ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

Source: so news | Published on 17th September 2019, 3:12 PM | Coastal News | |

ಕಾರವಾರ: ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯ ಮೂಲಕ ಕೊಡಗು ಸೈನಿಕ ಶಾಲೆಯ  6ನೇ ಮತ್ತು 9ನೇ ತರಗತಿಗಳಿಗೆ 2020-21 ಸಾಲಿನ ದಾಖಲಾತಿಗಾಗಿ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.

6ನೇ ತರಗತಿಗೆ ಎಪ್ರಿಲ್ 1, 2008 ರಿಂದ ಮಾರ್ಚ್ 31, 2010 ರೊಳಗೆ (ಎರಡೂ ದಿನಗಳು ಸೇರಿ) ಅಭ್ಯರ್ಥಿಯು ಜನಿಸಿರಬೇಕು, 9ನೇ ತರಗತಿಗೆ ಎಪ್ರಿಲ್ 1, 2005 ರಿಂದ ಮಾರ್ಚ್ 31, 2007 ರೊಳಗೆ (ಎರಡೂ ದಿನಗಳು ಸೇರಿ) ಅಭ್ಯರ್ಥಿಯು ಜನಿಸಿರಬೇಕು ಹಾಗೂ ಮಾನ್ಯತೆ ಪಡೆದ ಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕರು ಅರ್ಜಿ ಸಲ್ಲಿಸಬಹುದು.  

6ನೇ ತರಗತಿಗೆ 85 ಸೀಟುಗಳು, 9ನೇ ತರಗತಿಗೆ 30 ಸೀಟುಗಳಿವೆ. ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ, ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಗಳಿಸಿದ ಗರಿಷ್ಠ ಅಂಕಗಳು ಮತ್ತು ವೈದ್ಯಕೀಯ ತಪಾಸಣೆಯ ಮೇರೆಗೆ ಆಯ್ಕೆಯನ್ನು ಮಾಡಲಾಗುತ್ತದೆ.

ಪರಿಶಿಷ್ಟ ಜಾತಿ ಶೇ.15, ಪರಿಶಿಷ್ಟ ಪಂಗಡ ಶೇ.7.5, ರಕ್ಷಣಾ ಇಲಾಖೆ ಶೇ.25 (ಸೇವೆಸಲ್ಲಿಸುತ್ತಿರುವ, ಸೇವೆಯಿಂದ ನಿವೃತ್ತಿ ಹೊಂದಿರುವ ಯೋಧರ ಮಕ್ಕಳಿಗೆ) ರಷ್ಟು ಸೀಟುಗಳ ಮೀಸಲಾತಿ ಹಾಗೂ ಸಾಮಾನ್ಯ ವರ್ಗ, ರಕ್ಷಣಾ ಇಲಾಖೆಯವರಿಗೆ ರೂ. 400 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೂ. 250 ನೊಂದಣಿ ಶುಲ್ಕ ಇರುತ್ತದೆ.  

ಪರೀಕ್ಷಾ ಕೇಂದ್ರಗಳು: 

6ನೇ ತರಗತಿ- ಸೈನಿಕ ಶಾಲೆ ಕೊಡಗು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು-ನಗರ, ಚಿತ್ರದುರ್ಗ, ಬೈಲಕುಪೆ(ಜಿಲ್ಲೆ ಮೈಸೂರು), 9ನೇ ತರಗತಿ-ಸೈನಿಕ ಶಾಲೆ ಕೊಡಗು ಈ ಸ್ಥಳಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. 

6ನೇ ಹಾಗೂ 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿಬಿಎಸ್‍ಸಿ ಪಠ್ಯಕ್ರಮದ ಆಧಾರದಲ್ಲಿರುತ್ತದೆ.

ಪ್ರವೇಶ ಪರೀಕ್ಷೆ 2020 ಜನೇವರಿ 5 ರಂದು ನಡೆಯಲಿದ್ದು ನೊಂದಣಿ ಮಾಡಲು ಸೆಪ್ಟಂಬರ 23, 2019 ಕೊನೆಯ ದಿನವಾಗಿದೆ. ಆನ್‍ಲೈನ್ ಅರ್ಜಿ, ನೊಂದಣಿ, ಅರ್ಜಿ ಶುಲ್ಕಗಳಿಗೆ ವೆಬ್‍ಸೈಟ್ sainikschooladmission.in ಸಂಪರ್ಕಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8510055577, 8510044411, 08276-278963 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

Read These Next

ಭಟ್ಕಳ ತಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸೇರಿದಂತೆ 45 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

ಭಟ್ಕಳ: ಉತ್ತರಕನ್ನಡ ಜಿಲ್ಲಾದ್ಯಂತ ಕೊರೋನ ಸೋಂಕಿನ ಆತಂಕ ಹೆಚ್ಚಾಗುತ್ತಲೆ ಇದ್ದು ಸೋಮವಾರ 80ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್-19 ...

ಕೊರೊನಾ ಸೋಂಕು ಎರಡನೇ ಹಂತ ದಾಟದಂತೆ ಕ್ರಮ ವಹಿಸೋಣ# #ನಾನು ಬದುಕಬೇಕೆಂಬ ಭಾವನೆ ಮೊದಲು ಬರಬೇಕು : ಕೆ.ಎಸ್.ಈಶ್ವರಪ್ಪ

ಕೊರೊನಾ ಸೋಂಕು ಎರಡನೇ ಹಂತ ದಾಟದಂತೆ ಕ್ರಮ ವಹಿಸೋಣ# #ನಾನು ಬದುಕಬೇಕೆಂಬ ಭಾವನೆ ಮೊದಲು ಬರಬೇಕು : ಕೆ.ಎಸ್.ಈಶ್ವರಪ್ಪ