯದ ಜನರನ್ನು ಕೀಳರಿಮೆಯಿಂದ ಕಂಡಿಲ್ಲ. ಎಲ್ಲರನ್ನು ಸಂವಿಧಾನಾತ್ಮಕವಾಗಿ ಸಮಾನರನ್ನಾಗಿ ಪರಿಗಣಿಸಿ, ಕಾನೂನಾತ್ಮಕವಾಗಿ ಪ್ರಕ್ರಿಯೆಯನ್ನು ನಡೆಸಲಾಗಿರುತ್ತದೆ. ಜಾತಿ ಪ್ರಮಾಣ ಪತ್ರದ ನೈಜತೆ ಮತ್ತು ಅನೈಜತೆ ಕುರಿತಂತೆ ಸಕ್ಷಮ ಪ್ರಾಧಿಕಾರಿಗಳಿಂದ ಪರಿಶೀಲಿಸಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಿಕರಣವನ್ನು ನೀಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಮನವಿಯನ್ನು ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಅವರ ಮೂಲಕ ರಾಜ್ಯಪಾಲರಿಗೆ ನೀಡಲಾಯಿತು.
ಈ ಸಂದರ್ಬದಲ್ಲಿ ನೌಕರರ ಸಂಘದ ಪಧಾಧಿಕಾರಿಗಳಾದ ಪ್ರಕಾಶ ಶಿರಾಲಿ, ಗಣೇಶ ಹೆಗಡೆ, ಪಾಂಡು ನಾಯ್ಕ ತಹಸೀಲದಾರ ಎಸ್ ರವಿಚಂದ್ರ, ಮುಖ್ಯಾಧಿಕಾರಿ ರಾಧಿಕಾ ಎಸ್, ವೇಣು ಗೋಪಾಲ ಶಾಸ್ತಿç ಸೇರಿ ವಿವಿಧ ಇಲಾಖೆಯ ನೌಕರರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...