ಉತ್ತರಕೊಪ್ಪದಲ್ಲಿ ಸಿಲೆಂಡರ್ ಸ್ಪೋಟ; ಓರ್ವ ವ್ಯಕ್ತಿ ಗಂಭೀರ

Source: sonews | By Staff Correspondent | Published on 12th July 2019, 6:54 PM | Coastal News | |

•    ಭಟ್ಕಳ ತಾಲೂಕಿನ ಉತ್ತರಕೊಪ್ಪದಲ್ಲಿ ಗುರುವಾರ ರಾತ್ರಿ ನಡೆದ ಘಟನೆ

ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮಪಂಚಾಯತ್ ವ್ಯಾಪ್ತಿಯ ಉತ್ತರಕೊಪ್ಪ ಎಂಬಲ್ಲಿ ಗುರುವಾರ ರಾತ್ರಿ ಅಡುಗೆ ಅನಿಲ ಸಿಲೆಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಮನೆಯ ಸಂಪೂರ್ಣವಾಗಿ ದ್ವಂಸಗೊಂಡಿದೆ. 

ಸಿಲೆಂಡರ್ ಸ್ಪೋಟಕ್ಕೆ ಗಾಯಗೊಂಡ ವ್ಯಕ್ತಿಯನ್ನು ಉತ್ತರಕೊಪ್ಪದ ನಿವಾಸಿ ಅನೀಸ್ ಆಂಟೋನಿ ಎಂದು ಗುರುತಿಸಲಾಗಿದ್ದು ಸಧ್ಯ ಮುರುಢೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪುರಸಭೆ ಸದಸ್ಯ ಪಾಸ್ಕಲ್ ಗೋಮ್ಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಆಂಟೋನಿ ದಿನಗೂಲಿ ಮಾಡಿಕೊಂಡು ಕುಟುಂಬವನ್ನು ನಡೆಸುತ್ತಿದ್ದು ಇವರಿಗೆ ತಾಲೂಕಾಡಳಿತ ಹಾಗೂ ಭಾರತ್ ಗ್ಯಾಸ್ ಕಂಪನಿಯು ಪರಿಹಾರ ನೀಡಿ ಚಿಕಿತ್ಸೆಗೆ ಸಹಕಾರಿಯಾಗಬೇಕೆಂದು ಅವರೂ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ಘಟನಾ ಸ್ಥಳಕ್ಕೆ ಗ್ರಾಮಲೆಕಾಧಿಕಾರಿ ಹಾಗೂ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ತಹಸಿಲ್ದಾರ ಕಚೇರಿಗೆ ವರದಿಯನ್ನು ಸಲ್ಲಿದ್ದಾರೆ ಎಂದು ತಿಳಿದುಬಂದಿದೆ.

Read These Next

ಭಟ್ಕಳ ಅಧಿಕಾರಿಗಳ ರಾಜಾಶ್ರಯದಲ್ಲಿ ಮಿತಿಮೀರಿದ ಗಣಿಗಾರಿಕೆ! ಇದ್ದೊಂದು ಗುಡ್ಡವನ್ನೂ ಕೊರೆದರು; ದನಿ ಕಳೆದುಕೊಳ್ಳುತ್ತಿರುವ ಜನರು

ಭಟ್ಕಳಕ್ಕೆ ಸಹಾಯಕ ಆಯುಕ್ತರಾಗಿ, ತಹಸೀಲ್ದಾರರಾಗಿ ಹಲವಾರು ಅಧಿಕಾರಿಗಳು ಬಂದು ಹೋಗಿದ್ದಾರೆ. ಯಾವುದೇ ಸಹಾಯಕ ಆಯುಕ್ತರು, ...